ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಎ ವಿರುದ್ಧ ಪ್ರತಿಭಟನೆ: ಮಂಗಳೂರು ಪೊಲೀಸರ ಗುಂಡಿಗೆ ಇಬ್ಬರು ಬಲಿ

|
Google Oneindia Kannada News

Recommended Video

ನಿಮಗೆ ನಿಜಕ್ಕೂ CAB ಅಂದ್ರೆ ಏನು ಅಂತ ಗೊತ್ತಾ..? | Oneindia Kannada

ಮಂಗಳೂರು, ಡಿಸೆಂಬರ್ 19: ನಗರದಲ್ಲಿ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸರ ಶೂಟೌಟ್‌ನಲ್ಲಿ ಇಬ್ಬರು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ.

ಮಂಗಳೂರು ಕದ್ರಿ ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರು ಮತ್ತು ನಗರ ಪೊಲೀಸ್ ಆಯುಕ್ತ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಮುಖಂಡರು ಈ ವಿಷಯವನ್ನು ಬಹಿರಂಗಪಡಿಸಿದರು.

ಕಂದಕ್ ನಿವಾಸಿ ಜಲೀಲ್, ಬೆಂಗ್ರೆ ನಿವಾಸಿ ನೌಶೀನ್ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಸುದ್ದಿಗೋಷ್ಠಿಯಲ್ಲಿ ಧಾರ್ಮಿಕ ಮುಖಂಡರು ಒತ್ತಾಯಿಸಿದ್ದಾರೆ.

Protest Against CAA: Mangaluru Police Shoot Down Two Protesters

ಪ್ರತಿಭಟನಾಕಾರರು ಶಾಂತಿ ಕಾಪಾಡಬೇಕೆಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮನ್ಸೂದ್ ಮನವಿ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಮಂಗಳೂರು ಪೊಲೀಸರ ಫೈರಿಂಗ್, ಪೊಲೀಸ್ ಆಯುಕ್ತ ಏನು ಹೇಳುತ್ತಾರೆ?ಮಂಗಳೂರು ಪೊಲೀಸರ ಫೈರಿಂಗ್, ಪೊಲೀಸ್ ಆಯುಕ್ತ ಏನು ಹೇಳುತ್ತಾರೆ?

ಕೆಲವು ಹೊತ್ತಿನ ಮುಂಚೆಯಷ್ಟೆ ಮಂಗಳೂರು ಪೊಲೀಸ್ ಆಯುಕ್ತ ಹರ್ಷಾ ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸರ ಶೂಟೌಟ್‌ನಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ, ಇಬ್ಬರ ಸ್ಥಿತಿ ಗಂಭೀರವಾಗಿದೆ. ಯಾರೂ ಮೃತಪಟ್ಟಿಲ್ಲವೆಂದು ಹೇಳಿದ್ದರು. ಆದರೆ ಇಬ್ಬರು ಪೊಲೀಸರ ಗುಂಡೇಟಿನಿಂದ ಮೃತಪಟ್ಟಿರುವುದು ಇದೀಗ ಖಚಿತವಾಗಿದೆ.

ಮಂಗಳೂರಿನಲ್ಲಿ ಸಿಡಿದ ಪೊಲೀಸ್ ಗುಂಡು; ಮೂವರ ಸ್ಥಿತಿ ಗಂಭೀರಮಂಗಳೂರಿನಲ್ಲಿ ಸಿಡಿದ ಪೊಲೀಸ್ ಗುಂಡು; ಮೂವರ ಸ್ಥಿತಿ ಗಂಭೀರ

ನಗರದ ರಾವ್‌ ಆಂಡ್ ರಾವ್ ವೃತ್ತದ ಬಳಿ ಪೊಲೀಸ್‌ ಶೂಟೌಟ್‌ ನಡೆದಿದೆ. ಆಯುಕ್ತ ಹರ್ಷ ನೀಡಿದ್ದ ಮಾಹಿತಿ ಪ್ರಕಾರ ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚಲು ಪ್ರಯತ್ನಿಸಿದ ಕಾರಣ ಶೂಟೌಟ್ ಮಾಡಲಾಗಿದೆ.

English summary
Protest against CAA and NRC turned violent in Mangaluru. Two protesters died in police shoot out. Muslim religion leaders confirm the news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X