ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇರಳದಲ್ಲಿ ಜೈಲು ಪ್ರವಾಸೋದ್ಯಮ: ಹಣ ತೆತ್ತು ಜೈಲುವಾಸದ ಥ್ರಿಲ್ ಪಡೆಯಿರಿ!

|
Google Oneindia Kannada News

ಮಂಗಳೂರು, ಜುಲೈ 23: ಜೈಲುಗಳು ಹೇಗಿರುತ್ತೇ? ಅಲ್ಲಿ ಅಪರಾಧಿಗಳು ಯಾವ ರೀತಿ ಬದುಕುತ್ತಾರೆ ? ಅಲ್ಲಿಯ ಊಟ, ವಸತಿ ವ್ಯವಸ್ಥೆ ಹೇಗಿರುತ್ತೇ? ಅಲ್ಲಿ ಥ್ರಿಲ್ಲಾಗಿರಬಹುದಾ ? ಎನ್ನುವ ಕುತೂಹಲ ಇದೆಯಾ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ನೀವು ಕೇರಳಕ್ಕೆ ಹೋಗಬೇಕು.

ಅಪರಾಧ ಮಾಡದೇ ಜೈಲುವಾಸ ಅನುಭವಿಸಬೇಕೆಂಬ ಉತ್ಸುಕತೆ ಇರುವ ಉತ್ಸಾಹಿಗಳಿಗೆ ಅವಕಾಶ ನೀಡಲು ಕೇರಳ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕೇರಳದ ಜೈಲು ಇಲಾಖೆ, ಜೈಲು ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಚಿಂತನೆ ನಡೆಸಿದೆ. ಹಣತೆತ್ತು ಯಾರು ಬೇಕಾದರೂ ಒಂದು ದಿನದ ಮಟ್ಟಿಗೆ ಜೈಲು ವಾಸದ ಅನುಭವ ಪಡೆಯಬಹುದಾಗಿದೆ.

ಜೈಲಿನಲ್ಲಿ ಕೈದಿಗಳಂತೆ ಬಟ್ಟೆ ಧರಿಸಿ, ಜೈಲಿನ ಕಠಿಣ ಕಾನೂನುಗಳನ್ನು ಪಾಲಿಸಿ, ಜೈಲಿನಲ್ಲಿ ಕೈದಿಗಳಿಗೆ ನೀಡಲಾಗುವ ಆಹಾರ ಸೇವಿಸಿ ಜೈಲಿನಲ್ಲಿ ಒಂದು ದಿನ ಮಟ್ಟಿಗೆ ಉಳಿದುಕೊಳ್ಳುವ ಯೋಜನೆಯನ್ನು ಕೇರಳದ ಜೈಲು ಇಲಾಖೆ ರಾಜ್ಯ ಸರ್ಕಾರಕ್ಕೆ ನೀಡಿದೆ.

40 ಕೊಲೆಗೈದ ಗ್ಯಾಂಗ್ ಸ್ಟರ್ ಬಜರಂಗಿ ಹಿಂದಿನ ಕಥೆ!40 ಕೊಲೆಗೈದ ಗ್ಯಾಂಗ್ ಸ್ಟರ್ ಬಜರಂಗಿ ಹಿಂದಿನ ಕಥೆ!

ಕೇರಳದ ತ್ರಿಶ್ಯೂರಿನ ವಿಯ್ಯೂರ್ ಕೇಂದ್ರ ಕಾರಾಗೃಹ ಪರಿಸರದಲ್ಲಿ ಸಜ್ಜುಗೊಳ್ಳುತ್ತಿರುವ ಜೈಲು ಮ್ಯೂಸಿಯಂನೊಂದಿಗೆ ಹೊಂದಿಕೊಂಡು ಈ ನೂತನ ಯೋಜನೆ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ.

