ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಕ್ಷಿತ್ ಶೆಟ್ರೇ ಪುತ್ತೂರಿನ ಬೀದಿ ನಾಯಿಗಳ ಅನ್ನದಾತನಿಗೆ ನೆರವು ನೀಡುವಿರಾ?

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ, 25: ಪುತ್ತೂರಿನಲ್ಲಿ ಪೇಪರ್‌ ಏಜೆಂಟ್‌ ಆಗಿರುವ ರಾಜೇಶ್‌ ಬನ್ನೂರ್ ಎಂಬುವವರು 15 ವರ್ಷಗಳಿಂದ ಬೀದಿ ನಾಯಿಗಳ ಪೋಷಣೆ ಮಾಡುತ್ತಾ ಬಂದಿದ್ದಾರೆ. ಇದೀಗ ಅವರು ಆರ್ಥಿಕ ಪರಿಸ್ಥಿತಿಯಲ್ಲಿ ಕ್ಷೀಣಿಸಿದ ಕಾರಣ ಈ ಮಹತ್ವದ ಸೇವೆಯನ್ನು ನಿಲ್ಲಿಸಲು ಮುಂದಾಗಿದ್ದಾರೆ.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ ಚಿತ್ರ ಕನ್ನಡ ಸಿನಿರಸಿಕರನ್ನು ಮಾತ್ರವಲ್ಲದೇ, ಇಡೀ ಭಾರತದಾದ್ಯಂತ ಸದ್ದು ಮಾಡುತ್ತಿದೆ. ರಕ್ಷಿತ್‌ ಶೆಟ್ಟಿ ಅವರು ಚಾರ್ಲಿ ಚಿತ್ರದ ಅದ್ಭುತ ಯಶಸ್ಸನ್ನು ಬೀದಿ ನಾಯಿಗಳ ಏಳಿಗೆಗೆ ಅರ್ಪಿಸಿದ್ದಾರೆ. ಬೀದಿನಾಯಿಗಳ ಆರೈಕೆ ಮಾಡುವವರಿಗೆ ಚಿತ್ರದಿಂದ ಬಂದ ಲಾಭಾಂಶದ ಬಹುಪಾಲನ್ನು ನೀಡುವುದಾಗಿ ಹೇಳಿದ್ದಾರೆ. ಅದೇ ರೀತಿ ರಾಜೇಶ್‌ ಅವರಿಗೂ ತಾವು ಹೇಳಿದಂತೆ ರಾಜೇಶ್‌ ಶೆಟ್ಟಿ ಅವರಿಗೆ ನೆರವಾದರೆ ಅವರು ಮಹತ್ವದ ಕಾರ್ಯವನ್ನು ಮುಂದುವರೆಸಲು ಸಾಧ್ಯ ಎಂದು ಪುತ್ತೂರಿನ ಸ್ಥಳೀಯ ಆಶಯವಾಗಿದೆ.

ಅನುಷ್ಕ ಶೆಟ್ಟಿ ಅಣ್ಣನ ಹತ್ಯೆಗೆ ಸಂಚು: ಆರೋಪಿಗಳ ಬಂಧನಕ್ಕೆ ಆಗ್ರಹ ಅನುಷ್ಕ ಶೆಟ್ಟಿ ಅಣ್ಣನ ಹತ್ಯೆಗೆ ಸಂಚು: ಆರೋಪಿಗಳ ಬಂಧನಕ್ಕೆ ಆಗ್ರಹ

