ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಶಂಕಿತನ ಚಿತ್ರ ಬಿಡುಗಡೆ

|
Google Oneindia Kannada News

ಮಂಗಳೂರು, ಜನವರಿ 20: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವ ಶಂಕಿತನ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಶಂಕಿತ ವ್ಯಕ್ತಿ ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದ ಆಟೋ ದ ಚಿತ್ರವನ್ನೂ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಅವರು ಚಿತ್ರಗಳನ್ನು ಬಿಡುಗಡೆಗೊಳಿಸಿದ್ದು, ಕಪ್ಪು ಬಣ್ಣದ ಪ್ಯಾಂಟ್ ಧರಿಸಿ, ಬಿಳಿ ಬಣ್ಣದ ಶರ್ಟ್ ಧರಿಸಿ ಟೋಪಿ ತೊಟ್ಟು ಕನ್ನಡಕ ಧರಿಸಿರುವ ವ್ಯಕ್ತಿ ವಿಮಾನ ನಿಲ್ದಾಣದಿಂದ ಹೊರಗೆ ಹೋಗುತ್ತಿರುವ ಚಿತ್ರ ಇದಾಗಿದೆ.

Live : ಮಂಗಳೂರಲ್ಲಿ ಬಾಂಬ್ ಪತ್ತೆ; ಕೆಂಜಾರು ಮೈದಾನದಲ್ಲಿ ನಿಷ್ಕ್ರಿಯLive : ಮಂಗಳೂರಲ್ಲಿ ಬಾಂಬ್ ಪತ್ತೆ; ಕೆಂಜಾರು ಮೈದಾನದಲ್ಲಿ ನಿಷ್ಕ್ರಿಯ

ಶಂಕಿತ ವ್ಯಕ್ತಿಯು ಕೆಂಜಾರು ವರೆಗೂ ಆಟೋದಲ್ಲಿ ಬಂದು ಅಲ್ಲಿಂದ ಬಾಡಿಗೆ ಆಟೋ ಪಡೆದು ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ. ನಂತರ ಅಲ್ಲಿಂದ ಹೊರಗೆ ಬಂದು ಮತ್ತೆ ಆಟೋದಲ್ಲಿ ಅಲ್ಲಿಂದ ಹೊರಟು ಹೋಗಿದ್ದಾನೆ.

Police Release Photographs Of Suspect Who Kept Bomb In Mangaluru Air Port

ಟೋಪಿ ತೊಟ್ಟಿದ್ದ ಕಾರಣ ಆತನ ಮುಖ ಸರಿಯಾಗಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ. ಆದರೆ ಬಂದ, ಹೋದ ದೃಶ್ಯಗಳು ಸೆರೆಯಾಗಿವೆ.

Police Release Photographs Of Suspect Who Kept Bomb In Mangaluru Air Port

ಮಂಗಳೂರು: ಇನ್ನೂ ಮೂರು ಬಾಂಬ್ ಇಟ್ಟಿರುವುದಾಗಿ ಬೆದರಿಕೆ

ವಿಮಾನ ನಿಲ್ದಾಣದಲ್ಲಿ ಸಿಕ್ಕ ಬಾಂಬ್ ಅನ್ನು ಕೆಂಜಾರು ಮೈದಾನಕ್ಕೆ ತರಲಾಗಿದ್ದು, ಅದನ್ನು ಸುರಕ್ಷಿತವಾಗಿ ಸ್ಪೋಟಿಸುವ ಕಾರ್ಯ ನಡೆಯುತ್ತಿದೆ. ಪೊಲೀಸರು ವೈರ್‌ಗಳು, ರಿಮೋಟ್‌ ತಂತ್ರಜ್ಞಾನ ಬಳಸಿ ಸ್ಫೋಟಿಸುವ ಕಾರ್ಯ ಮಾಡಲಾಗುತ್ತಿದೆ.

English summary
Police Release Photographs Of Suspect Who Kept Bomb In Mangaluru Air Port. Police release an Auto photo in which suspect flees from air port.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X