ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಖರವಾಗಿ ಫಲಿತಾಂಶ ಹೇಳುವ ಜ್ಯೋತಿಷಿಗಳಿಗೆ 10 ಲಕ್ಷ ರೂ.ಬಹುಮಾನ: ಪ್ರೊ.ನರೇಂದ್ರ ನಾಯಕ್ ಘೋಷಣೆ

|
Google Oneindia Kannada News

Recommended Video

Lok Sabha Elections 2019: ಜ್ಯೋತಿಷಿಗಳಿಗೆ ಬಹಿರಂಗ ಸವಾಲೆಸೆದ ಪ್ರೊ ನರೇಂದ್ರ ನಾಯಕ್

ಮಂಗಳೂರು, ಮೇ 10:ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ದೇಶದ ಹಲವು ಭಾಗಗಳಲ್ಲಿ ಈಗಾಗಲೇ ಮುಗಿದಿದೆ. ಇನ್ನು ಕೇವಲ 2 ಹಂತದ ಮತದಾನ ಪ್ರಕ್ರಿಯೆ ಬಾಕಿ ಉಳಿದಿದೆ. ಇನ್ನು ಏನಿದ್ದರೂ ಚುನಾವಣೆಯಲ್ಲಿ ಯಾರು ಗೆಲ್ತಾರೆ, ಗೆದ್ದು ಯಾರು ಅಧಿಕಾರಕ್ಕೆ ಬರ್ತಾರೆ ಎಂಬ ಚರ್ಚೆ ಆರಂಭವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಕುರಿತು ಎಲ್ಲೆಡೆ ಕುತೂಹಲ ಇದ್ದೇ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಜ್ಯೋತಿಷಿಗಳ ಭವಿಷ್ಯದ ನುಡಿ, ಲೆಕ್ಕಾಚಾರಗಳಿಗೆ ಭಾರೀ ಡಿಮ್ಯಾಂಡ್. ಈ ನಡುವೆ ಮಂಗಳೂರಿನ ಖ್ಯಾತ ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಜ್ಯೋತಿಷಿಗಳಿಗೆ ನೇರ ಸವಾಲು ಹಾಕಿದ್ದಾರೆ.

ಕರಾವಳಿಯಲ್ಲಿ ಕಾಣಿಸುತ್ತಿಲ್ಲ ಬೆಟ್ಟಿಂಗ್ ಹವಾ, ಕಾರಣ ಇದೇನಾ?ಕರಾವಳಿಯಲ್ಲಿ ಕಾಣಿಸುತ್ತಿಲ್ಲ ಬೆಟ್ಟಿಂಗ್ ಹವಾ, ಕಾರಣ ಇದೇನಾ?

ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದ ಕುರಿತು ನಿಖರವಾಗಿ ಭವಿಷ್ಯ ನುಡಿದು ಅವರ ಹೇಳಿಕೆ, ಲೆಕ್ಕಾಚಾರ ಸರಿಯಾದರೆ ಅಂತಹ ಜ್ಯೋತಿಷಿಗಳಿಗೆ 10 ಲಕ್ಷ ರೂಪಾಯಿ ಬಹುಮಾನವನ್ನು ನೀಡುವುದಾಗಿ ನರೇಂದ್ರ ನಾಯಕ್ ಘೋಷಿಸಿದ್ದಾರೆ.

Prof.Narendra Nayak open challenged to astrologers for predict the result

ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿರುವ ನರೇಂದ್ರ ನಾಯಕ್ ಕಳೆದ ಮೂವತ್ತು ವರ್ಷಗಳಿಂದ ಜ್ಯೋತಿಷಿಗಳಿಗೆ ಈ ಸವಾಲನ್ನು ಹಾಕುತ್ತಲೇ ಇದ್ದಾರೆ. ಆದರೆ ಯಾವೊಬ್ಬ ಜ್ಯೋತಿಷಿಯು ಈವರೆಗೆ ಸವಾಲನ್ನು ಯಶಸ್ವಿಯಾಗಿ ಪೂರೈಸಿಲ್ಲ. ನರೇಂದ್ರ ನಾಯಕ್ ಈ ಬಾರಿ ಚುನಾವಣೆಗೆ ಸಂಬಂಧಿಸಿದಂತೆ 20 ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ 18 ಪ್ತಶ್ನೆಗಳಿಗೆ ಸರಿ ಉತ್ತರ ನೀಡಿದರೂ ಅವರಿಗೆ 10 ಲಕ್ಷ ರೂಪಾಯಿ ನಗದು ನೀಡುವೆ ಎಂದು ತಿಳಿಸಿದ್ದಾರೆ.

