ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರುದ್ರಭೂಮಿಯಲ್ಲಿ ಟಿಕ್ ಟಾಕ್; ಮಂಗಳೂರಿನಲ್ಲಿ ನಾಲ್ವರ ಬಂಧನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 14: ಧಾರ್ಮಿಕ ನಂಬಿಕೆಗಳಿಗೆ ಘಾಸಿಯಾಗುವ ಕೃತ್ಯವೆಸಗಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Recommended Video

ಗಾಂಧೀಜಿ ಬಳಿ ಹೋಗಿ ಪ್ರಶ್ನೆ ಕೇಳಿದ ಮಂಗಳೂರಿನ ಯುವಕ..! | Mangalore | Mahatma Gandhi

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿ ನಾಲ್ವರು ಯುವಕರು ಹಿಂದೂ ರುದ್ರಭೂಮಿಯಲ್ಲಿ ಶಿವನ ವಿಗ್ರಹ ಪೀಠದ ಮೇಲೆ ಶೂ ಧರಿಸಿ ಟಿಕ್‍ಟಾಕ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಬಂಧಿತ ಆರೋಪಿಗಳನ್ನು ಸಜೀಪನಡು ನಿವಾಸಿಗಳಾದ ಮೊಹಮ್ಮದ್ ಮಸೂದ್ (20), ಮೊಹಮ್ಮದ್ ಅಜೀಮ್ (20), ಅಬ್ದುಲ್ ಲತೀಫ್ (20), ಮೊಹಮ್ಮದ್ ಅರ್ಫಾಜ್ (20) ಎನ್ನಲಾಗಿದೆ.

Police Arrested Four For Making Tik Tok Video In Burial Ground In Mangaluru

 ಕೊರೊನಾ ಬಗ್ಗೆ ಗೇಲಿ ಮಾಡಿದ್ದ ಟಿಕ್‌ಟಾಕ್ ಸ್ಟಾರ್‌ಗೂ ಸೋಂಕು ಪತ್ತೆ ಕೊರೊನಾ ಬಗ್ಗೆ ಗೇಲಿ ಮಾಡಿದ್ದ ಟಿಕ್‌ಟಾಕ್ ಸ್ಟಾರ್‌ಗೂ ಸೋಂಕು ಪತ್ತೆ

ಜೂನ್ 13ರಂದು ಈ ನಾಲ್ವರು ಶಿವನ ವಿಗ್ರಹ ಪೀಠದ ಮೇಲೆ ಶೂ ಧರಿಸಿ ಟಿಕ್‍ಟಾಕ್ ಮಾಡಿದ್ದರು. ಇದನ್ನು ನೋಡಿದ ರುದ್ರಭೂಮಿ ಅಧ್ಯಕ್ಷ ಹಿಂದೂ ಧಾರ್ಮಿಕ ಶೃದ್ಧಾ ಕೇಂದ್ರಕ್ಕೆ ಧಕ್ಕೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ವಿಡಿಯೋ ಆಧರಿಸಿ ತ್ವರಿತವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

English summary
Police have arrested four accused for making tik tok video that damages religious belief in Mangaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X