• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೂರು ನೀಡಲು ಬಂದ ಬಾಲಕಿ ಜೊತೆ ಹೆಡ್ ಕಾನ್‌ಸ್ಟೆಬಲ್ ಅನುಚಿತ ವರ್ತನೆ; ಬಂಧನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 28: ಆಟೋ ಚಾಲಕನಿಂದಾದ ಕಿರುಕುಳದ ಬಗ್ಗೆ ಹೆತ್ತವರ ಜೊತೆಗೆ ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಅಪ್ರಾಪ್ತ ಬಾಲಕಿಯ ಜೊತೆಗೆ ಹೆಡ್ ಕಾನ್‌ಸ್ಟೆಬಲ್ ಅನುಚಿತವಾಗಿ ವರ್ತಿಸಿರುವ ಘಟನೆ ಮಂಗಳೂರಿನ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿದ ಹೆಡ್ ಕಾನ್‌ಸ್ಟೆಬಲ್ ವಿರುದ್ಧ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿ ಆರೋಪಿಯನ್ನು ಬಂಧಿಸಲಾಗಿದೆ.

ಜುಲೈ 26ರಂದು ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿ ಕಿರುಕುಳ ನೀಡಿದ ಆಟೋ ಚಾಲಕನ ವಿರುದ್ಧ ದೂರು ನೀಡಲೆಂದು ಹೆತ್ತವರ ಜೊತೆ ಪೊಲೀಸ್ ಠಾಣೆಗೆ ಬಂದಿದ್ದಳು. ಈ ವೇಳೆ ದೂರು ಪ್ರತಿಯಲ್ಲಿ ಮೊಬೈಲ್‌ ನಂಬರ್ ಕೂಡಾ ದಾಖಲಿಸಿದ್ದಳು. ಆದರೆ ಈ ನಂಬರ್‌ನ್ನೇ ಪಡೆದ ಹೆಡ್ ಕಾನ್‌ಸ್ಟೆಬಲ್ ಬಾಲಕಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾನೆ. ಕರೆ ಮಾಡಿ ಮನೆಗೆ ಬರುವಂತೆ ಒತ್ತಾಯ ಮಾಡಿದ್ದಾನೆ.

ಹೆಡ್ ಕಾನ್‌ಸ್ಟೆಬಲ್ ಕಿರುಕುಳ ಜೋರಾಗುತ್ತಿದ್ದಂತೆಯೇ ಬಾಲಕಿ ಪೋಷಕರಿಗೆ ಹೇಳಿದ್ದು, ಪೋಷಕರು ಚೈಲ್ಡ್ ವೆಲ್‌ಫೇರ್‌ಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯ ಪ್ರವೃತರಾದ ಪೊಲೀಸರು ಆರೋಪಿ ಹೆಡ್ ಕಾನ್‌ಸ್ಟೆಬಲ್‌ನನ್ನು ಬಂಧಿಸಿದ್ದಾರೆ. ಪೂರಕ ಸಾಕ್ಷ್ಯಾಧಾರಗಳು ಲಭ್ಯವಾಗಿರುವುದರಿಂದ ನೀಚ ಪೊಲೀಸಪ್ಪ ಜೈಲು ಸೇರಿದ್ದಾನೆ.

English summary
The incident happened at Mangaluru police station where a police head constable behaved inappropriately with a minor girl.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X