ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕತುವಾ ಅತ್ಯಾಚಾರ ಖಂಡಿಸಿ ಪ್ರತಿಭಟನೆ ವೇಳೆ ಪೊಲೀಸ್ ಜೀಪಿಗೆ ಕಲ್ಲು

|
Google Oneindia Kannada News

ಮಂಗಳೂರು ಏಪ್ರಿಲ್ 16: ಜಮ್ಮು ಮತ್ತು ಕಾಶ್ಮೀರದ ಕತುವಾ ಜಿಲ್ಲೆಯಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಪೊಲೀಸರಿಗೆ ಘೇರಾವ್ ಹಾಕಿ ಜೀಪಿಗೆ ಕಲ್ಲೆಸೆದ ಘಟನೆ ಸೋಮವಾರ ನಡೆದಿದೆ.

ಕೇರಳ ಗಡಿಭಾಗಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಆನೆಕಲ್ಲು ಎಂಬಲ್ಲಿ ಈ ಘಟನೆ ನಡೆದಿದೆ.

ಅತ್ಯಾಚಾರಿಗಳ ಕುಟುಂಬಕ್ಕೆ ಸಾಂತ್ವನ ಎಂದು ಕಾಂಗ್ರೆಸ್ ನಾಯಕಿ ಎಡವಟ್ಟು ಅತ್ಯಾಚಾರಿಗಳ ಕುಟುಂಬಕ್ಕೆ ಸಾಂತ್ವನ ಎಂದು ಕಾಂಗ್ರೆಸ್ ನಾಯಕಿ ಎಡವಟ್ಟು

ಜಮ್ಮು ಮತ್ತು ಕಾಶ್ಮೀರದ ಅತ್ಯಾಚಾರ ಘಟನೆ ಖಂಡಿಸಿ ಕಾಸರಗೋಡು ಜಿಲ್ಲೆಯಲ್ಲಿ ಹರತಾಳಕ್ಕೆ ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಬಲವಂತವಾಗಿ ರಸ್ತೆ ಸಂಚಾರ ಬಂದ್ ಮಾಡಿದ್ದರು. ಕರ್ನಾಟಕ ಗಡಿಭಾಗದ ರಸ್ತೆಗಳಿಗೆ ಕಲ್ಲು ಅಡ್ಡ ಇಟ್ಟು ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದರು.

protesters throw stone at police jeep

ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಡಿಭಾಗದ ರಸ್ತೆಗೆ ಹಾಕಿದ್ದ ತಡೆ ತೆರವುಗೊಳಿಸಲು ಮುಂದಾಗಿದ್ದರು. ಇದನ್ನು ಇದನ್ನು ವಿರೋಧಿಸಿದ ಸ್ಥಳೀಯ ಮುಸ್ಲಿಂ ಸಂಘಟನೆಯ ಕಾರ್ಯಕರ್ತರು ಪೊಲೀಸರ ಜೀಪಿಗೆ ಕಲ್ಲೆಸೆದು ಮುತ್ತಿಗೆ ಹಾಕಿದ್ದಾರೆ.

ಕತುವಾ ಅತ್ಯಾಚಾರ ಖಂಡಿಸಿ ದೇಶ್ಯಾದ್ಯಂತ ತೀವ್ರಗೊಂಡ ಹೋರಾಟ:ಚಿತ್ರಗಳುಕತುವಾ ಅತ್ಯಾಚಾರ ಖಂಡಿಸಿ ದೇಶ್ಯಾದ್ಯಂತ ತೀವ್ರಗೊಂಡ ಹೋರಾಟ:ಚಿತ್ರಗಳು

ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿ ಅಲ್ಲಿಂದ ತೆರಳುವಂತೆ ಎಚ್ಚರಿಸಿದ್ದಾರೆ. ಜೀಪಿನ ಮೇಲೆ ಕೆಸರು ಎರಚಿದ್ದಾರೆ. ಉಳಿದ ಪೊಲೀಸರನ್ನು ಜೀಪಿನಿಂದ ಇಳಿಯಲೂ ಬಿಡದೆ ಸ್ಥಳದಿಂದ ಹಿಂದಕ್ಕೆ ಅಟ್ಟಿದ್ದಾರೆ. ನೀವ್ಯಾಕೆ ಬಂದಿದ್ದೀರಿ? ಕೇರಳದ ಪೊಲೀಸರು ಬರಲಿ ಎಂದು ಗದ್ದಲ ನಡೆಸಿದ್ದಾರೆ.

protesters throw stone at police jeep

ಪೊಲೀಸರಿಗೆ ಮುತ್ತಿಗೆ ಹಾಕಿದ ವಿಡಿಯೊ ಈಗ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

English summary
People belongs to some Muslim organisation protesting over kathua rape incident in the border to kerala near vitla, throw stone at police jeep on Monday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X