ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಗೋಡೆ ಬರಹ ಪ್ರಕರಣ; ಒಬ್ಬ ಆರೋಪಿ ಬಂಧನ

By Lekhaka
|
Google Oneindia Kannada News

ಮಂಗಳೂರು, ಡಿಸೆಂಬರ್ 03: ಮಂಗಳೂರಿನಲ್ಲಿ ಈಚೆಗೆ ಆತಂಕಕ್ಕೆ ಕಾರಣವಾಗಿದ್ದ ದೇಶವಿರೋಧಿ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗುರುವಾರ ಮುಂಜಾನೆ ಆತನನ್ನು ವಶಕ್ಕೆ ಪಡೆದಿರುವ ಕದ್ರಿ ಪೊಲೀಸರು ವಿಚಾರಣೆ ಕೈಗೊಂಡಿರುವುದಾಗಿ ತಿಳಿದುಬಂದಿದೆ. ಆರೋಪಿಯನ್ನು ತೀರ್ಥಹಳ್ಳಿಯ ನಜೀರ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಮೊಬೈಲ್ ದಾಖಲೆ ಆಧಾರದಲ್ಲಿ ಈತನನ್ನು ಬಂಧಿಸಲಾಗಿದೆ.

 ಕಿಡಿಗೇಡಿಗಳ ಗೋಡೆ ಬರಹ; ಮಾಹಿತಿ ನೀಡುವಂತೆ ಜನರಲ್ಲಿ ಮನವಿ ಕಿಡಿಗೇಡಿಗಳ ಗೋಡೆ ಬರಹ; ಮಾಹಿತಿ ನೀಡುವಂತೆ ಜನರಲ್ಲಿ ಮನವಿ

ಈಚೆಗೆ ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು, ದೇಶದ್ರೋಹಿ ಬರಹವೊಂದನ್ನು ಗೋಡೆಯ ಮೇಲೆ ಬರೆದದ್ದು ಭಾರೀ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಕಲವೇ ದಿನಗಳ ಅಂತರದಲ್ಲಿ ಅದೇ ರೀತಿಯ ಬರಹ ನಗರದ ಕೋರ್ಟ್ ರಸ್ತೆಯ ಗೋಡೆಯೊಂದರಲ್ಲಿ ಕಾಣಿಸಿಕೊಂಡಿತ್ತು.

Mangaluru: Police Arrested One Person Regarding Wall Writing Case

ಅದರಲ್ಲಿ 'Gustuk e Rasool ek hi saza sar tan say juda' ಎಂದು ಗೋಡೆ ಮೇಲೆ ಬರೆದಿದ್ದು, "ಪ್ರವಾದಿಗೆ ಕೋಪ ಬಂದರೆ ಒಂದೇ ಶಿಕ್ಷೆ, ಅದು ತಲೆ ದೇಹದಿಂದ ಬೇರ್ಪಡುವುದು" ಎಂಬರ್ಥವಾಗಿತ್ತು.

Recommended Video

Atulya Ganga : ಗಂಗೆಯನ್ನು ಶುದ್ಧಗೊಳಿಸಲು ನಿವೃತ್ತ ಸೈನಿಕರ ಮಹಾ ಯೋಜನೆ | Oneindia Kannada

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಜನರಿಗೆ ಈ ಗೋಡೆ ಬರಹ ಬರೆದವರ ಸುಳಿವಿದ್ದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ನಗರ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ವಿನಂತಿ ಮಾಡಿದ್ದರು. ಇದೀಗ ಒಬ್ಬ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.

English summary
Kadri police arrested one person inrelation to writing Provocative words on wall at public places in mangaluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X