ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ಮಂಗಳೂರಲ್ಲಿ ಸಿಎಎ ವಿರುದ್ಧ ಹೋರಾಟಕ್ಕಾಗಿ ಬೋಟ್ ಏರಿದ ಮಂದಿ!

|
Google Oneindia Kannada News

Recommended Video

ಮಂಗಳೂರಲ್ಲಿ ಸಿಎಎ ವಿರುದ್ಧ ಹೋರಾಟಕ್ಕಾಗಿ ಬೋಟ್ ಏರಿದ ಮಂದಿ! | MANGALORE | CAA | ONEINDIA KANNADA

ಮಂಗಳೂರು, ಜನವರಿ.16: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ವಿರೋಧಿಸಿ ಮಂಗಳೂರಿನಲ್ಲಿ ವಿಶಿಷ್ಠ ಹಾಗೂ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಜನವರಿ.15ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಪೊಲೀಸರು ಅದಕ್ಕೆ ಅವಕಾಶ ನೀಡದ ಹಿನ್ನೆಲೆ ನಗರದ ಹೊರವಲಯದಲ್ಲಿರುವ ಅಡ್ಯಾರ್ ಕಣ್ಣೂರಿನ ಮಸೀದಿ ಪಕ್ಕದಲ್ಲಿನ ಆವರಣದಲ್ಲಿ ಸಮಾವೇಶ ನಡೆಸಲಾಯಿತು.

People Traveled By Boat To Mangaluru For Hold Protest Against CAA

ಇಂದು ಮಂಗಳೂರಿನಲ್ಲಿ ಸಿಎಎ ವಿರೋಧಿಸಿ ಬೃಹತ್ ಪ್ರತಿಭಟನೆಇಂದು ಮಂಗಳೂರಿನಲ್ಲಿ ಸಿಎಎ ವಿರೋಧಿಸಿ ಬೃಹತ್ ಪ್ರತಿಭಟನೆ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ವಿರುದ್ಧ ಪ್ರತಿಭಟನಾಕಾರರು ಬೋಟ್ ಗಳನ್ನು ಏರಿ ಸಮುದ್ರದಲ್ಲಿ ಪ್ರಯಾಣಿಸುವ ಮೂಲಕ ವಿರೋಧಿಸಿದರು.

ಸಮುದ್ರದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ:

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಿಸಲು ಮುಂದಾದ ಪ್ರತಿಭಟನಾಕಾರರು ಬೋಟ್ ಗಳನ್ನೇರಿ ಸಮುದ್ರಕ್ಕೆ ಇಳಿದರು. ತ್ರಿವರ್ಣ ಧ್ವಜವನ್ನು ಹಿಡಿದು ಸಿಎಎ ಹಾಗೂ ಎನ್ಆರ್ ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೋಟ್ ಗಳಲ್ಲಿ ಇರಿಸಿದ್ದ ರಾಷ್ಟ್ರಧ್ವಜಗಳು ಸಮುದ್ರದ ಮಧ್ಯದಲ್ಲಿ ರಾರಾಜಿಸುತ್ತಿದ್ದವು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

English summary
Citizenship Amendment Act: People Traveled By Boat To Mangaluru For Hold Protest Against Central Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X