• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು : ಎಚ್1ಎನ್ 1 ಬಗ್ಗೆ ಆತಂಕ ಬೇಡ

|

ಮಂಗಳೂರು, ಆ.2 : 'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್1 ಎನ್1 ಸಮಸ್ಯೆ ಶಮನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಿ ಮತ್ತು ಖಾಸಗಿ ವಲಯದ ಎಲ್ಲಾ ಆಸ್ಪತ್ರೆ, ಕ್ಲಿನಿಕ್ ಗಳಿಗೆ ಸುತ್ತೋಲೆ ಕಳುಹಿಸಲಾಗಿದೆ' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣರಾವ್ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಭದ್ರತೆಗೆ ಬಂದ ಪೊಲೀಸರ ಗೋಳು ಕೇಳೋರು ಯಾರು..

ಎಚ್1 ಎನ್ 1 ವೈರಸ್ ನಿಂದ ಹರಡುವ ಸೋಂಕಾಗಿದ್ದು, ಜಿಲ್ಲೆಯಲ್ಲಿ 2017ರಲ್ಲಿ ಇದುವರೆಗೆ 752 ಶಂಕಿತ ಪ್ರಕರಣಗಳಲ್ಲಿ 200 ಪಾಸಿಟಿವ್ ಪ್ರಕರಣಗಳನ್ನು ಪತ್ತೆ ಹೆಚ್ಚಲಾಗಿದೆ . ಇದುವರೆಗೆ ಈ ಸೋಂಕಿನಿಂದ ಇಬ್ಬರು ಸಾವಿಗೀಡಾಗಿದ್ದಾರೆ.

Preventive measures are taken in DK for H1N1 virus says Ramkrishan Rao

ಜ್ವರ ಅಸಡ್ಡೆ ಬೇಡ : ಈ ಸೋಂಕು ತಗುಲಿದವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದರೆ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ. ಆದರೆ, ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಗಂಭೀರ ಸಮಸ್ಯೆಗಳು ಕಂಡುಬರುತ್ತವೆ. ಆದ್ದರಿಂದ ಶೀತ, ಜ್ವರ, ಕೆಮ್ಮು ಸಮಸ್ಯೆಗಳಿಂದ ಬಳಲುತ್ತಿರುವವರು 2-3 ದಿನ ಔಷಧಿ ತೆಗೆದುಕೊಂಡರು ಸೋಂಕು ಗುಣವಾಗದಿದ್ದರೆ ಕೂಡಲೇ ಸಮೀಪದ ಸಮೀದಪ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರಕ್ತದ ಮಾದರಿ ನೀಡಬೇಕು.

'ರಕ್ತದ ಮಾದರಿಯನ್ನು ಪರೀಕ್ಷೆ ಮಾಡಿದ ಬಳಿಕ ಸೋಂಕು ಇರುವ ಬಗ್ಗೆ ದೃಢಪಡಿಸಲಾಗುತ್ತದೆ. ಸೋಂಕು ದೃಢ ಪಟ್ಟರೆ ರೋಗಿಗೆ ಔಷಧಿ ನೀಡಲಾಗುತ್ತದೆ. ಇತ್ತೀಚೆಗೆ ಈ ಸೋಂಕಿನಿಂದ ವೇಣೂರಿನ ಗ್ರಾಮ ಪಂಚಾಯತಿ ಸಿಬ್ಬಂದಿ ಪುಷ್ಪಾವತಿ ಎಂಬ ಗರ್ಭಿಣಿ ಮಹಿಳೆ ಮೃತಪಟ್ಟಿದ್ದಾರೆ. ಒಂದು ವಾರದ ಹಿಂದೆಯೇ ಸೋಂಕಿನ ಲಕ್ಷಣ ಕಂಡುಬಂದಿದ್ದರೂ ನಿರ್ಲಕ್ಷ್ಯ ಮಾಡಿರುವುದರಿಂದ ಸಾವು ಸಂಭವಿಸಿದೆ' ಎಂದು ಡಾ. ರಾಮಕೃಷ್ಣ ರಾವ್ ಹೇಳಿದರು.

ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ .ರಾಜೇಶ್ ಮಾತನಾಡಿ, 'ಎಚ್1 ಎನ್1 ಜಿಲ್ಲೆಯಲ್ಲಿ ಪ್ರಥಮ ಬಾರಿಗೆ 2009 ರಲ್ಲಿ ಪತ್ತೆಯಾಗಿದ್ದು, 2015 ರಲ್ಲಿ 500 ಶಂಕಿತ ಪ್ರಕರಣಗಳು 150 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು . 2016 ರಲ್ಲಿ 50 ಶಂಕಿತ ಪ್ರಕರಣಗಳ್ಲಲಿ 7 ಮಂದಿಗೆ ಎಚ್1 ಎನ್1 ಧೃಡಪಟ್ಟಿತು' ಎಂದು ಮಾಹಿತಿ ನೀಡಿದರು .

59 ಡೆಂಗ್ಯೂ ಪ್ರಕರಣ : ದಕ್ಷಿಣ ಕನ್ನಡ ಜಿಲ್ಲೆಯ 59 ಮಂದಿಯಲ್ಲಿ ಡೆಂಗ್ಯೂ ಸೋಂಕು ದೃಢಪಟ್ಟಿದೆ. ಮಲೇರಿಯಾ ಪ್ರಕರಣ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 30 ರಿಂದ 40 ರಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಜುಲೈ ತಿಂಗಳವರೆಗೆ 2,477 ಮಂದಿ ಮಲೇರಿಯಾ ಸೋಂಕಿನಿಂದ ಬಳಲಿದ್ದರು. ಈ ವರ್ಷ 1416 ಪ್ರಕರಣಗಳು ಪತ್ತೆಯಾಗಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Effective Preventive measures are taken in Dakshina kannada district to prevent H1N1 virus says Mangaluru Health officer Ramkrishan Rao to Oneindia Kannada. Circulars are been sent to all government hospitals and clinics about the awareness of H1N1.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more