ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುರತ್ಕಲ್ ಟೋಲ್ ಗೇಟ್ ಮುಚ್ಚುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್. 26: ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿರುದ್ಧದ ಹೋರಾಟ ಮಂಗಳೂರಿನಲ್ಲಿ ತೀವ್ರಗೊಳ್ಳುತ್ತಿದೆ. ಮಂಗಳೂರು ಹೊರವಲಯದ ಸುರತ್ಕಲ್ ನ ಎನ್ಐಟಿಕೆ ಸಮೀಪ ನಿರ್ಮಿಸಲಾಗಿರುವ ಟೋಲ್ ಗೇಟ್ ಅಕ್ರಮ ಮತ್ತು ಅವೈಜ್ಞಾನಿಕ ಎಂದು ಅರೋಪಿಸಲಾಗಿದೆ.

ಈ ಟೋಲ್ ಗೇಟ್ ಮುಚ್ಚಬೇಕು ಹಾಗು ನಂತೂರಿನಿಂದ ಸುರತ್ಕಲ್ ವರೆಗೆ ಹೆದ್ದಾರಿ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿ ಕೆಲ ಸಂಘಟನೆಗಳು ಹೋರಾಟ ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಇಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತು. ಪ್ರತಿಭಟನಾ ಪಾದಯಾತ್ರೆಗೆ ಕೂಳೂರಿನಲ್ಲಿ ಚಾಲನೆ ನೀಡಲಾಯಿತು .

Protest against Surathkal toll gate

ಟೋಲ್ ಗೇಟ್ ವಿರೋಧಿ‌ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮನಪಾ ಸದಸ್ಯರಾದ ದಯಾನಂದ ಶೆಟ್ಟಿ ರೇವತಿ ಪುತ್ರನ್, ಪುರುಷೋತ್ತಮ ಚಿತ್ರಾಪುರ ಮತ್ತಿತರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪಶ್ಚಿಮ ಬಂಗಾಳ ಬಂದ್: ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದ ಚಾಲಕರುಪಶ್ಚಿಮ ಬಂಗಾಳ ಬಂದ್: ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದ ಚಾಲಕರು

ನಂತೂರಿನಿಂದ ಸುರತ್ಕಲ್ ವರೆಗೆ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟಿದ್ದರೂ ತಲೆ ಕೆಡಿಸಿಕೊಳ್ಳದ ಖಾಸಗಿ ಸಂಸ್ಥೆ ಕೇವಲ ಟೋಲ್ ಸಂಗ್ರಹ ಮಾತ್ರ ಹಕ್ಕು ಎಂಬಂತೆ ವರ್ತಿಸುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

Protest against Surathkal toll gate

ಜೀತ ಪದ್ಧತಿ ಆರೋಪಿಗಳನ್ನು ಗಡಿಪಾರು ಮಾಡಲು ಆಗ್ರಹಿಸಿ ಪ್ರತಿಭಟನೆಜೀತ ಪದ್ಧತಿ ಆರೋಪಿಗಳನ್ನು ಗಡಿಪಾರು ಮಾಡಲು ಆಗ್ರಹಿಸಿ ಪ್ರತಿಭಟನೆ

ಸುರತ್ಕಲ್ ಕಿನ್ನಿಗೋಳಿ ವಲಯ ಬಸ್ ಮಾಲೀಕರ ಸಂಘ, ಕಿನ್ನಿಗೋಳಿ ವಲಯ ಲಾರಿ ಮಾಲಕರ ಸಂಘ, ತ್ರಿಚಕ್ರ ಟೆಂಪೊ ಚಾಲಕರ ಮಾಲಕರ ಸಂಘ ಸುರತ್ಕಲ್, ಗೂಡ್ಸ್ ಟೆಂಪೊ ಚಾಲಕರ ಸಂಘ ಸುರತ್ಕಲ್, ಸುರತ್ಕಲ್ ಆಟೋ ಚಾಲಕರ ಯೂನಿಯನ್, ಆನ್ ಲೈನ್ ಟ್ಯಾಕ್ಸಿ ಓನರ್ಸ್ ಅಸೋಸಿಯೇಶನ್,ನಾಗರಿಕ ಸಮಿತಿ ಕುಳಾಯಿ ಗೋಪಾಲಕೃಷ್ಣ ಭಜನಾ ಮಂದಿರ ಉರುಂದಾಡಿ, ನ್ಯೂ ಫ್ರೆಂಡ್ಸ್ ಸರ್ಕಲ್ ಕೃಷ್ಣಾಪುರ, ಟ್ರಾನ್ಸ್ ಪೋರ್ಟ್ ವರ್ಕರ್ಸ್ ಯೂನಿಯನ್, ಸುರತ್ಕಲ್, ಜಯ-ಕರ್ನಾಟಕ ಸುರತ್ಕಲ್, ಡಿವೈಎಫ್ಐ ಸುರತ್ಕಲ್ ವಲಯ ಸಹಿತ ಹಲವು ಸಂಘಟನೆಗಳ ಮುಖಂಡರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

English summary
Members of Toll gate Horata samithi of Managluru marched to the Surathkal toll plaza here on September 26. They staged protest against illegal toll collection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X