• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಬರಿಮಲೆಗೆ ಪಂದಳ ರಾಜಮನೆತನದವರು ಕಾಲಿಡುವುದಿಲ್ಲ: ವೈರಲ್ ಆದ ಪ್ರಕಟಣೆ

|
   Sabarimala Verdict : ಪಂದಳ ರಾಜಮನೆತನದಿಂದ ಬಂದ ಷಾಕಿಂಗ್ ಪ್ರಕಟಣೆ | Oneindia Kannada

   ಮಂಗಳೂರು,ಅಕ್ಟೋಬರ್ 05 : ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ಕಲ್ಪಿಸಿರುವ ಸುಪ್ರಿಂ ಕೋರ್ಟ್ ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಲು ಪಿಣರಾಯಿ ವಿಜಿಯನ್ ನೇತೃತ್ವದ ಸರಕಾರ ಹಿಂದೇಟು ಹಾಕಿದೆ.

   ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ಆದೇಶಿಸಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಅನುಷ್ಠಾನ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ ಕೇರಳ ಮುಖ್ಯಮಂತ್ರಿ ಆದೇಶಿಸಿದ್ದಾರೆ.

   ಶಬರಿಮಲೆ ಮಹಿಳೆಯರಿಗೆ ಪ್ರವೇಶ: ಇದು ವಿವಾದದ ಅಂತ್ಯವಲ್ಲ, ಆರಂಭ!

   ಆದರೆ ಈ ನಡುವೆ ಶಬರಿಮಲೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಒತ್ತಡ ಹೆ‌ಚ್ಚುತ್ತಿದೆ. ಸುಪ್ರೀಂ ಆದೇಶದ ವಿರುದ್ಧ ಪ್ರತಿಭಟನೆಗಳು ಅರಂಭವಾಗಿದೆ. ಈ ವಿಚಾರದಲ್ಲಿ ರಾಜಕೀಯ ಕೂಡ ಆರಂಭವಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಬಿಜೆಪಿ ಹಾಗೂ ಕಾಂಗ್ರೆಸ್ ವಿರೋಧಿಸಿವೆ.

   ಹಿಂದೂಗಳ ನಂಬಿಕೆಯ ಪರ ನಿಲ್ಲುವುದಾಗಿ ಕಾಂಗ್ರೆಸ್ ತನ್ನ ನಿಲುವನ್ನು ಘೋಷಿಸಿದೆ. ಶಬರಿಮಲೆ ಕುರಿತು ಸುಪ್ರಿಂ ಕೋರ್ಟ್ ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಲು ಕೇರಳ ಸರಕಾರ ಹಿಂದೇಟು ಹಾಕುತ್ತಿರುವುದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.

   ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ, ಈ ದೇಗುಲಗಳ ಕಥೆ ಏನು?

   ಈ ನಡುವೆ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಕೇರಳ ಸೇರಿದಂತೆ ದೇಶದ ಇತರೆಡೆಗೆ ಪ್ರತಿಭಟನೆಗಳು ಆರಂಭವಾಗಿದೆ. ಕರ್ನಾಟಕದಲ್ಲು ಪ್ರತಿಭಟನೆ ಗಳು ನಡೆಯತೊಡಗಿದೆ. ಮಂಗಳೂರಿನಲ್ಲಿಯೋ ಹೋರಾಟಕ್ಕೆ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ಮುಂದೆ ಓದಿ...

    ಭಕ್ತರಿಂದ ಬೃಹತ್ ಪ್ರತಿಭಟನೆ

   ಭಕ್ತರಿಂದ ಬೃಹತ್ ಪ್ರತಿಭಟನೆ

   ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕೆಂದು ಆಗ್ರಹಿಸಿ ಈಗಾಗಲೇ ಕೇರಳದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರಿಂದ ಬೃರಹತ್ ಪ್ರತಿಭಟನೆ ನಡೆದಿದ್ದರೂ ಕೇರಳ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ.

   ಅಯ್ಯಪ್ಪ ಸ್ವಾಮಿ ಭಕ್ತರು ಕೇರಳದಲ್ಲಿ ಮಾತ್ರವಲ್ಲ, ದೇಶದ ಮೂಲೆ ಮೂಲೆಯಲ್ಲೂ ಇದ್ದಾರೆ.ಪ್ರತಿಯೊಂದು ಭಾಗದಿಂದಲೂ ಅಯ್ಯಪ್ಪ ಸ್ವಾಮಿ ಭಕ್ತರು ಈಗ ಒಟ್ಟಾಗಲೇಬೇಕಿದೆ ಎಂಬ ಕೂಗು ಬಲ ಪಡೆಯುತ್ತಿದೆ.

    ಪೂರ್ವ ಭಾವಿ ಸಭೆ

   ಪೂರ್ವ ಭಾವಿ ಸಭೆ

   ಅಯ್ಯಪ್ಪ ಸ್ವಾಮಿ ಭಕ್ತರು ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಯಾವ ರೀತಿ ಹೋರಾಟ ಮಾಡಬಹುದು ಎಂಬುವುದರ ಬಗ್ಗೆ ಚರ್ಚಿಸಲು ನಾಳೆ ಅಕ್ಟೋಬರ್ 6 ರಂದು ಸಂಜೆ ಮಂಗಳೂರಿನ ಸಂಘನಿಕೇತನದಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ಪೂರ್ವ ಭಾವಿ ಸಭೆ ಕೆರೆಯಲಾಗಿದೆ.