 ಬೀದಿನಾಯಿಗಳಿಗೆ ಪ್ರತಿನಿತ್ಯ ಆಹಾರ ವ್ಯವಸ್ಥೆ

ಬೀದಿನಾಯಿಗಳಿಗೆ ಪ್ರತಿನಿತ್ಯ ಆಹಾರ ವ್ಯವಸ್ಥೆ

ನಟ ರಕ್ಷಿತ್ ಶೆಟ್ಟಿ ಕೊಟ್ಟ ಮಾತನ್ನು ನಿಜವಾಗಿ ಈಡೇರಿಸುವುದಾದರೆ ಪುತ್ತೂರಿನ ಬೀದಿ ನಾಯಿಗಳ ಪಾಲಿನ ಅನ್ನದೇವರಾಗಿ ಗುರುತಿಸಿಕೊಂಡಿರುವ ರಾಜೇಶ್‌ ಅವರಿಗೆ ಸಹಾಯ ಹಸ್ತವನ್ನು ನೀಡಲಿ. ರಾಜೇಶ್‌ ಕಳೆದ 15 ವರ್ಷಗಳಿಂದ ಬೀದಿನಾಯಿಗಳ ಹೊಟ್ಟೆ ತುಂಬಿಸುವ ಕಾರ್ಯಗಳಲ್ಲಿ ಹೆಸರಾಗಿದ್ದರು. ಇದೀಗ ಆರ್ಥಿಕ ಸಂಕಷ್ಟದ ಕಾರಣದಿಂದ ನಾಯಿಗಳಿಗೆ ಅನ್ನ ಹಾಕುವ ಮಹತ್ವದ ಕಾರ್ಯ ನಿಲ್ಲಿಸಲು ಮುಂದಾಗಿದ್ದಾರೆ. ಪುತ್ತೂರಿನ ಪೇಪರ್ ಏಜೆಂಟ್ ರಾಜೇಶ್ ಇದೀಗ ಆರ್ಥಿಕ ಸಂಕಷ್ಟ ಎದುರಾಗಿ ನಾಯಿಗಳ ಆರೈಕೆಗಾಗಿ‌ ದಾನಿಗಳ ಬಳಿ ಸಹಾಯ ಯಾಚಿಸುತ್ತಿದ್ದಾರೆ. ಪ್ರತಿದಿನವೂ 150ಕ್ಕೂ ಮಿಕ್ಕಿದ ನಾಯಿಗಳಿಗೆ ಆಹಾರ ಸೇರಿದಂತೆ ಆರೋಗ್ಯವನ್ನೂ ನೋಡಿಕೊಳ್ಳುತ್ತಿದ್ದರು.

 ರಾಜಕೀಯ ವೃತ್ತಿ ತ್ಯಜಿಸಿದ್ದೇಕೆ?

ರಾಜಕೀಯ ವೃತ್ತಿ ತ್ಯಜಿಸಿದ್ದೇಕೆ?

ಪೇಪರ್ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿರುವ ರಾಜೇಶ್ ಬನ್ನೂರು ರಾಜಕೀಯದಲ್ಲೂ ತಮ್ಮನ್ನು ತೊಡಗಿಸಿಕೊಂಡವರು. ಪುತ್ತೂರಿನಲ್ಲಿ ಹಲವು ಬಾರಿ ಪುರಸಭೆ ಸದಸ್ಯರಾಗಿ ಮತ್ತು ಒಂದು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಸದ್ಯ ರಾಜಕೀಯದಿಂದ ದೂರ ಉಳಿದಿದ್ದು, ತನ್ನ ಪೇಪರ್ ಏಜೆಂಟ್ ಕೆಲಸವನ್ನು ಮುಂದುವರೆಸಿದ್ದಾರೆ.

 ಬೀದಿನಾಯಿಗಳ ಪೋಷಣೆಗೆ ಖರ್ಚಾಗುತ್ತಿದ್ದ ಹಣ?

ಬೀದಿನಾಯಿಗಳ ಪೋಷಣೆಗೆ ಖರ್ಚಾಗುತ್ತಿದ್ದ ಹಣ?

