ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಲಿಕುಳ ನಿಸರ್ಗಧಾಮಕ್ಕೆ ಖಾಸಗಿ ವಾಹನ ಪ್ರವೇಶ ಇಲ್ಲ

|
Google Oneindia Kannada News

ಮಂಗಳೂರು, ಮೇ 29: ಮಂಗಳೂರಿನ ಪ್ರಸಿದ್ಧ ಪಿಲಿಕುಳ ನಿಸರ್ಗಧಾಮದಲ್ಲಿ ಖಾಸಗಿ ವಾಹನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ನಿಸರ್ಗಧಾಮದಲ್ಲಿ ಸುತ್ತಾಡಲು ಬಗ್ಗಿಗಳ (ವೀಕ್ಷಣಾ ವಾಹನ) ವ್ಯವಸ್ಥೆ ಮಾಡಲಾಗಿರುವ ಹಿನ್ನೆಲೆಯಲ್ಲಿ ಖಾಸಗಿ ವಾಹನ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

 ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಆಗಮಿಸಿದ ರೆಟಿಕ್ಯುಲೇಟೆಡ್ ಹೆಬ್ಬಾವು ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಆಗಮಿಸಿದ ರೆಟಿಕ್ಯುಲೇಟೆಡ್ ಹೆಬ್ಬಾವು

ನಿಸರ್ಗಧಾಮದ ಪ್ರವೇಶ ದ್ವಾರದಲ್ಲೇ ನಿರ್ಮಿಸಲಾದ ಕೌಂಟರ್‌ಗಳಲ್ಲಿ ಪ್ರವಾಸಿಗರ ವಿಹಾರದ ವಾಹನಗಳಿಗೆ ಟಿಕೆಟ್ ಲಭ್ಯವಿದೆ. ಹಾಗಾಗಿ ಈಗ ಖಾಸಗಿ ವಾಹನಗಳಿಗೆ ನಿಸರ್ಗಧಾಮದೊಳಗೆ ಪ್ರವೇಶವಿಲ್ಲ. ಬಸ್‌ಗಳಲ್ಲಿ ಹಾಗೂ ಇತರ ವಾಹನಗಳಲ್ಲಿ ಆಗಮಿಸುವ ಪ್ರವಾಸಿಗರು ಕೌಂಟರ್‌ನಲ್ಲಿ ನಿಸರ್ಗಧಾಮದೊಳಗೆ ಪ್ರವೇಶದ ಟಿಕೆಟ್ ಪಡೆಯಬೇಕು. ಅಗತ್ಯವಿದ್ದಲ್ಲಿ ಬಗ್ಗಿಗಳಿಗಾಗಿ ಟಿಕೆಟ್ ಪಡೆಯಬಹುದು. ರಾಜ್ಯದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಒಂದು ಕೋಟಿ ರೂಪಾಯಿಯ ನೆರವಿನಿಂದ ಬ್ಯಾಟರಿ ಚಾಲಿತ ಬಗ್ಗಿ ಸೇವೆ ಆರಂಭಿಸಲಾಗಿದೆ. ಈ ದೊಡ್ಡ ವಾಹನಗಳಲ್ಲಿ 10 ಮಂದಿ ಪ್ರಯಾಣಿಸಲು ಸ್ಥಳಾವಕಾಶವಿದೆ.

private vehicles ban in Pilikula

ಪ್ರಾಣಿ ಸಂಗ್ರಹಾಲಯದಲ್ಲಿ ಸುತ್ತಾಡಬೇಕಿದ್ದರೆ, ಪ್ರವಾಸಿಗರು ಒಳಗಿರುವ ಸಣ್ಣ ಬಗ್ಗಿಗಳ ಸೇವೆ ಪಡೆಯಬಹುದು. ಇದಕ್ಕೆ ಪ್ರತ್ಯೇಕ ಟಿಕೆಟ್ ಇದೆ. ಪ್ರವೇಶದ್ವಾರದಲ್ಲಿ ಲಭ್ಯವಿರುವ ಬಗ್ಗಿಗಳಲ್ಲಿ ಮಕ್ಕಳಿಗೆ 10 ರೂಪಾಯಿ ಮತ್ತು ಹಿರಿಯರಿಗೆ 25 ರೂಪಾಯಿ ನಿಗದಿಪಡಿಸಲಾಗಿದೆ. ಇದರಲ್ಲಿ ದಿನವಿಡೀ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸಬಹುದು. ಪ್ರಾಣಿ ಸಂಗ್ರಹಾಲಯದೊಳಗೆ ವೃದ್ಧರು ಮತ್ತು ಮಕ್ಕಳು ಖಾಸಗಿ ಬಗ್ಗಿಗಳಲ್ಲಿ ಪ್ರಯಾಣಿಸಲು ಅವಕಾಶವಿದೆ.

English summary
Buggis service started in Pilikula Nisargadhama. Now Buggis will take visitors to Pilikula. So Private vehicles are banned here,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X