ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ಜಿಪಂನಲ್ಲಿ ಧೂಳು ಹಿಡಿಯುತ್ತಿವೆ ಅಂಗವಿಕಲರ ವಾಹನಗಳು!

|
Google Oneindia Kannada News

ಮಂಗಳೂರು, ಜುಲೈ. 11: ರಾಜ್ಯ ಸರ್ಕಾರದಿಂದ ಅಂಗವಿಕಲರಿಗಾಗಿ ಮಂಜೂರಾಗಿರುವ ವಾಹನಗಳು ವಿತರಣೆಯಾಗದೇ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ ಧೂಳು ಹಿಡಿಯುತ್ತಿರುವುದು ಬೆಳಕಿಗೆ ಬಂದಿದೆ.

ಜಿಲ್ಲೆಯ 91 ಅಂಗವಿಕಲರಿಗಾಗಿ ರಾಜ್ಯ ಸರ್ಕಾರದಿಂದ ವಾಹನಗಳೂ ಬಂದಿದ್ದರೂ ಅಧಿಕಾರಿಗಳ ಬೇಜವಾಬ್ದಾರಿಂದಾಗಿ ವಾಹನಗಳು ವಿತರಣೆಯಾಗದೇ ತುಕ್ಕು ಹಿಡಿಯುತ್ತಿವೆ.

ಎಂಥವರೂ ಮೆಚ್ಚಲೇಬೇಕು ವಿಕಲಚೇತನ ಸಮರ್ಥನ ಸಾಧನೆ!ಎಂಥವರೂ ಮೆಚ್ಚಲೇಬೇಕು ವಿಕಲಚೇತನ ಸಮರ್ಥನ ಸಾಧನೆ!

ಜಿಲ್ಲೆಯ 91 ಫಲಾನುಭವಿಗಳಿಗೆ 2017-18 ರ ಸಾಲಿನಲ್ಲಿ 91 ದ್ವಿಚಕ್ರ ವಾಹನಗಳು ಮಂಜೂರಾಗಿ ಕಳೆದ ಮಾರ್ಚ್ ತಿಂಗಳಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗೆ ಬಂದಿವೆ . ಆದರೆ ಅವುಗಳನ್ನು ಈ ವರೆಗೆ ವಿತರಿಸಲಾಗಿಲ್ಲ.

Persons with disabilities not got scooters in Dakshina Kannada district

ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದ ಕೆಳ ಅಂತಸ್ಥಿನಲ್ಲಿ ಈ ವಾಹನಗಳು ಧೂಳು ಹಿಡಿಯುತ್ತಿದ್ದು, ಮಳೆಗಾಲದ ಹಿನ್ನೆಲೆಯಲ್ಲಿ ಕೆಲ ವಾಹನಗಳು ತುಕ್ಕು ಹಿಡಿಯುತ್ತಿವೆ.

ಈ ದ್ವಿಚಕ್ರ ವಾಹನಗಳು ಇಲಾಖೆಗೆ ಬಂದ ಕಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಅವುಗಳ ವಿತರಣೆ ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ. ವಿಧಾನ ಸಭಾ ಚುನಾವಣೆಯ ಬಳಿಕ ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ವಾಹನ ವಿತರಣೆಗೆ ಅಡ್ಡಿಯಾಗಿತ್ತು.

ಆದರೆ ಎಲ್ಲಾ ಚುನಾವಣಾ ಪ್ರಕ್ರಿಯೆ ಮುಗಿದಿದೆ.ನೂತನ ಮೈತ್ರಿ ಸರ್ಕಾರ ರಚನೆಯಾಗಿದೆ ಆದರೂ ಫಲಾನುಭವಿಗಳಿಗೆ ಈ ದ್ವಿಚಕ್ರ ವಾಹನಗಳು ವಿತರಣೆಯಾಗಿಲ್ಲ.

Persons with disabilities not got scooters in Dakshina Kannada district

ಈ ವಾಹನಗಳನ್ನು ಜಿಲ್ಲಾ ಉಸ್ತುವಾರಿ ಸಚಿವರೇ ಫಲಾನುಭವಿಗಳಿಗೆ ವಿತರಿಸಬೇಕೆಂಬ ಅಧಿಕಾರಿಗಳ ಧೋರಣೆಯಿಂದಾಗಿ ಈ ವಾಹನಗಳು ಉಪಯೋಗಕ್ಕಿಲ್ಲದೇ ಧೂಳು ಹಿಡಿಯುತ್ತಿವೆ.

ಆದರೆ ಈ ವಾಹನಗಳತ್ತ ಅಧಿಕಾರಿಗಳೂ ತಲೆ ಕೆಡಿಸಿಕೊಂಡಿಲ್ಲ. ಜಿಲ್ಲಾಉಸ್ತುವಾರಿ ಸಚಿವರಿಗೆ ಈ ವಿಚಾರವೇ ಗೊತ್ತಿಲ್ಲ. ಅದರೆ ಅಂಗವಿಕಲ ಫಲಾನುಭವಿಗಳು ಮಾತ್ರ ವಾಹನಗಳಿಗಾಗಿ ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ಇನ್ನಾದರೂ ಸರ್ಕಾರ ಈ ವಾಹನಗಳ ವಿತರಣೆಗೆ ಗಮನ ಹರಿಸುವುದೋ ಕಾದು ನೋಡಬೇಕಿದೆ.

English summary
State government allotted 91 disabled scooters for Dakshina Kannada district in March for 2017-18. But officials not distributed in Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X