ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಸರಗೋಡಿನಲ್ಲಿ ಸಹೋದ್ಯೋಗಿಯಿಂದಲೇ ಶಿಕ್ಷಕಿ ಕೊಲೆ; ಗುಟ್ಟು ಬಿಟ್ಟುಕೊಟ್ಟಿತು ಒಂದೆಳೆ ಕೂದಲು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಕಾಸರಗೋಡು, ಜನವರಿ 25: ಜನವರಿ 14ರಂದು ನಾಪತ್ತೆಯಾಗಿ, ಶವವಾಗಿ ಪತ್ತೆಯಾಗಿದ್ದ ಇಲ್ಲಿನ ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕಿ ರೂಪಶ್ರೀ (44) ಕೊಲೆಗೆ ಸಂಬಂಧಿಸಿದಂತೆ ಸಹ ಶಿಕ್ಷಕ ಸೇರಿದಂತೆ ಇಬ್ಬರು ಆರೋಪಿಗಳನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ.

Recommended Video

Sarfaraz Khan follows up triple century with double ton against Himachal Pradesh in Ranji Trophy

ಜನವರಿ 14ರ ಸಂಜೆಯಿಂದ ನಾಪತ್ತೆಯಾಗಿದ್ದ ಶಿಕ್ಷಕಿ ರೂಪಶ್ರೀ ಎರಡು ದಿನಗಳ ನಂತರ, ಅಂದರೆ ಜ.16ರಂದು ಶವವಾಗಿ ಪೆರುವಾಡು ಕಡಲ ತೀರದಲ್ಲಿ ಪತ್ತೆಯಾಗಿದ್ದರು. ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಇಬ್ಬರನ್ನು ಬಂಧಿಸಿದ್ದಾರೆ. ರೂಪಶ್ರೀ ಅವರ ಶಾಲೆಯಲ್ಲೇ ಡ್ರಾಯಿಂಗ್ ಶಿಕ್ಷಕ ಆಗಿದ್ದ ವೆಂಕಟರಮಣ ಕಾರಂತ (50) ಹಾಗೂ ಆತನ ಸ್ನೇಹಿತ ನಿರಂಜನ್ ಎಂಬುವರನ್ನು ಬಂಧಿಸಿದ್ದಾರೆ.

 ಅದೇ ಶಾಲೆಯ ಡ್ರಾಯಿಂಗ್ ಶಿಕ್ಷಕನಿಂದಲೇ ಕೃತ್ಯ

ಅದೇ ಶಾಲೆಯ ಡ್ರಾಯಿಂಗ್ ಶಿಕ್ಷಕನಿಂದಲೇ ಕೃತ್ಯ

ಶಿಕ್ಷಕಿ ರೂಪಶ್ರೀ ಹಾಗೂ ಅದೇ ಶಾಲೆಯಲ್ಲಿ ಡ್ರಾಯಿಂಗ್ ಶಿಕ್ಷಕನಾಗಿದ್ದ ವೆಂಕಟರಮಣ ಅವರ ನಡುವೆ ಸ್ನೇಹ ಇತ್ತು. ಅವರ ನಡುವೆ ಆರ್ಥಿಕ ವ್ಯವಹಾರವೂ ಇತ್ತು. ಕೆಲ ಸಮಯದ ನಂತರ ಇದೇ ವಿಷಯಗಳು ಇಬ್ಬರ ನಡುವೆ ಕಲಹಕ್ಕೆ ಕಾರಣವಾಗಿದ್ದವು ಎಂದು ತಿಳಿದುಬಂದಿದೆ. ಹೀಗಾಗೇ ಮನೆಗೆ ಕರೆಸಿಕೊಂಡು ರೂಪಶ್ರೀ ಅವರನ್ನು ವೆಂಕಟರಮಣ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಬೆಂಗಳೂರು: ಹೆಂಡತಿಗಾಗಿ ಇಬ್ಬರು ಗಂಡಂದಿರ ಕಿತ್ತಾಟ ಕೊಲೆಯಲ್ಲಿ ಅಂತ್ಯಬೆಂಗಳೂರು: ಹೆಂಡತಿಗಾಗಿ ಇಬ್ಬರು ಗಂಡಂದಿರ ಕಿತ್ತಾಟ ಕೊಲೆಯಲ್ಲಿ ಅಂತ್ಯ