ಇದಕ್ಕಾಗಿ ಜೈಲು ಇಲಾಖೆ ಪುರುಷರಿಗೆ ಹಾಗು ಮಹಿಳೆಯರಿಗೆ ಪ್ರತ್ಯೇಕ ಬ್ಯಾರೆಕ್ ಗಳನ್ನು ಸಜ್ಜುಗೊಳಿಸುತ್ತಿದೆ. ಜೈಲುವಾಸದ ಅನುಭವಿಸ ಪಡುವ ಉತ್ಸಾಹಿಗಳು ಜೈಲುವಾಸಕ್ಕಾಗಿ ಆನ್ ಲೈನ್ ಮೂಲಕ ನೋಂದಾವಣಿ ಮಾಡಿಸಿ ಹಣ ಪಾವತಿಸಿದರೆ 24 ಗಂಟೆಗಳ ಕಾಲ ಜೈಲು ಶಿಕ್ಷೆ ಇಲ್ಲದೇ ಜೈಲುವಾಸ ಅನುಭವಿಸಬಹುದಾಗಿದೆ.

Pay and stay for one day in Kerala Jail for trill

ಕೇರಳ ಸರ್ಕಾರ ಜೈಲು ಮ್ಯೂಸಿಯಂ ಮತ್ತು ಈ ಯೋಜನೆಗಾಗಿ 6 ಕೋಟಿ ರೂಪಾಯಿ ಅನುದಾನವನ್ನು ಬಜೆಟ್ ನಲ್ಲಿ ಘೋಷಿಸಿತ್ತು. ಈಗಾಗಲೇ ಜೈಲು ಮ್ಯೂಸಿಯಂನ ರೂಪುರೇಷೆ ಅಂತಿಮ ಗೊಳಿಸಲಾಗಿದೆ. ಇದರೊಂದಿಗೆ ಈ ಜೈಲ್ ಟೂರಿಸಂ ಕೂಡ ಜಾರಿಗೆ ಬರಲಿದೆ.

ಜೈಲನ್ನು ಸಾಮಾನ್ಯ ಜನರಿಗೆ ಪರಿಚಯಿಸುವ ಹಾಗು ಅರ್ಥಮಾಡಿಸಿ ಕೊಡುವ ರೀತಿಯಲ್ಲಿ ಅವಕಾಶ ಕಲ್ಪಿಸಿಕೊಡುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆದರೆ ಇಲ್ಲಿ ಜೈಲಿನ ಖಾಯಂ ಕೈದಿಗಳೊಂದಿಗೆ ಉಳಿದುಕೊಳ್ಳಲು ಸಾಧ್ಯವಿಲ್ಲ.

ಈ ಯೋಜನೆಯ ಕುರಿತು ಕರ್ನಾಟಕದಲ್ಲೂ ಚಿಂತನೆ ನಡೆಸಲು ಹಲವಾರು ಅವಕಾಶಗಳಿವೆ. ರಾಜ್ಯದಲ್ಲಿ ಕೆಲವು ಇತಿಹಾಸ ಪ್ರಸಿದ್ಧ ಕಾರಾಗೃಹಗಳಿವೆ. ದೇಶದ ಇತಿಹಾಸದ ಅತ್ಯಂತ ಪ್ರಮುಖ ಘಟನೆಗಳು ನಡೆದ ಜೈಲುಗಳು ಕರ್ನಾಟಕದಲ್ಲಿವೆ . ಇಂತಹ ಕಾರಾಗೃಹಗಳಲ್ಲಿ ಜೈಲ್ ಪ್ರವಾಸೋದ್ಯಮಕ್ಕೆ ಚಿಂತಿಸಬಹುದಾಗಿದೆ.

ಸ್ವಾತಂತ್ರ್ಯ ಹೋರಾಟದ ಘಟನಾವಳಿಗಳಿಗೆ ಸಾಕ್ಷಿಯಾದ ಪುರಾತನ ಜೈಲು ಮಂಗಳೂರಿನಲ್ಲಿ ಇದೆ. ನೂತನ ಕಾರಾಗೃಹಕ್ಕೆ ಕೈದಿಗಳನ್ನು ಶಿಫ್ಟ್ ಮಾಡಿದ ಬಳಿಕ ಹಳೆ ಜೈಲು ಪಾಳು ಬೀಳುವ ಪರಿಸ್ಥಿತಿಯಲ್ಲಿದೆ . ಈ ಜೈಲನ್ನು ಮ್ಯೂಸಿಯಂ ಆಗಿ ಪರಿವರ್ತಿಸಿ ಜೈಲು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಬಹುದಾಗಿದೆ.

English summary
Kerala is known for tourism hospitality. Now Kerala soon get the distinction of hosting Jail Tourism
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X