ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೇಸ್‌ಬುಕ್ ಪೇಜ್‌ನಲ್ಲಿ ಹಾಡಿ ರಂಜಿಸಿದ ಮಂಗಳೂರು ಪೊಲೀಸರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 01; ಕೋವಿಡ್ ಆತಂಕದ ನಡುವೆಯೂ ಪೊಲೀಸರು ಕಾರ್ಯ ಕ್ಷಮತೆ ಮೆರೆದಿದ್ದಾರೆ. ಎಲ್ಲರೂ ಮನೆಯಲ್ಲಿ ಕುಟುಂಬದ ಜೊತೆ ಕಾಲಕಳೆಯುವಾಗ ಪೊಲೀಸರು ಮಾತ್ರ ಬಿಸಿಲು-ಮಳೆ ಎನ್ನದೆ ಕೆಲಸ ನಿರ್ವಹಿಸಿದ್ದಾರೆ.

ಕೊರೊನಾ ಆತಂಕದ ನಡುವೆಯೂ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಮಂಗಳೂರು ಪೊಲೀಸರು ಮಾತ್ರ ಮಂಗಳವಾರ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಖಾಕಿಯೊಳಗಿರುವ ಪ್ರತಿಭಾವಂತರಿಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ವಿಶೇಷ ವೇದಿಕೆ ಒದಗಿಸಿಕೊಟ್ಟಿದ್ದಾರೆ.

ಮಂಗಳೂರು; ಕೊರೊನಾಗೆ ಒಂದೇ ಕುಟುಂಬದ ಮೂವರು ಬಲಿ ಮಂಗಳೂರು; ಕೊರೊನಾಗೆ ಒಂದೇ ಕುಟುಂಬದ ಮೂವರು ಬಲಿ

ಫೇಸ್‌ಬುಕ್‌ನಲ್ಲಿ ಹಾಡುಗಳ ಮೂಲಕವೇ ಪ್ರಸಿದ್ಧಿಯಾಗಿರುವ ಅರವಿಂದ್ ವಿವೇಕ್ ಪೇಜ್‌ನಲ್ಲಿ ಮಂಗಳೂರು ಕಮಿಷನೇಟರ್ ವ್ಯಾಪ್ತಿಯ ಪೊಲೀಸರು ಮನ ಬಿಚ್ಚಿ ಹಾಡಿ ರಿಲ್ಯಾಕ್ಸ್ ಆಗಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ತನ್ನ ಸಿಬ್ಬಂದಿ ವರ್ಗಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ.

ಮಂಗಳೂರು: ಮಾಸ್ಕ್ ಧರಿಸದೆ ವಿವಾದ ಸೃಷ್ಟಿಸಿಕೊಂಡ ವೈದ್ಯ ಹೇಳೋದೇನು?ಮಂಗಳೂರು: ಮಾಸ್ಕ್ ಧರಿಸದೆ ವಿವಾದ ಸೃಷ್ಟಿಸಿಕೊಂಡ ವೈದ್ಯ ಹೇಳೋದೇನು?

Mangaluru Police Singing Program Get Good Response

ಕಮಿಷನೇಟರ್ ವ್ಯಾಪ್ತಿಯ ಸುಮಾರು 30ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಈ ಫೇಸ್‌ಬುಕ್ ಪೇಜ್‌ನಲ್ಲಿ ಹಾಡಿ ಪ್ರತಿಭಾ ಪ್ರದರ್ಶನ ಮಾಡಿದ್ದಾರೆ. ಕನ್ನಡ, ಹಿಂದಿ ಚಿತ್ರ ಗೀತೆಗಳು ಸೇರಿದಂತೆ ಭಾವಗೀತೆಗಳನ್ನು ಹಾಡಿ ಪೊಲೀಸರು ಖುಷಿಪಟ್ಟರು.

ಕಳೆದ ಬಾರಿಯ ಲಾಕ್‌ಡೌನ್ ಸಮಯದಲ್ಲಿ ವಿವೇಕಾನಂದ ಎಂಬ ಯುವ ಹಾಡುಗಾರ ಈ ಪೇಜ್ ತೆರೆದಿದ್ದು,ಸ್ಥಳೀಯ ಗಾಯಕರಿಗೆ ತನ್ನ ಪೇಜ್‌ನಲ್ಲಿ ಲೈವ್ ಮೂಲಕ ಅವಕಾಶ ಮಾಡಿಕೊಟ್ಟಿದ್ದರು. ಈ ಪೇಜ್‌ಗೆ ಎರಡು ಲಕ್ಷಕ್ಕೂ ಹೆಚ್ಚು ಜನ ಫಾಲೋವರ್ ಇದ್ದು, ಪ್ರತಿ ವಾರ ಕಾರ್ಯಕ್ರಮ ನಡೆಸಿಕೊಟ್ಟು ಜನ ಮೆಚ್ಚುಗೆ ಗಳಿಸಿದ್ದರು.

ಮಂಗಳೂರು; ಮದುವೆ ದಿನ ಡಿಜೆ ಪಾರ್ಟಿ, ವರ ಪೊಲೀಸ್ ವಶಕ್ಕೆ! ಮಂಗಳೂರು; ಮದುವೆ ದಿನ ಡಿಜೆ ಪಾರ್ಟಿ, ವರ ಪೊಲೀಸ್ ವಶಕ್ಕೆ!

Mangaluru Police Singing Program Get Good Response

ಈ ಬಾರಿ ಕಮಿಷನರ್ ಮುತುವರ್ಜಿಯಿಂದ ಪೊಲೀಸರ ಹಾಡುಗಾರಿಕೆ ಪೇಜ್ ಮೂಲಕ ನಡೆದಿದ್ದು, ಲಕ್ಷಕ್ಕೂ ಹೆಚ್ಚು ಜನ ಈ ಕಾರ್ಯಕ್ರಮ ವೀಕ್ಷಿಸಿದ್ದಾರೆ. ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿನ ಅಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆದಿದೆ.

ವಿನೂತನ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, "ಪೊಲೀಸರು ಕೊರೊನಾ ಸಮಯದಲ್ಲಿ ಹಗಲುರಾತ್ರಿಯೆನ್ನದೇ ಕರ್ತವ್ಯ ನಿರ್ವಹಿಸಿದ್ದಾರೆ. ಮಾನಸಿಕ ಒತ್ತಡ ದೂರ ಮಾಡುವಂತ ಉದ್ದೇಶದಿಂದ, ಪೊಲೀಸರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವಿಶೇಷ ಅವಕಾಶ ನೀಡಿದ್ದು, ಕೊರೊನಾ ನಿಯಮ ಪಾಲಿಸಿ ಹಾಡಿ ಖುಷಿಪಟ್ಟಿದ್ದಾರೆ" ಎಂದರು.

English summary
Mangaluru city police commissioner Shashi Kumar allowed officials to sing song at social media platforms. Program get good response.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X