ಈ ಬಾರಿಯ ನರೇಂದ್ರ ನಾಯಕ್ ಅವರ ಪ್ರಶ್ನೆಗಳು ಇಂತಿವೆ...

1.ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಪಕ್ಷ ಯಾವುದು? ( ಉತ್ತರವು ನಿರ್ದಿಷ್ಟವಾಗಿರಬೇಕು, ಸಂಖ್ಯೆಯಲ್ಲಿರಬೇಕು. ಬಿಡಿಯಾಗಿ ಪಕ್ಷವೊಂದು ಬಹುಮತ ಪಡೆಯದಿದ್ದಲ್ಲಿ ಉತ್ತರ ತಪ್ಪು ಎಂದು ಪರಿಗಣನೆ.ಸರಳ ಬಹುಮತವಾಗಿ ಪಕ್ಷವು ಪಡೆಯುವ ಸ್ಥಾನಗಳ ಸಂಖ್ಯೆಯಲ್ಲಿ ಶೇ. 5ರಷ್ಟು ದೋಷಕ್ಕೆ ಅವಕಾಶ)

ಮೈಸೂರಿನ ಅಭ್ಯರ್ಥಿಗಳ ಮೇಲೂ ಬೆಟ್ಟಿಂಗ್:ಏನೆಲ್ಲಾ ಅಡವಿಟ್ಟಿದ್ದಾರೆ ಗೊತ್ತಾ?ಮೈಸೂರಿನ ಅಭ್ಯರ್ಥಿಗಳ ಮೇಲೂ ಬೆಟ್ಟಿಂಗ್:ಏನೆಲ್ಲಾ ಅಡವಿಟ್ಟಿದ್ದಾರೆ ಗೊತ್ತಾ?

2. ಕೆಳಗಿನ ಪಕ್ಷ ಗೆಲ್ಲುವ ಸ್ಥಾನಗಳನ್ನು ಸಂಖ್ಯೆಗಳಲ್ಲಿ ಮಾತ್ರ ಹೇಳಬೇಕು. ಪ್ರಮಾಣದ ವ್ಯಾಪ್ತಿಯಲ್ಲಿ ಅಲ್ಲ. (ಉದಾಹರಣೆಗೆ : ಒಂದು ಪಕ್ಷವು ಎ ಬಿ ಸಿಯಿಂದ ಡಿ ಇಗಳ ನಡುವೆ ಇರುತ್ತದೆ ಎಂದು ಹೇಳುವಂತಿಲ್ಲ. ಉತ್ತರವು ಸಂಖ್ಯೆಯಲ್ಲಿ ಮಾತ್ರ ಇರಬೇಕು).

3. ಕೆಳಗಿನ ಪ್ರತಿ ಅಭ್ಯರ್ಥಿ ಪಡೆಯಲಿರುವ ಮತಗಳ ಸಂಖ್ಯೆ (ಶೇ. 5 ದೋಷಕ್ಕೆ ಅವಕಾಶವಿದೆ. ಉತ್ತರ ಪ್ರಮಾಣದ ವ್ಯಾಪ್ತಿ ರೂಪದಲ್ಲಿರದೆ ನಿರ್ದಿಷ್ಟ ಸಂಖ್ಯೆಯಲ್ಲಿರಬೇಕು)

ದಕ್ಷಿಣ ಕನ್ನಡ ಕ್ಷೇತ್ರ ದಲ್ಲಿ ಎಲ್ಲೆಲ್ಲೂ ಸೋಲು ಗೆಲುವಿನ ಲೆಕ್ಕಾಚಾರದಕ್ಷಿಣ ಕನ್ನಡ ಕ್ಷೇತ್ರ ದಲ್ಲಿ ಎಲ್ಲೆಲ್ಲೂ ಸೋಲು ಗೆಲುವಿನ ಲೆಕ್ಕಾಚಾರ

ಇನ್ನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆದು ನರೇಂದ್ರ ನಾಯಕ್, 13-9-1220/2, ವಿಠೋಬ ದೇವಸ್ಥಾನ ರಸ್ತೆ, ಮಂಗಳೂರು 575001ಕ್ಕೆ ಮೇ.22ರೊಳಗೆ ತಲುಪುವಂತೆ ಕಳುಹಿಸಲು ಸೂಚಿಸಿದ್ದಾರೆ.

English summary
Famous Rationalist Prof.Narendra Nayak Challenged Astrologers who claim that they can predict the election result. Nayak open challenged to Astrologers for predict the result.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X