ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಗವಿಕಲರ ಪ್ರಥಮ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ಚಾಂಪಿಯನ್

|
Google Oneindia Kannada News

ಮಂಗಳೂರು, ಡಿಸೆಂಬರ್ 17: ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಅಂಗವಿಕಲರ ಪ್ರಥಮ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ ದಲ್ಲಿ ಕರ್ನಾಟಕ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ನಿನ್ನೆ ಡಿಸೆಂಬರ್ 16 ಸಂಜೆ ನಡೆದ ಫೈನಲ್‌ನಲ್ಲಿ ಕನಾರ್ಟಕ ತಂಡ ಮಹಾರಾಷ್ಟ್ರ ತಂಡ ವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಕರ್ನಾಟಕದ ಎದರು ಪರಾಜಯಗೊಂಡ ಮಹಾರಾಷ್ಟ್ರ ತಂಡ ರನ್ನರ್‌ ಅಪ್ ಸ್ಥಾನಕ್ಕೆ ತೃಪ್ತಿಪಡೆದುಕೊಂಡಿದೆ.

ವಿಶಿಷ್ಟಚೇತನರ ಸಭೆಯಲ್ಲಿ 'ಕಾಲು ಮುರೀತಿನಿ' ಎಂದ ಬಿಜೆಪಿ ಸಚಿವ! ವಿಶಿಷ್ಟಚೇತನರ ಸಭೆಯಲ್ಲಿ 'ಕಾಲು ಮುರೀತಿನಿ' ಎಂದ ಬಿಜೆಪಿ ಸಚಿವ!

ಕರ್ನಾಟಕದ ಪರಮಾನಂದ ಕೆ.ಜಿ.ಉತ್ತಮ ರೈಡರ್, ಸುರೇಶ್ ಹಿಡಿತಗಾರ ವೈಯುಕ್ತಿಕ ಬಹುಮಾನ ಗೆದ್ದುಕೊಂಡರೆ, ಆಲ್‌ರೌಂಡರ್ ಗೌರ ಬಹುಮಾನ ವನ್ನು ಮಹಾರಾಷ್ಟ್ರದ ಸಚಿನ್ ತೆಂಡಲ್, ವಿಶೇಷ ಪುರಸ್ಕಾರವನ್ನು ಕರ್ನಾಟಕ ತಂಡದ ನಾಯಕ ರಾಘವೇಂದ್ರ ಪಡೆದುಕೊಂಡರು.

Physically challenged National Mens Kabaddi , Karnataka Champion

ಸಿಎಂ ಕಾರ್ಯಕ್ರಮದಲ್ಲಿ ಅಂಗವಿಕಲರಿಗಿಲ್ಲ ಬೆಲೆ ಸಿಎಂ ಕಾರ್ಯಕ್ರಮದಲ್ಲಿ ಅಂಗವಿಕಲರಿಗಿಲ್ಲ ಬೆಲೆ

ಅಂತಿಮ ಸುತ್ತಿನ ಪಂದ್ಯದಲ್ಲಿ 37- 14 ಅಂಕಗಳ ಅಂತರದಲ್ಲಿ ಕರ್ನಾಟಕ ತಂಡ ನಿರಾಯಾಸವಾಗಿ ಜಯಗೊಳಿಸಿತು. ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತೆಲಂಗಾಣ, ಗೋವಾ, ಜಾರ್ಖಂಡ್, ತಮಿಳುನಾಡು, ಮಧ್ಯಪ್ರದೇಶ, ಪಾಂಡಿಚೇರಿ, ರಾಜಸ್ಥಾನ, ಕೇರಳ ಸಹಿತ ರಾಷ್ಟ್ರದ ವಿವಿಧೆಡೆಗಳಿಂದ 12 ತಂಡಗಳು ಕೂಟದಲ್ಲಿ ಭಾಗವಹಿಸಿದ್ದವು.

English summary
1 st National Men's Kabaddi Championship for physically challenged held in Mangaluru . In this tournament Karnataka come out as champion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X