ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿ ತಟ ರಕ್ಷಣೆಗೆ ಆನೆ ಬಲ ತುಂಬಿದ ಐಸಿಜಿಎಸ್ ವಿಕ್ರಮ್

|
Google Oneindia Kannada News

ಮಂಗಳೂರು, ಮೇ 14: ರಾಜ್ಯ ಕರಾವಳಿಯ ಆಳ ಸಮುದ್ರದಲ್ಲಿ ಗಸ್ತು ತಿರುಗುವ ಭಾರತೀಯ ತಟರಕ್ಷಣಾ ಪಡೆಯ ಬತ್ತಳಿಕೆಗೆ ಮತ್ತೊಂದು ಅಸ್ತ್ರ ಸೇರ್ಪಡೆಗೊಂಡಿದೆ. ಭಾರತೀಯ ತಟ ರಕ್ಷಣಾ ಪಡೆಗೆ ನಿಯೋಜನೆಗೊಂಡಿರುವ ಐಸಿಜಿಎಸ್ ವಿಕ್ರಮ್ ಕಣ್ಗಾವಲು ಹಡಗು ನವಮಂಗಳೂರು ಬಂದರು ತಲುಪಿದೆ.

ಭಾರತೀಯ ಕೋಸ್ಟ್ ಗಾರ್ಡ್ ಗೆ ಸೇರ್ಪಡೆಗೊಂಡಿರುವ ಐಸಿಜಿಎಸ್ ವಿಕ್ರಮ್ ನೌಕೆಯನ್ನು ಆಳ ಸಮುದ್ರದ ಕಾರ್ಯಾಚರಣೆಗೆ ಅತ್ಯಂತ ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಈ ನೌಕೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದ್ದು 98 ಮೀಟರ್ ಉದ್ದ, 15 ಮೀಟರ್ ಅಗಲ, 2100 ಟನ್ ಭಾರವಿದೆ.

ಮಂಗಳೂರು ಬಂದರಿಗೆ ಬಂದ ಇಬ್ಬರು ಹೊಸ ಅತಿಥಿಗಳುಮಂಗಳೂರು ಬಂದರಿಗೆ ಬಂದ ಇಬ್ಬರು ಹೊಸ ಅತಿಥಿಗಳು

ಗಂಟೆಗೆ 24 ನಾಟಿಕಲ್ ಮೈಲು ವೇಗದಲ್ಲಿ ಸಂಚರಿಸಬಲ್ಲ ಈ ನೌಕೆ ಎರಡು ಇಂಜಿನ್ ಗಳನ್ನು ಹೊಂದಿದ್ದು, ಒಂದು ಹೆಲಿಕಾಪ್ಟರನ್ನು ಹೊತ್ತಯ್ಯಬಲ್ಲದು. ಈ ನೌಕೆಯಲ್ಲಿ 30 ಎಂಎಂ ಗನ್ ಅಳವಡಿಸಲಾಗಿದ್ದು, ಕ್ಷಿಪ್ರ ಕಾರ್ಯಾಚರಣೆಗೆ 2 ಸ್ಪೀಡ್ ಬೋಟ್ ಗಳನ್ನು ಈ ನೌಕೆ ಹೊಂದಿದೆ. ಕಡಲ ಮಧ್ಯೆ ಅಗ್ನಿ ಅನಾಹುತಗಳ ವಿರುದ್ದ ಕಾರ್ಯಾಚರಣೆ ನಡೆಸಲು ಈ ನೌಕೆ ಸಕ್ಷಮ್ಯವಾಗಿದೆ.

Patrolling vessel ICGS Vikram reinforce Coast Guard In Managaluru

ಆಟೋಮೇಟೆಡ್ ಪವರ್ ಮ್ಯಾನೇಜ್ ಮೆಂಟ್ ವ್ಯವಸ್ಥೆ, ಸಮುದ್ರದ ನೀರನ್ನು ಶುದ್ಧೀಕರಿಸುವ ವಿಶೇಷ ತಂತ್ರಜ್ಞಾನ ಈ ನೌಕೆಯಲ್ಲಿ ಅಳವಡಿಸಲಾಗಿದೆ. ಕೋಸ್ಟ್ ಗಾರ್ಡ್ ನ 14 ಅಧಿಕಾರಿಗಳು ಹಾಗು 88 ಸಿಬ್ಬಂದಿ ಈ ನೌಕೆಯಲ್ಲಿ ಕರ್ತವ್ಯ ನಿರ್ಹಿಸಲಿದ್ದಾರೆ. ಈ ಅತ್ಯಾಧುನಿಕ ನೌಕೆ ಮಂಗಳೂರಿನಿಂದ ಕಾರ್ಯಚರಿಸಲಿದೆ.

ಹಡಗು ಯಾತ್ರಿಗಳಿಗೆ ಮಂಗಳೂರು ಬಂದರಿನಲ್ಲಿ ಇ-ವೀಸಾ ಸೌಲಭ್ಯ!ಹಡಗು ಯಾತ್ರಿಗಳಿಗೆ ಮಂಗಳೂರು ಬಂದರಿನಲ್ಲಿ ಇ-ವೀಸಾ ಸೌಲಭ್ಯ!

English summary
ICGS Vikram a patrolling vessel reinforce Coast Guard in Mangaluru. It strengthen the Indian Coast Guard's deep sea operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X