ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಕ್ಕಳ ಕಳ್ಳನೆಂದು ಭಾವಿಸಿ ಮಗುವಿನ ತಂದೆಯನ್ನೇ ಥಳಿಸಿದ ಸಾರ್ವಜನಿಕರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ.06: ಮಕ್ಕಳ ಕಳ್ಳ ಎಂದು ಭಾವಿಸಿ ಮಗುವಿನ ಅಪ್ಪನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಈ ಘಟನೆ ಸಂಭವಿಸಿದೆ.

ಮಗುವಿನ ಜೊತೆ ಹೋಟೆಲ್ ನಲ್ಲಿ ಕೂತಿದ್ದ ವ್ಯಕ್ತಿಯನ್ನು ನೋಡಿದ ಸ್ಥಳೀಯರು ಅನುಮಾನಗೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಅನುಮಾನಸ್ಪದವಾಗಿ ಉತ್ತರಿಸಿದ್ದಾನೆ. ಅಷ್ಟೇ ಅಲ್ಲ ಆತ ವಿಪರೀತವಾಗಿ ಕುಡಿದಿದ್ದ.

ಮಕ್ಕಳ ಕಳ್ಳಿ ಎಂದು ಮಹಿಳೆಗೆ ಹಿಗ್ಗಾಮುಗ್ಗಾ ಥಳಿತಮಕ್ಕಳ ಕಳ್ಳಿ ಎಂದು ಮಹಿಳೆಗೆ ಹಿಗ್ಗಾಮುಗ್ಗಾ ಥಳಿತ

ಇದನ್ನೆಲ್ಲಾ ಗಮನಿಸಿದ ಸಾರ್ವಜನಿಕರು ಈತ ಮಕ್ಕಳ ಕಳ್ಳನಿರಬೇಕೆಂದು ಭಾವಿಸಿ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಠಾಣಾ ಪೊಲೀಸರು, ವಿಚಾರಣೆ ನಡೆಸಿದಾಗ ಆತ ಆ ಮಗುವಿನ ತಂದೆ ಎಂಬುದು ಖಚಿತವಾಗಿದೆ. ಕೊನೆಗೆ ಪೊಲೀಸರು ಮಗುವಿನ ತಂದೆಯನ್ನು ರಕ್ಷಿಸಿದ್ದಾರೆ.

Public has beaten father of the child in Ujire

ಇಂತಹ ಘಟನೆಗಳು ಆಗಾಗ ರಾಜ್ಯದ ಕೆಲವೆಡೆ ಸಂಭವಿಸುತ್ತಿದ್ದು, ಪೊಲೀಸರು ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಯತ್ನಿಸುತ್ತಿದ್ದಾರೆ. ಆದರೂ ಬಹುತೇಕರು ಸುಳ್ಳು ವದಂತಿಗಳನ್ನು ನಂಬಿ ಮಕ್ಕಳ ಕಳ್ಳ ಎಂದು ಭಾವಿಸಿ ಅಮಾಯಕರನ್ನು ಥಳಿಸಿ, ಕೊಲ್ಲುವ ಪ್ರಸಂಗಗಳು ನಡೆಯುತ್ತಲೇ ಇವೆ.

Public has beaten father of the child in Ujire

ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲ, ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ರಾಜಸ್ಥಾನದಲ್ಲಿಯೂ ಮಕ್ಕಳ ಕಳ್ಳ ಎಂದು ಭಾವಿಸಿ ಅಮಾಯಕರನ್ನು ಹೊಡೆದು, ಕಂಬಕ್ಕೆ ಕಟ್ಟಿ ಹಾಕಿ ಥಳಿಸುವ ಘಟನೆಗಳು ಹೆಚ್ಚುತ್ತಲಿವೆ.

English summary
Public has beaten father of the child. Public thinks he is a children thief and beaten him. Incident occurred in Ujire, Belthangady taluk in Dakshina Kannada District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X