 ಬಕೆಟ್ ನಲ್ಲಿ ಮುಖ ಮುಳುಗಿಸಿ ಕೊಲೆ

ಬಕೆಟ್ ನಲ್ಲಿ ಮುಖ ಮುಳುಗಿಸಿ ಕೊಲೆ

ಜನವರಿ 14ರಂದು ಕಾರಣವೊಂದನ್ನು ನೀಡಿ ರೂಪಶ್ರೀಯನ್ನು ಮನೆಗೆ ಕರೆಸಿಕೊಂಡಿದ್ದ ವೆಂಕಟರಮಣ್ ನಂತರ ಜಗಳ ತೆಗೆದು ಬಕೆಟ್ ನಲ್ಲಿ ಅವರ ಮುಖ ಮುಳುಗಿಸಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ತನ್ನ ಸ್ನೇಹಿತ ನಿರಂಜನ್ ಜೊತೆ ಸೇರಿ, ಅವರ ಕಾರಿನಲ್ಲಿ ಹಾಕಿಕೊಂಡು ಹೊಳೆಗೆ ತೆಗೆದುಕೊಂಡು ಹೋಗಿ ಎಸೆದಿದ್ದಾರೆ. ಹೊಳೆಯಲ್ಲಿ ಮೃತದೇಹ ಸಿಕ್ಕಿದಂದಿನಿಂದಲೂ ಪೊಲೀಸರಿಗೆ ವೆಂಕಟರಮಣನ ಮೇಲೆ ಅನುಮಾನವಿತ್ತು.

 ಕಡಲ ತೀರದಲ್ಲಿ ಪತ್ತೆಯಾಗಿದ್ದ ಶವ

ಕಡಲ ತೀರದಲ್ಲಿ ಪತ್ತೆಯಾಗಿದ್ದ ಶವ

ರೂಪಶ್ರಿ ಅವರ ಮೃತದೇಹ ಜನವರಿ 16ರಂದು ಕುಂಬಳೆ ಸಮೀಪದ ಪೆರುವಾಡು ಕಡಲ ತೀರದಲ್ಲಿ ದೊರೆತಿತ್ತು. ಮಂಜೇಶ್ವರ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದರು. ಕುಟುಂಬಸ್ಥರು ಇದನ್ನು ಕೊಲೆ ಎಂದು ಆರೋಪಿಸಿದ್ದರು. ವಿವಿಧ ನಾಗರಿಕ ಸಂಘಟನೆಗಳು ಶಿಕ್ಷಕಿ ರೂಪಶ್ರೀ ಅವರ ಸಾವಿನ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಆದೇಶಿಸಿ ಹೋರಾಟ ನಡೆಸಿದ್ದವು.

ಅವಳು ಕಾಂಡೋಮ್ ಹಾಕಬೇಕು ಎಂದಿದ್ದಕ್ಕೆ ಕೊಲೆಯನ್ನೇ ಮಾಡಿದ..!ಅವಳು ಕಾಂಡೋಮ್ ಹಾಕಬೇಕು ಎಂದಿದ್ದಕ್ಕೆ ಕೊಲೆಯನ್ನೇ ಮಾಡಿದ..!

 ಗುಟ್ಟು ಬಿಚ್ಚಿಟ್ಟ ಕೂದಲು

ಗುಟ್ಟು ಬಿಚ್ಚಿಟ್ಟ ಕೂದಲು

ಕೊನೆಗೂ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ರೂಪಶ್ರೀ ಶಿಕ್ಷಕಿಯಾಗಿರುವ ಶಾಲೆಯಲ್ಲೇ ಶಿಕ್ಷಕನಾಗಿದ್ದ ವೆಂಟರಮಣ ಈ ಕೃತ್ಯ ನಡೆಸಿದ್ದು ಬೆಳಕಿಗೆ ಬಂದಿದೆ. ಕಾರನ್ನು ತಪಾಸಣೆ ನಡೆಸಿದಾಗ ಕಾರಿನ ಡಿಕ್ಕಿಯಲ್ಲಿ ಕೂದಲು ಪತ್ತೆಯಾಗಿತ್ತು. ಅದನ್ನು ಇಟ್ಟುಕೊಂಡು ಫಾರೆನ್ಸಿಕ್ ತಜ್ಞರು ಪರೀಕ್ಷಿಸಿದ್ದರು. ವೆಂಕಟರಮಣನನ್ನು ಹೆಚ್ಚಿನ ತನಿಖೆ ನಡೆಸಿದಾಗ ವಿಷಯ ಬಾಯಿ ಬಿಟ್ಟಿದ್ದಾನೆ. ವೆಂಕಟರಮಣನನ್ನು ಮೊದಲ ದಿನದಿಂದಲೇ ವಿಚಾರಣೆ ನಡೆಸಿದ್ದರೂ, ಯಾವುದೇ ಸುಳಿವು ಸಿಕ್ಕಿರಲಿಲ್ಲ.

English summary
Two persons, including a drawing teacher, were arrested yesterday in connection with the murder of Rupashree (44), a teacher of the Vidyadhar Higher Secondary School in kasargod
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X