ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ಧಾರ್ಥ ಸಾವು: ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿಯಲ್ಲೇನಿದೆ?

|
Google Oneindia Kannada News

ಮಂಗಳೂರು, ಆಗಸ್ಟ್ 02: ನಿಗೂಢವಾಗಿ ಸಾವಿಗೀಡಾದ ಕೆಫೆ ಕಾಫಿ ಡೆ ಮಾಲೀಕ ವಿಜಿ ಸಿದ್ಧಾರ್ಥ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಲಭ್ಯವಾಗಿದೆ.

ಈ ವರದಿಯಲ್ಲಿ ಸಿದ್ಧಾರ್ಥ ಅವರ ದೇಹದ ಯಾವೆಲ್ಲ ಭಾಗಕ್ಕೆ ಏಟಾಗಿತ್ತು ಎಂಬೆಲ್ಲ ಮಾಹಿತಿ ಇದೆ ಎನ್ನಲಾಗಿದೆ. ಆದರೆ ಅಂತಿಮ ವರದಿ ಬಂದ ಮೇಲೆ ಮಾತ್ರವೇ ಸಾವಿಗೆ ನಿಜವಾದ ಕಾರಣ ಏನು ಎಂಬುದು ತಿಳಿಯಲಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಸಿದ್ಧಾರ್ಥ್ ಪ್ರಕರಣದ ತನಿಖೆ 4 ದಿನಗಳಲ್ಲಿ ಪೂರ್ಣಗೊಳಿಸುವಂತೆ ಸೂಚನೆ ಸಿದ್ಧಾರ್ಥ್ ಪ್ರಕರಣದ ತನಿಖೆ 4 ದಿನಗಳಲ್ಲಿ ಪೂರ್ಣಗೊಳಿಸುವಂತೆ ಸೂಚನೆ

ಪ್ರಾಥಮಿಕ ವರದಿಯನ್ನು ಈ ಪ್ರಕರಣದ ತನಿಖಾಧಿಕಾರಿ ಕೋದಂಡರಾಮ ಅವರಿಗೆ ನೀಡಲಾಗಿದ್ದು, ಈ ವರದಿಯಲ್ಲಿ ಸಿದ್ಧಾರ್ಥ ಅವರ ದೇಹದ ಯಾವ ಭಾಗಗಳಿಗೆ ಏನಾಗಿದೆ, ಗಾಯವೇನಾದರೂ ಆಗಿದೆಯೇ ಎಂಬ ಮಾಹಿತಿ ಇದೆ ಎನ್ನಲಾಗಿದೆ.

Primary Post Mortem Report Of CCD Owner Siddharthas Death Case Submitted To Police

ಕೆಫೆ ಕಾಫಿ ಡೆ ಮಾಲೀಕ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಳಿಯ ವಿಜಿ ಸಿದ್ಧಾರ್ಥ ಜುಲೈ 29 ರಂದು ನಿಧನರಾದ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಆರಂಭವಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಲು ಎಸಿಬಿ ಕೋದಂಡರಾಮ ನಿರಾಕರಿಸಿದ್ದಾರೆ. ಪ್ರಾರ್ಥಮಿಕ ಮರಣೋತ್ತರ ಪರೀಕ್ಷೆ ವರದಿ ಮುಚ್ಚಿದ ಕೋಟೆ ಯಲ್ಲಿದ್ದು ಅದನ್ನು ಮಂಗಳೂರು ಪೊಲೀಸ್ ಕಮೀಷನರ್ ಅವರಿಗೆ ಹಸ್ತಾಂತರಿಸಲಾಗುವುದೆಂದು ಅವರು ತಿಳಿಸಿದ್ದಾರೆ.

ಸಿದ್ದಾರ್ಥ್ ಅವರ ಸಾವಿಗೆ ಸ್ಪಷ್ಟ ಕಾರಣ ಅಂತಿಮ ವರದಿಯಲ್ಲಿ ಗೊತ್ತಾಗಲಿದೆ . ಪ್ರಾಥಮಿಕ ವರದಿಯಲ್ಲಿ ಆತ್ಮಹತ್ಯೆಯ ಸಾಧ್ಯತೆ , ಸಿದ್ದಾರ್ಥ ಅವರ ಸಾವು ಹೇಗೆ ಸಂಭವಿಸಿದೆ ಎಂಬುದರ ಬಗ್ಗೆ ಉಲ್ಲೇಖವಿರ ಬಹುದು ಎಂದು ವೆನ್ಲಾಕ್ ಜಿಲ್ಲಾಸ್ಪತ್ರೆ ಅಧೀಕ್ಷಕಿ ರಾಜೇಶ್ವರಿ ದೇವಿ ತಿಳಿಸಿದ್ದಾರೆ.

ಸಿದ್ಧಾರ್ಥ್ ಕುಟುಂಬಕ್ಕೆ ಧೈರ್ಯ ಹೇಳಿದ ನಿರ್ಮಲಾನಂದನಾಥ ಸ್ವಾಮೀಜಿಸಿದ್ಧಾರ್ಥ್ ಕುಟುಂಬಕ್ಕೆ ಧೈರ್ಯ ಹೇಳಿದ ನಿರ್ಮಲಾನಂದನಾಥ ಸ್ವಾಮೀಜಿ

ಉದ್ಯಮದಲ್ಲಿ ನಷ್ಟವಾದ ಕಾರಣ, ಸಾಲದ ಒತ್ತಡ ಇದ್ದ ಕಾರಣ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟದ ತನಿಖೆ ಹೇಳಿದ್ದರೂ, ಅದು ಸಹಜ ಸಾವಲ್ಲ ಎಂಬ ಅನುಮಾನ ಎದ್ದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ.

English summary
Mangaluru hospital submitted primary post mortem report of Cafe Coffee Day Owner Siddhartha's death case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X