ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಳದಿ ಜೋಡಿ ಅನಕೊಂಡಗಳ ಆಗಮನಕ್ಕೆ ಕಾದಿದೆ ಪಿಲಿಕುಳ

ಬೇಸಿಗೆ ಕಾಲದಲ್ಲಿ ಪ್ರಾಣಿಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಾಟ ಮಾಡುವುದು ಪ್ರಯಾಸದ ಕೆಲಸ. ಹೀಗಾಗಿ ತಾಪಮಾನದಲ್ಲಿ ಸ್ವಲ್ಪ ಇಳಿಕೆ ಕಂಡು ಬಂದರೆ ಅನಕೊಂಡಗಳನ್ನು ಪಿಲಿಕುಳಕ್ಕೆ ಕರೆತರಲಾಗುವುದು.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 8: ಅನಕೊಂಡ.. ಈ ಹೆಸರು ಕೇಳಿದೊಡನೆಯೇ ಮೈ ಝುಮ್ಮೆನ್ನುತ್ತದೆ. ದೈತ್ಯ ಅನಕೊಂಡಗಳನ್ನು ಪರದೆಯ ಮೇಲೆ ನೋಡಿದ ಹಲವಾರು ಹಾಲಿವುಡ್ ಚಿತ್ರಗಳೂ ಮನಸ್ಸಿನಲ್ಲಿ ಹಾದು ಹೋಗಬಹುದು.

ಇದೇ ಅನಕೊಂಡಗಳನ್ನು ನಗರದ ವಾಮಂಜೂರಿನಲ್ಲಿರುವ ಪಿಲಿಕುಳ ನಿಸರ್ಗಧಾಮಕ್ಕೆ ಕರೆ ತರುವ ತಯಾರಿ ನಡೆಯುತ್ತಿದೆ. ಸದ್ಯದಲ್ಲಿಯೇ ನಾಲ್ಕು ಹಳದಿ ಅನಕೊಂಡಗಳು ಇಲ್ಲಿಗೆ ಬರಲಿವೆ. ಪಿಲಿಕುಳಕ್ಕೆ ಆಗಮಿಸುವವರಿಗೆ ಇವು ಒಂದು ಹೊಸ ಆಕರ್ಷಣೆಯಾಗಲಿವೆ.[3ರಿಂದ 63ಕ್ಕೆ ಕುಸಿತ, ಸ್ವಚ್ಛತೆಯಲ್ಲಿ ಮಂಗಳೂರು ಎಡವಿದ್ದೆಲ್ಲಿ?]

Pilikula biological park to get yellow anacondas soon

ಈ ಅನಕೊಂಡಗಳನ್ನು ಚೆನ್ನೈನಲ್ಲಿರುವ ಕ್ರೊಕಡೈಲ್ ಪಾರ್ಕ್ ಅಥವಾ ಶ್ರೀಲಂಕಾದಲ್ಲಿರುವ ನ್ಯಾಷನಲ್ ಝೂಲಾಜಿಕಲ್ ಗಾರ್ಡನ್ಸ್ ನಿಂದ ಪ್ರಾಣಿ ವಿನಿಮಯ ಕಾರ್ಯಕ್ರಮದಂಗವಾಗಿ ಪಿಲಿಕುಳಕ್ಕೆ ತರುವ ಯೋಚನೆಯಿದೆ ಎಂದು ಪಿಲಿಕುಳ ವನ್ಯಜೀವಿಧಾಮದ ನಿರ್ದೇಶಕ ಎಚ್ ಜಯಪ್ರಕಾಶ್ ಭಂಡಾರಿ ಹೇಳಿದ್ದಾರೆ.[ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಎಂಎಸ್ ಕೃಷ್ಣಾಗೆ ಅವಮಾನ]

ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರದಿಂದ ಅನುಮತಿ ಪಡೆದ ನಂತರ ಈ ಪ್ರಕ್ರಿಯೆ ನಡೆಯುತ್ತಿದೆ.
ಮೈಸೂರಿನ ಜಯಚಾಮರಾಜೇಂದ್ರ ಪ್ರಾಣಿಸಂಗ್ರಹಾಲಯದಲ್ಲಿ 2011ರಿಂದಲೇ ಹಸಿರು ಅನಕೊಂಡಾಗಳಿದ್ದು ಪಿಲಿಕುಳಕ್ಕೂ ಅವುಗಳು ಆಗಮಸಿದರೆ ಅನಕೊಂಡಾಗಳಿರುವ ರಾಜ್ಯದ ಎರಡನೇ ಪ್ರಾಣಿಸಂಗ್ರಹಾಲಯ ಎಂಬ ಕೀರ್ತಿಗೆ ಪಾತ್ರವಾಗಲಿದೆ. ಇನ್ನು ಹಳದಿ ಅನಕೊಂಡಗಳಿರುವ ರಾಜ್ಯದ ಮೊದಲನೇ ಪ್ರಾಣಿ ಸಂಗ್ರಹಾಲಯ ಪಿಲಿಕುಳ ನಿಸರ್ಗಧಾಮವಾಗಲಿದೆ.

English summary
Visitors to Pilikula Biological Park will soon see four yellow anacondas, making the park first in the state to have them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X