ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೃಷಿಕರಿಗೆ ಎಚ್ ಪಿಸಿಎಲ್ ನಿಂದ ಮೋಸ:ಪ್ರತಿಭಟನೆ

|
Google Oneindia Kannada News

ಮಂಗಳೂರು, ಮೇ 06:ಎಚ್ ಪಿಸಿಎಲ್ ಗ್ಯಾಸ್ ಲೈನ್ ಗಾಗಿ ಜಮೀನು ಬಿಟ್ಟು ಕೊಟ್ಟ ಕೃಷಿಕರಿಗೆ ಕಂಪೆನಿ ಮೋಸ ಮಾಡಲು ಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಎಚ್ ಪಿಸಿಎಲ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಪರಪ್ಪು ಎಂಬಲ್ಲಿ ಪ್ರತಿಭಟನೆ ನಡೆದಿದೆ.

ಎಚ್ ಪಿಸಿಎಲ್ ಗ್ಯಾಸ್ ಲೈನ್ ಗಾಗಿ ಸ್ಥಳೀಯ ಕೃಷಿಕರು ತಮ್ಮ ಕೃಷಿ ಭೂಮಿಯನ್ನು ಬಿಟ್ಟು ಕೊಟ್ಟಿದ್ದು, ಒಪ್ಪಂದದ ಪ್ರಕಾರ ಎಚ್ ಪಿಸಿಎಲ್ ಅಧಿಕಾರಿಗಳು ಭೂ ಮಾಲೀಕರಿಗೆ ಉದ್ಯೋಗದ ಭರವಸೆ ನೀಡಿದ್ದರು.ಅದರಂತೆಯೇ ಸಂಸ್ಥೆ ಕೆಲಸವೂ ನೀಡಿತ್ತು.ಆದರೆ ಈಗ ಏಕಾಏಕಿ ಕಂಪೆನಿ ಕೆಲಸಗಾರರನ್ನು ತೆಗೆದುಹಾಕಲು ಹೊರಟಿದೆ ಎಂದು ಆರೋಪಿಸಲಾಗಿದೆ.

ಮುಂಬೈಯಲ್ಲಿ 50,000 ರೈತರಿಂದ ಬೃಹತ್ ಪ್ರತಿಭಟನೆಮುಂಬೈಯಲ್ಲಿ 50,000 ರೈತರಿಂದ ಬೃಹತ್ ಪ್ರತಿಭಟನೆ

ಕಂಪೆನಿ ಮೋಸದಿಂದ ಬೇಸತ್ತ ಕೆಲಸಗಾರರು ಎಚ್ ಪಿಸಿಎಲ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಕಾರ್ಮಿಕರ ಪ್ರತಿಭಟನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕೂಡ ಬೆಂಬಲ ಸೂಚಿಸಿದ್ದು, ಕಂಪೆನಿ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸೋದಾಗಿ ಭರವಸೆ ನೀಡಿದ್ದಾರೆ.

Protest against HPCL in Belthangady

 ದ್ರೋಣನ ಸಾವಿನ ತನಿಖೆಯಾಗಲಿ:ಅರಮನೆ ಮುಂದೆ ಮಲಗಿ ವಾಟಾಳ್ ಪ್ರತಿಭಟನೆ ದ್ರೋಣನ ಸಾವಿನ ತನಿಖೆಯಾಗಲಿ:ಅರಮನೆ ಮುಂದೆ ಮಲಗಿ ವಾಟಾಳ್ ಪ್ರತಿಭಟನೆ

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಗ್ಯಾಸ್ ಪೈಪ್ ಲೈನ್ ಹಾದು ಹೋಗಿದ್ದು, ಸಂತ್ರಸ್ತ ಕೃಷಿಕರಿಗೆ ಕಂಪನಿ ಕೆಲಸ ಕೊಟ್ಟು,ಇದೀಗ ಕೆಲಸದಿಂದ ತೆಗೆದುಹಾಕಲು ಷಡ್ಯಂತ್ರ ರೂಪಿಸಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

English summary
Employees of HPCL staged protest against in front of office in Gerukatte near Belthagadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X