ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದ.ಕ.ದಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ಮುಂದುವರೆದ ದಾಳಿ

|
Google Oneindia Kannada News

ಮಂಗಳೂರು, ಫೆಬ್ರವರಿ 12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಕೋರರ ಮೇಲೆ ಪೊಲೀಸರು ದಾಳಿ ಮುಂದುವರೆಸಿದ್ದಾರೆ. ಮಂಗಳೂರು ನಗರ ಹೊರವಲಯದ ಅಡ್ಡೂರು ಗ್ರಾಮದ ಬಳಿ ಫಲ್ಗುಣಿ ನದಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಆಕ್ರಮ ಮರಳುಗಾರಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಕಬ್ಬಿಣದ ದೋಣಿ ಮೂಲಕ ಮರಳನ್ನು ಅಕ್ರಮವಾಗಿ ತೆಗೆಯುತ್ತಿದ್ದ ಜಾಗಕ್ಕೆ ಬಜ್ಪೆ ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮ ಮರಳುಗಾರಿಕೆಯ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ.

Police raid illegal sand extraction unit near Manghaluru

ಅಕ್ರಮ ಮರಳು ಸಂಗ್ರಹ ಪತ್ತೆ ಹಚ್ಚಿ, ವಶಕ್ಕೆ ಪಡೆದ ರೋಹಿಣಿ ಸಿಂಧೂರಿಅಕ್ರಮ ಮರಳು ಸಂಗ್ರಹ ಪತ್ತೆ ಹಚ್ಚಿ, ವಶಕ್ಕೆ ಪಡೆದ ರೋಹಿಣಿ ಸಿಂಧೂರಿ

ದಾಳಿ ಸಂದರ್ಭದಲ್ಲಿ ಮರಳು ತುಂಬಿದ ಕಬ್ಬಿಣದ ದೋಣಿ, ಕುರುವ ಕಬ್ಬಿಣದ ದೋಣಿ, ಡ್ರೇಜ್ಜಿಂಗ್ ಯಂತ್ರವನ್ನು ಸೇರಿದಂತೆ ಇನ್ನಿತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Police raid illegal sand extraction unit near Manghaluru

 ರಾಯಚೂರು : ಮರಳು ಮಾಫಿಯಾ ಅಟ್ಟಹಾಸ, ಗ್ರಾಮ ಲೆಕ್ಕಾಧಿಕಾರಿ ಹತ್ಯೆ ರಾಯಚೂರು : ಮರಳು ಮಾಫಿಯಾ ಅಟ್ಟಹಾಸ, ಗ್ರಾಮ ಲೆಕ್ಕಾಧಿಕಾರಿ ಹತ್ಯೆ

ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ಮಾರ್ಗದರ್ಶನದಲ್ಲಿ ಎಸ್.ಪರಶಿವಮೂರ್ತಿ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಯವರಾದ ಶಂಕರ ನಾಯರಿ ಪೊಲೀಸ್ ಉಪನಿರೀಕ್ಷಕರು, ಎ.ಎಸ್.ಐ ಪೂವಪ್ಪ, ಠಾಣಾ ಸಿಬ್ಬಂದಿಗಳಾದ ರಾಜೇಶ್, ಅಭಿಷೇಕ್ ಪೂಜಾರಿ ಲಕ್ಷ್ಮಣ್ ಕಾಂಬಳೆ, ಹರಿಪ್ರಸಾದ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಪದ್ಮಶ್ರೀ, ಕಂದಾಯ ಇಲಾಖೆಯ ನಿರೀಕ್ಷಕರಾದ ಆಸಿಫ್ ಮತ್ತು ಗ್ರಾಮ ಕರಣಿಕರಾದ ಪ್ರಮೀಳಾ ಭಾಗಿಯಾಗಿರುತ್ತಾರೆ.

English summary
Mangaluru Bajpe police raided illegal sand extraction unit near Addur village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X