ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಯ್ಯೋ ಪಾಪ.. ಮಂಗಳೂರಿನಲ್ಲಿ ಗರ್ಭಿಣಿಗೆ ಇಂದೆಂಥಾ ದುಃಸ್ಥಿತಿ.!

|
Google Oneindia Kannada News

ಮಂಗಳೂರು, ಮೇ 29: ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ಮನುಷ್ಯರು ಮಾನವೀಯತೆ, ಕರುಣೆಯನ್ನೇ ಮರೆತಿರುವಂತಿದೆ. ಅದಕ್ಕೆ ಉತ್ತಮ ನಿದರ್ಶನ ಮಂಗಳೂರಿನಲ್ಲಿ ನಡೆದ ಒಂದು ದುರಂತ ಘಟನೆ.

Recommended Video

ತಾಯಿಯಾದ ನಂತರ ಸ್ಕಿನ್ ಸೌಂದರ್ಯ ಕಾಪಾಡುವುದು ಹೇಗೆ? | Oneindia Kannada

ವಂದೇ ಭಾರತ್ ಮಿಷನ್ ಅಡಿಯಲ್ಲಿ ಮೇ 12 ರಂದು ದುಬೈನಿಂದ ಗರ್ಭಿಣಿ ಮಹಿಳೆಯೊಬ್ಬರು ಮಂಗಳೂರಿಗೆ ಬಂದಿಳಿದರು. ಮಂಗಳೂರಿಗೆ ಬರುತ್ತಿದ್ದಂತೆಯೇ ಸರ್ಕಾರದ ಕ್ವಾರಂಟೈನ್ ನಲ್ಲಿ ಮೂರು ದಿನ ಇದ್ದ ಗರ್ಭಿಣಿ ಮಹಿಳೆಯಲ್ಲಿ ಕೋವಿಡ್-19 ನೆಗೆಟಿವ್ ಕಂಡುಬಂತು. ಬಳಿಕ ಆಕೆಯನ್ನು ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿತ್ತು.

ಛೆ ಛೆ.. ಜೀವ ಉಳಿಸುವ ವೈದ್ಯರಿಗೆ ಭಾರತದಲ್ಲಿ ಇದೆಂಥಾ ಪರಿಸ್ಥಿತಿ.?!ಛೆ ಛೆ.. ಜೀವ ಉಳಿಸುವ ವೈದ್ಯರಿಗೆ ಭಾರತದಲ್ಲಿ ಇದೆಂಥಾ ಪರಿಸ್ಥಿತಿ.?!

ಹೀಗಾಗಿ, ತನ್ನ ನಿವಾಸಕ್ಕೆ ಹೋಗಲು ಗರ್ಭಿಣಿ ಮಹಿಳೆ ಮುಂದಾದರು. ಆದರೆ, ಅದಕ್ಕೆ ಆಕೆ ನೆಲೆಸಿದ್ದ ಅಪಾರ್ಟ್ಮೆಂಟ್ ರೆಸಿಡೆಂಟ್ ಅಸೋಸಿಯೇಷನ್ ಅವಕಾಶ ಮಾಡಿಕೊಡಲಿಲ್ಲ.

Pregnant Woman In Mangalore Lost Her Baby After She Returned From Dubai

ಸಾಲದಕ್ಕೆ, ಗರ್ಭಿಣಿ ಮಹಿಳೆಗೆ ಚಿಕಿತ್ಸೆ ಕೊಡಲು ಮಂಗಳೂರಿನ ಯಾವುದೇ ಖಾಸಗಿ ಆಸ್ಪತ್ರೆಗಳೂ ಕೂಡ ಮುಂದಾಗಲಿಲ್ಲ. ಹೈಪರ್ ಟೆನ್ಷನ್ ನಿಂದ ಬಳಲಿದ್ದ ಪರಿಣಾಮ, ಮಹಿಳೆಯ ಗರ್ಭದಲ್ಲೇ ಮಗು ಸಾವನ್ನಪ್ಪಿದೆ.

''ಮನೆಗೆ ತೆರಳಲು ಅಪಾರ್ಟ್ಮೆಂಟ್ ಅಸೋಸಿಯೇಷನ್ ನವರು ಬಿಡಲಿಲ್ಲ. ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಸಿಗಲಿಲ್ಲ. ಗರ್ಭದಲ್ಲೇ ಮಗು ಸಾಯುವ ಹಾಗಾಯಿತು'' ಎಂದು ಮಹಿಳೆಯ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

ಅಪಾರ್ಟ್ಮೆಂಟ್ ಅಸೋಸಿಯೇಷನ್ ನವರಿಗೆ ಸದ್ಯ ಮಂಗಳೂರು ಕಾರ್ಪೊರೇಷನ್ ಕಮಿಷನರ್ ನೋಟೀಸ್ ಕಳುಹಿಸಿದ್ದಾರೆ.

English summary
Pregnant Woman in Mangalore lost her baby after she returned from Dubai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X