ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಕಾರಾಗೃಹದ ಮೇಲೆ ಪೊಲೀಸರ ದಾಳಿ: 7 ಮೊಬೈಲ್, 4 ಚಾಕು ವಶ

|
Google Oneindia Kannada News

ಮಂಗಳೂರು, ಫೆಬ್ರವರಿ 24:ಮಂಗಳೂರು ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಸಂದೀಪ್ ಪಾಟೀಲ್, ಜಿಲ್ಲಾ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ದಾಳಿ ನಡೆಸಿದ್ದಾರೆ.

ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಹಾಗೂ ಇಬ್ಬರು ಡಿಸಿಪಿಗಳ ನೇತೃತ್ವದ ಪೊಲೀಸರ ತಂಡ ಜಿಲ್ಲಾ ಕಾರಾಗೃಹಕ್ಕೆ ಧಿಡೀರ್ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಡಿಸಿಪಿ, ಎಸಿಪಿ, ಇನ್ಸ್ ಪೆಕ್ಟರ್ ಗಳು ಸೇರಿದಂತೆ 60ಕ್ಕೂ ಹೆಚ್ಚು ಪೊಲೀಸರು ಪಾಲ್ಗೊಂಡಿದ್ದರು.

ಕಾರಾಗೃಹದ ಭದ್ರತಾ ಸಿಬ್ಬಂದಿ ಮೇಲೆ ವಿಚಾರಣಾಧೀನ ಕೈದಿಗಳ ಹಲ್ಲೆಕಾರಾಗೃಹದ ಭದ್ರತಾ ಸಿಬ್ಬಂದಿ ಮೇಲೆ ವಿಚಾರಣಾಧೀನ ಕೈದಿಗಳ ಹಲ್ಲೆ

ದಾಳಿ ಸಂದರ್ಭ ಕಾರಾಗೃಹದಲ್ಲಿ ತಪಾಸಣೆ ಮಾಡಿದಾಗ ವಿಚಾರಣಾಧೀನ ಕೈದಿಗಳು ಅಡಗಿಸಿಟ್ಟಿದ್ದ 7 ಮೊಬೈಲ್ ಫೋನ್‌ಗಳು, 4 ಚಾಕುಗಳು ಸಿಕ್ಕಿದ್ದು, ಇವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Police raids on district prison in Mangaluru

ದಾಳಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್, ದಾಳಿ ಸಂದರ್ಭದಲ್ಲಿ ಮಾರಕಾಸ್ತ್ರಗಳು ಸಿಕ್ಕಿದ್ದು, ಇದರ ಪತ್ತೆಗೆ ತನಿಖೆ ನಡೆಸಲಾಗುವುದು ಎಂದು ಹೇಳಿದರು.

 ಕೇರಳದಲ್ಲಿ ಜೈಲು ಪ್ರವಾಸೋದ್ಯಮ: ಹಣ ತೆತ್ತು ಜೈಲುವಾಸದ ಥ್ರಿಲ್ ಪಡೆಯಿರಿ! ಕೇರಳದಲ್ಲಿ ಜೈಲು ಪ್ರವಾಸೋದ್ಯಮ: ಹಣ ತೆತ್ತು ಜೈಲುವಾಸದ ಥ್ರಿಲ್ ಪಡೆಯಿರಿ!

ಫೆಬ್ರವರಿ 21 ರಂದು ಕಾರಾಗೃಹ ಸಿಬ್ಬಂದಿಗಳ ಮೇಲೆ ವಿಚಾರಣಾದೀನ ಕೈದಿಗಳು ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಕಾರಾಗೃಹದ ಭದ್ರತಾ ಸಿಬ್ಬಂದಿಗಳಿಬ್ಬರ ಮೇಲೆ ವಿಚಾರಣಾಧೀನ ಕೈದಿಗಳ ತಂಡ ಹಲ್ಲೆ ನಡೆಸಿತ್ತು. ಈ ಸಂಬಂಧ 10 ಮಂದಿ ವಿಚಾರಣಾಧೀನ ಕೈದಿಗಳನ್ನು ಬಳ್ಳಾರಿ ಜೈಲ್ ಗೆ ಸ್ಥಳಾಂತರಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.

English summary
Mangaluru police commissioner Sandeep Patil and team raided district prison on February 24. During raid 7 mobile phone and 4 knives record.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X