ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

17.5 ಲಕ್ಷ ರೂ. ವಂಚನೆ ಪ್ರಕರಣ; ಪ್ರಸಾದ್ ಅತ್ತಾವರ ಬಂಧನ

|
Google Oneindia Kannada News

ಮಂಗಳೂರು, ಮಾರ್ಚ್ 29: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪ ಕುಲಪತಿ ಹುದ್ದೆ ಕೊಡಿಸುವ ಆಮಿಷವೊಡ್ಡಿ,ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಾದ್ ಅತ್ತಾವರ ಬಂಧಿಸಲಾಗಿದೆ.

ರಾಮ ಸೇನೆಯ ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷ ಪ್ರಸಾದ್ ಅತ್ತಾವರ 17.5 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂಬುದು ಆರೋಪವಾಗಿದೆ. ವಂಚನೆ ಪ್ರಕರಣದ ತನಿಖೆ ಕೈಗೊಂಡಿರುವ ಮಂಗಳೂರಿನ ಕಂಕನಾಡಿ ನಗರ ಪೊಲೀಸರು ಪ್ರಸಾದ್ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಬಹುಮಾನದ ಆಸೆ ಹುಟ್ಟಿಸಿ ಶಿವಮೊಗ್ಗದ ನರ್ಸ್‌ಗೆ 3 ಲಕ್ಷ ರೂ. ವಂಚನೆಬಹುಮಾನದ ಆಸೆ ಹುಟ್ಟಿಸಿ ಶಿವಮೊಗ್ಗದ ನರ್ಸ್‌ಗೆ 3 ಲಕ್ಷ ರೂ. ವಂಚನೆ

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪ ಕುಲಪತಿ ಹುದ್ದೆ ಕೊಡಿಸುವುದಾಗಿ ಆರೋಪಿ ವಿವೇಕ ಆಚಾರ್ಯ ಅವರಿಂದ ಹಣ ಪಡೆದು ವಂಚಿಸಿದ್ದ. ವಿವಿಯ ಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕರಾಗಿರುವ ವಿವೇಕ ಆಚಾರ್ಯ ಉಪ ಕುಲಪತಿ ಆಗಲು ಎಲ್ಲಾ ಅರ್ಹತೆ ಹೊಂದಿದ್ದಾರೆ.

ಶಿವಮೊಗ್ಗದಲ್ಲಿ ಹೆಚ್ಚಿದ ಸೈಬರ್ ಕ್ರೈಂ; 3.31 ಕೋಟಿ ವಂಚನೆ! ಶಿವಮೊಗ್ಗದಲ್ಲಿ ಹೆಚ್ಚಿದ ಸೈಬರ್ ಕ್ರೈಂ; 3.31 ಕೋಟಿ ವಂಚನೆ!

Prasad Attavar

ಪ್ರಸಾದ್ ಅತ್ತಾವರ ನಾನು ಮುಖ್ಯಮಂತ್ರಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಹುದ್ದೆ ಕೊಡಿಸಲು 15 ಲಕ್ಷ ಮತ್ತು ತಾನು ಓಡಾಟ ನಡೆಸಲು 2 ಲಕ್ಷ ರೂ. ಪಡೆದಿದ್ದರು. ಹಣ ಪಡೆದು ವರ್ಷಗಳು ಕಳೆದರೂ ಹುದ್ದೆ ಕೊಡಿಸಿರಲಿಲ್ಲ.

ನಿವೃತ್ತ ಡಿಜಿಪಿ ಇ ಮೇಲ್ ಐಡಿ ಹ್ಯಾಕ್ ಮಾಡಿ ವಂಚನೆ! ನಿವೃತ್ತ ಡಿಜಿಪಿ ಇ ಮೇಲ್ ಐಡಿ ಹ್ಯಾಕ್ ಮಾಡಿ ವಂಚನೆ!

ಇದರಿಂದಾಗಿ ವಿವೇಕ ಆಚಾರ್ಯ ಕಂಕನಾಡಿ ನಗರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಪ್ರಸಾದ್ ಅತ್ತಾವರ ಬಂಧಿಸಿದ್ದಾರೆ.

English summary
Police arrests Sri Rama Sene Former Member Prasad Attavar for cheating Rs 17.5 lakhs in the name of offering deputy councillor post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X