ರಾಜೇಶ್ ಬನ್ನೂರಿಗೆ ಪುತ್ತೂರು ನಗರದಾದ್ಯಂತ ಪರಿಚಯಸ್ಥ ನಾಯಿಗಳಿವೆ. ಈ ಕಾರಣಕ್ಕಾಗಿಯೇ ರಾಜೇಶ್ ಬನ್ನೂರು ತಿರುಗಾಡಿದ ಕಡೆಗಳಲ್ಲೆಲ್ಲಾ ನಾಯಿಗಳ ಬಳಗ ಇವರನ್ನು ಸುತ್ತುವರೆಯುತ್ತದೆ. ಇವರು ಪರಿಚಯ ನಾಯಿಗಳಿಗೆ ಆಹಾರ, ಆರೈಕೆ ನೀಡುತ್ತಿದ್ದರು.
ಪುತ್ತೂರು ನಗರದಾದ್ಯಂತ ಸುಮಾರು 200ಕ್ಕೂ ಹೆಚ್ಚು ನಾಯಿಗಳಿಗೆ ಅನ್ನ ಹಾಕಿದ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ. ನಾಯಿಗಳ ಆರೈಕೆ, ಆಹಾರಕ್ಕಾಗಿ ಪ್ರತಿದಿನ 1,000 ದಿಂದ 1,500 ರೂಪಾಯಿಗಳನ್ನು ವ್ಯಯಿಸುತ್ತಿದ್ದಾರೆ. ಕೆಲವು ಪರಿಚಯಸ್ಥರು ರಾಜೇಶ್‌ ಅವರ ಸೇವೆಗೆ ಕೈಲಾದ ಮಟ್ಟಿಗೆ ಸಹಕಾರವನ್ನು ನೀಡುತ್ತಿದ್ದಾರೆ. ಆದರೆ‌ ಇದರಲ್ಲಿ ಹೆಚ್ಚಿನ ಪಾಲನ್ನು ರಾಜೇಶ್ ಬನ್ನೂರು ಸ್ವತಃ ಹೊತ್ತುಕೊಳ್ಳುವುದರಿಂದ ಇದೀಗ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

ಸಹಾಯ ಮಾಡಲು ಮನವಿ

ಸಹಾಯ ಮಾಡಲು ಮನವಿ

ನಾಯಿಗಳಿಗೆ ಅನ್ನ ನೀಡುವುದನ್ನು ನಿಲ್ಲಿಸಬೇಕೆಂದು ಹಲವು ಬಾರಿ ನಿರ್ಧರಿಸಿದ್ದರೂ, ನಿರ್ಧಾರ ಮಾತ್ರ ಮುಂದೂಡಿಕೊಂಡೇ ಹೋಗಿದೆ. ಈ ಬಾರಿ ಮಾತ್ರ ನಿರ್ವಹಿಸಲಾರದ ಹಂತಕ್ಕೆ ತಲುಪಿರುವ ಕಾರಣ ಅನಿವಾರ್ಯವಾಗಿ ಸಮಾಜದ ಸಹಾಯಕ್ಕೆ ಕೈಯೊಡ್ಡಿದ್ದಾರೆ. ಅದರಲ್ಲೂ ಸಮಾಜ ಸೇವಾ ಸಂಘಗಳು ಮುಂದೆ ಬಂದಲ್ಲಿ ಬೀದಿ ನಾಯಿಗಳನ್ನು ಯಾವುದೇ ತೊಂದರೆಯಿಲ್ಲದೆ ನೋಡಿಕೊಳ್ಳಬಹುದು ಎನ್ನುವುದು ರಾಜೇಶ್ ಬನ್ನೂರು ಅವರ ಆಸೆಯಾಗಿದೆ. ಹೀಗಾಗಿ ನಟ ರಕ್ಷಿತ್ ಶೆಟ್ಟಿ ಮನಸ್ಸು ಮಾಡಿದರೆ ರಾಜೇಶ್ ಬನ್ನೂರು ಮತ್ತಷ್ಟು ವರ್ಷಗಳ‌‌ಕಾಲ ಈ ಮಹತ್ವದ ಕಾರ್ಯವನ್ನು ಮಾಡಬಹುದಾಗಿದೆ.

Recommended Video

Tiger Crossing Road: ಹುಲಿಯನ್ನ ರಸ್ತೆ ದಾಟಿಸಿದ ಪೊಲೀಸ್ ಅಧಿಕಾರಿ | *India | OneIndia Kannada

English summary
Rajesh Bannur, a paper agent in Puttur, has been fostering stray dogs for 15 years. Now they have decided to stop this important service due to deteriorating financial situation. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X