   ಊರಿನ ಪ್ರತಿಯೊಬ್ಬ ಅಯ್ಯಪ್ಪಸ್ವಾಮಿ ಭಕ್ತರು ತಪ್ಪದೇ ಭಾಗವಹಿಸಿ ಮಂದಿನ ಹೋರಾಟದ ರೂಪುರೇಷೆ ತಯಾರಿಸಲು ಸಹಕರಿಸಬೇಕಾಗಿ ವಿನಂತಿಸಲಾಗಿದೆ.

   ಶಬರಿಮಲೆ ದೇವಸ್ಥಾನದ ವಿವಾದ: ಕಾನೂನು ಹೋರಾಟದ ಟೈಮ್‌ಲೈನ್

    ಪಂದಳ ರಾಜ ಮನೆತನದ ಪ್ರಕಟಣೆ

   ಪಂದಳ ರಾಜ ಮನೆತನದ ಪ್ರಕಟಣೆ

   ಈ ನಡುವೆ ಪಂದಳ ರಾಜ ಮನೆತನ ಪ್ರಕಟಣೆ ಹೊರಡಿಸಿದೆ. ಈ ಕುರಿತ ಪ್ರಕಟಣಾ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

   ಶಬರಿ ಮಲೆ ದೇವಸ್ಥಾನದ ಹದಿನೆಂಟು ಮೆಟ್ಟಿಲುಗಳನ್ನು ದಾಟಿ ಒಬ್ಬಳೇ ಒಬ್ಬ ಯುವತಿ ಒಳ ನಡೆದರೂ ಪಂದಳ ರಾಜರ ಅರಮನೆಯಲ್ಲಿರುವ ಆಭರಣದ ಪೆಟ್ಟಿಗೆ ಮುಂದೆಂದೂ ಶಬರಿ ಮಲೆಯ ಸನ್ನಿಧಾನಕ್ಕೆ ಬರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಸುತ್ತೋಲೆ ಹೊರಡಿಸಿದೆ

   ಸುತ್ತೋಲೆ ಹೊರಡಿಸಿದೆ

   ಅಷ್ಟೇ ಅಲ್ಲ, ಪ್ರಕಣೆಯಲ್ಲಿ ದೇವಸ್ಥಾನವು ಸರಕಾರದ ಸೊತ್ತಾಗಿರಬಹುದು. ಆದರೆ ಅಯ್ಯಪ್ಪನಿಗೆ ಸಂಬಂಧಪಟ್ಟ ಆಭರಣಗಳು ನಮ್ಮ ಕುಟುಂಬದ ಸ್ವತ್ತಾಗಿರುತ್ತದೆ. ಅದನ್ನು ಬಲವಂತವಾಗಿ ಯಾರೂ ತರಿಸಿಕೊಳ್ಳಲಾಗುವುದಿಲ್ಲ.

   ಹೆಂಗಸರು ಪ್ರವೇಶಿಸುವ ಶಬರಿಮಲೆಗೆ ಇನ್ನು ಮುಂದೆ ಪಂದಳ ರಾಜಮನೆತನದವರು ಕಾಲಿಡುವುದಿಲ್ಲ ಎಂಬ ಪ್ರಕಟಣೆಯ ಮೂಲಕ ಕರಾರಾಗಿ ಪ್ರಕಟಿಸುತ್ತೇವೆ ಎಂದು ಸರ್ಕಾರಕ್ಕೂ ದೇವಸ್ಥಾನದ ಆಡಳಿತ ಮಂಡಳಿಗೂ ಸುತ್ತೋಲೆಯನ್ನು ಕಳಿಸಿದ್ದಾರೆ ಎನ್ನಲಾಗಿದೆ.

   ಶಬರಿಮಲೆ, ಸುಪ್ರೀಂ ತೀರ್ಪು: ಹೆಚ್ಚುತ್ತಿರುವ ಒತ್ತಡ, ಅಡಕತ್ತರಿಯಲ್ಲಿ ಪಿಣರಾಯಿ ಸರಕಾರ

    ಕೇರಳ ಸರಕಾರ ಸ್ಪಷ್ಟಪಡಿಸಿಲ್ಲ

   ಕೇರಳ ಸರಕಾರ ಸ್ಪಷ್ಟಪಡಿಸಿಲ್ಲ

   ಇಷ್ಟಾಗಿಯೂ ತೀರ್ಪನ್ನು ಕಡ್ಡಾಯಗೊಳಿಸಿದರೆ ಶಬರಿಮಲೆಯ ತಂತ್ರಿಗಳೂ ಸಾಮೂಹಿಕವಾಗಿ ಪದತ್ಯಾಗ ಮಾಡುವುದರೊಂದಿಗೆ ಇನ್ನುಮುಂದೆ ಶಬರಿಮಲೆಗೂ ಬರುವುದಿಲ್ಲ ಎಂದು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

   ಆದರೆ ಈ ಪ್ರಕಟಣೆಯ ಬಗ್ಗೆ ಕೇರಳ ಸರಕಾರ ಈವರೆಗೆ ಸ್ಪಷ್ಟಪಡಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಪ್ರಕಟಣಾ ಪತ್ರದ ಬಗ್ಗೆ ಪಂದಳ ರಾಜ ಮನೆತನ ಸ್ಪಷ್ಟ ಪಡಿಸಬೇಕಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Protest against Sabarimala verdict all over Kerala and other parts of Karnataka. Pandalam royal family also protest against Sabarimala verdict. the Pandalam royal family has claimed that if any women of all age enter Sabarimala temple then they will not enter temple anymore.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more