ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂಜು ಅಡ್ಡೆ ಮೇಲೆ ದಾಳಿ; 13 ಲಕ್ಷ ಮೌಲ್ಯದ ಸ್ವತ್ತು ವಶ

|
Google Oneindia Kannada News

ಉಡುಪಿ, ಜೂನ್ 01: ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಇಸ್ಪೀಟು, ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು, 14 ಜೂಜುಕೋರರನ್ನು ಬಂಧಿಸಿ 13 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

ಕಾರ್ಕಳ ಸಮೀಪದ ಪುತ್ತೂರು ಗ್ರಾಮದ ನಿಟ್ಟೂರು ಪೂಜಾ ಮಾರ್ಬಲ್ಸ್ ಸಮೀಪ ಶ್ರೀನಿವಾಸ್ ಪೂಜಾರಿಯವರ ಮನೆಯ ಬದಿಯಲ್ಲಿರುವ ಖಾಲಿ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದಾರೆಂಬುದಾಗಿ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಎಸ್ ಪಿ ಆದೇಶದಂತೆ ಎಎಸ್ ಪಿ ಕೃಷ್ಣಕಾಂತ್ ಸ್ಥಳಕ್ಕೆ ಬಂದು, ಹಣವನ್ನು ಪಣವಾಗಿಟ್ಟು ಜೂಜು ಆಡುತ್ತಿದ್ದವರನ್ನು ಬಂಧಿಸಿದ್ದಾರೆ.

ಎಸಿ ಕಾರು ಬಿಟ್ಟು ಬಸ್ ಏರಿ ಕಚೇರಿಗೆ ಬಂದ ಉಡುಪಿ ಜಿಲ್ಲಾಧಿಕಾರಿಎಸಿ ಕಾರು ಬಿಟ್ಟು ಬಸ್ ಏರಿ ಕಚೇರಿಗೆ ಬಂದ ಉಡುಪಿ ಜಿಲ್ಲಾಧಿಕಾರಿ

ಬಂಧಿತರನ್ನು ಕೃಷ್ಣ ಮಲ್ಪೆ ರಾಜೇಶ್, ಮನೋಜ್, ಜಗದೀಶ್ ಕುಂದರ್, ಅಕ್ಷಯ್ ಈರಪ್ಪ ಕಟ್ಟಗಿ, ನಿಟ್ಟೂರು, ಶ್ರೀನಿವಾಸ್ ನಿಟ್ಟೂರು, ನವೀನ್ ಕುಮಾರ್, ನಿಂಗಪ್ಪ ಚಲವಾದಿ, ಮುಕ್ತುಂ ಹುಸೇನ್ ತಹಶೀಲ್ದಾರ್, ಸುಜಿತ್, ಮಲ್ಪೆ, ಕೃಷ್ಣ, ಶಂಕರ್ ಕೋಟ್ಯಾನ್, ಮಂಜುನಾಥ್ ಕೆ., ಮಂಜುನಾಥ್ ಕಾರ್ನಾಡು ಎಂದು ಗುರುತಿಸಲಾಗಿದೆ.

 Police raided illegal gambling and arrested 14 members

ಬಂಧಿತ ಆರೋಪಿಗಳಿಂದ ಒಟ್ಟು 80,680 ರೂಪಾಯಿ ನಗದು ಹಾಗೂ ವಿವಿಧ ಕಂಪನಿಯ ಸುಮಾರು ರೂ.20,500 ಮೌಲ್ಯದ ಒಟ್ಟು 16 ಮೊಬೈಲ್ ಗಳು, ಸುಮಾರು ರೂ. 11,00,000 ಮೌಲ್ಯದ 2 ಕಾರುಗಳು, ರೂ. 1,40,000 ಮೌಲ್ಯದ 5 ಮೋಟಾರ್ ಸೈಕಲ್‌, ಒಟ್ಟು ಅಂದಾಜು 13,41,430 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

English summary
Udupi police team raided illegal gambling and thena arrested 14 members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X