ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ರಾಜ್ಯಾಧ್ಯಕ್ಷರ ಊರಲ್ಲೇ ಮನಕಲಕುವ ಘಟನೆ: ಫೋಟೋ ವೈರಲ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 24: ಬಡ ರೋಗಿಯೊಬ್ಬರನ್ನು ಸುಮಾರು ಒಂದು ಕಿ.ಮೀ ತನಕ ಮರದ ಖುರ್ಚಿಯಲ್ಲಿ ಸಾಗಿಸಿದ ಮನಕಲಕುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಇನ್ನೂ ಆಶ್ಚರ್ಯದ ಸಂಗತಿ ಅಂದರೆ, ಇದು ನಡೆದಿದ್ದು ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ರವರ ಆದರ್ಶ ಗ್ರಾಮ ಯೋಜನೆಯ ಗ್ರಾಮದಲ್ಲಿ!

ಆಸ್ಪತ್ರೆಯ ಕಾರಿಡಾರ್‌ನಲ್ಲಿ ರೋಗಿಯನ್ನು ದರದರನೆ ಎಳೆದೊಯ್ದ ಸಿಬ್ಬಂದಿಆಸ್ಪತ್ರೆಯ ಕಾರಿಡಾರ್‌ನಲ್ಲಿ ರೋಗಿಯನ್ನು ದರದರನೆ ಎಳೆದೊಯ್ದ ಸಿಬ್ಬಂದಿ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಳ್ಪ ಗ್ರಾಮವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಸಂಸದರ ಆದರ್ಶ ಗ್ರಾಮವನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದೇ ಗ್ರಾಮದ ಪಡ್ಕಿಲಾಯ ಎಂಬ ಊರಿನಲ್ಲಿ ರಾಮಣ್ಣ ಪೂಜಾರಿ ಎಂಬ ವೃದ್ಧರೊಬ್ಬರ ಆರೋಗ್ಯ ಹದಗೆಟ್ಟ ಕಾರಣ ವೈದ್ಯಕೀಯ ಚಿಕಿತ್ಸೆಗಾಗಿ ಸುಮಾರು 1 ಕಿ.ಮೀನಷ್ಟು ದೂರ ಮರದ ಕುರ್ಚಿಯಲ್ಲಿ ಕಾಲ್ನಡಿಗೆ ಮೂಲಕ ಸಾಗಿಸಿದ ಫೋಟೊ ಇದೀಗ ಸಾಕಷ್ಟು ವೈರಲ್ ಆಗಿದೆ. ಮಾತ್ರವಲ್ಲ ಚರ್ಚೆಗೂ ಗ್ರಾಸವಾಗಿದೆ.

People Carried Patient In Wood Chair For One KM In Sulia

ಇದೆಂಥ ಆಸ್ಪತ್ರೆ ನೋಡಿ, ರೋಗಿಯನ್ನು ಬೆಡ್ ಶೀಟ್ ನಲ್ಲೇ ಎಳೆದೊಯ್ದರು! ಇದೆಂಥ ಆಸ್ಪತ್ರೆ ನೋಡಿ, ರೋಗಿಯನ್ನು ಬೆಡ್ ಶೀಟ್ ನಲ್ಲೇ ಎಳೆದೊಯ್ದರು!

ಈ ಊರಿನಲ್ಲಿ ಸರಿಯಾದ ರಸ್ತೆ ಸಂಪರ್ಕವಿಲ್ಲ, ವಾಹನದ ಸೌಲಭ್ಯಗಳೂ ಇಲ್ಲ. ಪರಿಣಾಮ, ಊರ ರೋಗಿಯೊಬ್ಬರನ್ನು ಮರದ ಕುರ್ಚಿಯಲ್ಲಿ ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಈ ಆದರ್ಶ ಗ್ರಾಮದಲ್ಲೇ ಈ ತರಹ ಪರಿಸ್ಥಿತಿ ಇದ್ದರೆ, ಬೇರೆ ಗ್ರಾಮಗಳನ್ನು ಕೇಳುವವರು ಯಾರು ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.

English summary
People carried a old patient one kilo meter distance in a wooden chair. This photo is viral as this village belongs to the adarsha grama of mp nalin kumar kateel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X