ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆರಿಗೆಗೆ ಇನ್ನು ಕೆಲವೇ ನಿಮಿಷವಿರುವಾಗ ವೋಟ್ ಮಾಡಿದ ಗರ್ಭಿಣಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 18:ಮೋದಿಗಾಗಿ ಮತ ಚಲಾಯಿಸಬೇಕೆಂದು ಹಠ ಹಿಡಿದ ತುಂಬು ಗರ್ಭಿಣಿಯೋರ್ವರು ಹೆರಿಗೆಗೆಂದು ಆಸ್ಪತ್ರೆಯಲ್ಲಿ ದಾಖಲಾದರೂ ಪತಿಯ ಸಹಾಯದೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿ, ಮತ್ತೆ ಆಸ್ಪತ್ರೆಗೆ ಸೇರಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಉರ್ಲಾಂಡಿ ಬೂತ್ 119ರಲ್ಲಿ ನಡೆದಿರುವ ಕುರಿತು ಬೆಳಕಿಗೆ ಬಂದಿದೆ.

ಕರ್ನಾಟಕ ಲೋಕ ಸಮರ LIVE: ಸುಮಲತಾ-ನಿಖಿಲ್ ಬೆಂಬಲಿಗರ ನಡುವೆ ಮಾರಾ-ಮಾರಿಕರ್ನಾಟಕ ಲೋಕ ಸಮರ LIVE: ಸುಮಲತಾ-ನಿಖಿಲ್ ಬೆಂಬಲಿಗರ ನಡುವೆ ಮಾರಾ-ಮಾರಿ

ಉರ್ಲಾಂಡಿ ನಿವಾಸಿ ಯೋಗಾನಂದ ಎಂಬುವವರ ಪತ್ನಿ ಮೀನಾಕ್ಷಿ ಅವರು ತುಂಬು ಗರ್ಭಿಣಿಯಾಗಿದ್ದು, ಇಂದು ಬೆಳಗ್ಗೆ ಹೊಟ್ಟೆ ನೋವು ಎಂದು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು.

 ಕರಾವಳಿಯಲ್ಲಿ ಹಸೆಮಣೆ ಏರುವ ಮುನ್ನ ಮತ ಚಲಾಯಿಸಿದ ವಧುಗಳು ಕರಾವಳಿಯಲ್ಲಿ ಹಸೆಮಣೆ ಏರುವ ಮುನ್ನ ಮತ ಚಲಾಯಿಸಿದ ವಧುಗಳು

ಇನ್ನೇನೂ ಹೆರಿಗೆಯಾಗುವ ಸಾಧ್ಯತೆಯಿದೆ ಎನ್ನುವಷ್ಟರಲ್ಲಿ ಮೊದಲು ತನ್ನ ಹಕ್ಕು ಚಲಾಯಿಸಬೇಕು. ಮೋದಿಗಾಗಿ ನನ್ನ ಮತ ಹಾಳಗಾದಿರಲಿ ಎಂದು ಪತಿ ಯೋಗಾನಂದ ಅವರ ಸಹಾಯ ತೆಗೆದುಕೊಂಡು ತಾಲೂಕು ಪಂಚಾಯತ್ ಕಚೇರಿಗೆ ಬಂದು ಮತ ಚಲಾಯಿಸಿ ಬಳಿಕ ಆಸ್ಪತ್ರೆಗೆ ದಾಖಲಾದರು. ಆಸ್ಪತ್ರೆಗೆ ಸೇರಿದ ಕೆಲವೇ ನಿಮಿಷದಲ್ಲಿ ಮೀನಾಕ್ಷಿಗೆ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

Pregnant given birth to baby after voting

ಮಗುವಿಗೆ ಹೆಸರೇನಿಡಬಹುದು?

ಅಂದಹಾಗೆ ಇಲ್ಲಿ ಹೇಳಲೇಬೇಕಾದ ವಿಷಯವೊಂದಿದೆ. ಸಾಮಾನ್ಯವಾಗಿ ವಿಶಿಷ್ಟ ಸಂದರ್ಭಗಳಲ್ಲಿ, ಪ್ರಸಿದ್ಧ ವ್ಯಕ್ತಿಗಳನ್ನು ಮಾದರಿಯಾಗಿಟ್ಟುಕೊಂಡು, ಸಂದರ್ಭಕ್ಕೆ ತಕ್ಕಂತೆ ಮಕ್ಕಳಿಗೆ ಹೆಸರಿಡುವುದು ನಮ್ಮಲ್ಲಿ ವಾಡಿಕೆ. ಅಂತೆಯೇ ಪ್ರಜಾಪ್ರಭುತ್ವದ ಹಬ್ಬವಾದ ಈ ದಿನದಂದೇ ಮೀನಾಕ್ಷಿ ಮಗುವಿಗೆ ಜನ್ಮ ನೀಡಿರುವುದರಿಂದ ಏನಂತ ಹೆಸರಿಡಬಹುದು? ಮಗಳನ್ನು ಪ್ರಜಾ ಎಂದು ಕರೆಯಬಹುದಾ? ಪ್ರಭುತ್ವ ಎನ್ನಬಹುದಾ? ನೀವೇನಂತೀರಿ?

Pregnant given birth to baby after voting

ಬಿರುಸಿನ ಮತದಾನ

ಕರಾವಳಿಯಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಬಿಸಿಲ ಬೇಗೆಯನ್ನು ಲೆಕ್ಕಿಸದೇ ಜನರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯ ಮತದಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ಅತೀ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಿದ್ದಾರೆ.

 ವೋಟಿಂಗ್ ಮಾಡಿ ಕರ್ತವ್ಯ ಮೆರೆದ ಅನಾರೋಗ್ಯ ಪೀಡಿತರು, ನವ ವಧು ವೋಟಿಂಗ್ ಮಾಡಿ ಕರ್ತವ್ಯ ಮೆರೆದ ಅನಾರೋಗ್ಯ ಪೀಡಿತರು, ನವ ವಧು

ಮತದಾನದಲ್ಲಿ ವೃದ್ಧರು, ಯವಕರು, ಮಹಿಳೆಯರು ಮಾತ್ರವಲ್ಲದೇ ಅನಾರೋಗ್ಯ ಪೀಡಿತರು, ಎಂಡೋಪೀಡಿತ ಸಂತ್ರಸ್ಥರು ನವ ಜೀವನಕ್ಕೆ ಕಾಲಿರಿಸುವ ಮೊದಲು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

English summary
Lok Sabha Election 2019:Pregnant given birth to baby after voting.She was a Modi fan.Her name is Meenakshi.This incident took place in Urlandi Booth, Mangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X