ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಲಿಕುಳದ ಕೆ. ಶಿವರಾಮ ಕಾರಂತ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್. 17 : ಪಿಲಿಕುಳದ ಕೆ. ಶಿವರಾಮ ಕಾರಂತ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ ಆಗಮನವಾಗಿದೆ. ಹತ್ತೂವರೆ ವರ್ಷದ ಕಾವೇರಿ ಎಂಬ ಹೆಣ್ಣು ನೀರಾನೆಯನ್ನು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಬರಮಾಡಿಕೊಳ್ಳಲಾಯಿತು.

ಈ ಮೂಲಕ ಪಿಲಿಕುಳ ಉದ್ಯಾನವನಕ್ಕೆ ಮೊದಲ ಬಾರಿಗೆ ನೀರಾನೆ ಬಂದಂತಾಗಿದೆ. ಇನ್ನು ಎರಡು ನೀರಾನೆಗಳು ಮುಂದಿನ ವಾರದೊಳಗೆ ಬಂದು ಕಾವೇರಿಯ ಜತೆಗೂಡಲಿವೆ.

Pilikula biological park gets 'Kaveri hippo' from Bannerghatta national park

ಹೊಸ ಅತಿಥಿಯಾಗಿ ಬಂದಿರುವ ಕಾವೇರಿಗೆ ಹಾಗೂ ಮುಂದಿನ ವಾರ ಬರಲಿರುವ ಎರಡು ನೀರಾನೆಗಳಿಗೆ ಸ್ನಾನಕ್ಕೆಂದು ಪಿಲಿಕುಳದಲ್ಲಿ ಈಗಾಗಲೇ ಎರಡು ದೊಡ್ಡ ಕೆರೆಗಳ ಜತೆಯಲ್ಲಿ ಮೂರು ಸಣ್ಣ ಕೆರೆಗಳನ್ನು ಸಿದ್ಧಪಡಿಸಲಾಗಿದೆ. ಹಾಗೂ ಆನೆಗಳ ಸುತ್ತಾಟಕ್ಕೆ ಒಂದು ಎಕರೆಯಷ್ಟು ಜಾಗ ಸಿದ್ಧವಾಗಿದೆ.

ಇದೀಗ ಪಿಲಿಕುಳಕ್ಕೆ ತರಲಾದ ಕಾವೇರಿ ನೀರಾನೆಗೆ ಹತ್ತೂವರೆ ವರ್ಷ ವಯಸ್ಸಿನದಾಗಿದ್ದು ಇದರ ಜೀವಿತಾವಧಿ 40ರಿಂದ 50 ವರ್ಷ ಎಂದು ಅಂದಾಜಿಸಲಾಗಿದೆ.

ನೀರಾನೆ ಅತ್ಯಂತ ಭಾರವಿರುವುದರಿಂದ ಒಮ್ಮೆಗೇ ಮೂರನ್ನೂ ಮಂಗಳೂರಿಗೆ ತರಲು ಕಷ್ಟ ಸಾಧ್ಯ ಹಾಗಾಗಿ ಇನ್ನೆರೆಡು ನೀರಾನೆಗಳನ್ನು ಮುಂದಿನ ವಾರದಲ್ಲಿ ತರಲಾಗುವುದು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್. ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.

English summary
Pilikula Biological Park at Moodushedde on the city outskirts welcomed Kaveri, a 10-1/2-year old female hippopotamus. Kaveri is one among three hippos that park has contracted from Bannerghatta National Park under the animal exchange programme approved by the Central Zoo Authority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X