ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ಮೇಳ ಆರಂಭಿಸಿದ ಭಾಗವತ ಪಟ್ಟ ಸತೀಶ್ ಶೆಟ್ಟಿ

|
Google Oneindia Kannada News

ಮಂಗಳೂರು, ನವೆಂಬರ್ 25 : ಭಾಗವತ ಪಟ್ಲ ಸತೀಶ್ ಶೆಟ್ಟಿ ಹೊಸ ಮೇಳದ ಮೂಲಕ ಯಕ್ಷಗಾನದ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನವೆಂಬರ್ 27ರಿಂದ ತಿರುಗಾಟ ಆರಂಭಿಸಲಿದೆ.

ಮೇಳದ ಪ್ರಧಾನ ಭಾಗವತ ಮತ್ತು ಸಂಚಾಲಕ ಪಟ್ಲ ಸತೀಶ್ ಶೆಟ್ಟಿ ಈ ಕುರಿತು ಮಾಹಿತಿ ನೀಡಿದ್ದಾರೆ. ಪಾವಂಜೆಯ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ದೇವಸ್ಥಾನದ ನೂತನ ಮೇಳ ಯಕ್ಷಗಾನ ಮೇಳ ಪರಂಪರೆಗೆ ಹೊಸದಾಗಿ ಸೇರ್ಪಡೆಗೊಳ್ಳುತ್ತಿದೆ.

ಕಟೀಲು ಮೇಳದಿಂದ ಭಾಗವತ ಪಟ್ಲ ಸತೀಶ್ ಶೆಟ್ಟಿ ಔಟ್ಕಟೀಲು ಮೇಳದಿಂದ ಭಾಗವತ ಪಟ್ಲ ಸತೀಶ್ ಶೆಟ್ಟಿ ಔಟ್

ನೂತನ ಮೇಳವು 'ಪಾಂಡವಶ್ವಾಮೇಧ' ಎಂಬ ಪ್ರಸಂಗದ ಮೂಲಕ ನವೆಂಬರ್ 27ರಿಂದ ತಿರುಗಾಟವನ್ನು ಆರಂಭಿಸಲಿದೆ. ಮೇ 25ರ ತನಕ ಈಗಾಗಲೇ 156 ಪ್ರದರ್ಶನದ ಬುಕ್ಕಿಂಗ್ ಆಗಿದೆ. ಆರಂಭದ ವರ್ಷದಲ್ಲಿ ಮೇಳದ ಬುಕ್ಕಿಂಗ್‌ಗೆ 50 ಸಾವಿರದ ವೀಳ್ಯವನ್ನು ಪಡೆದುಕೊಳ್ಳಲಾಗುತ್ತಿದೆ.

ಯಕ್ಷಗಾನ ಮೇಳಗಳಿಗೆ ಸಿದ್ಧತೆ ಮಾಡಿಕೊಳ್ಳಿ: ಸಚಿವ ಶ್ರೀನಿವಾಸ ಪೂಜಾರಿಯಕ್ಷಗಾನ ಮೇಳಗಳಿಗೆ ಸಿದ್ಧತೆ ಮಾಡಿಕೊಳ್ಳಿ: ಸಚಿವ ಶ್ರೀನಿವಾಸ ಪೂಜಾರಿ

Patla Sathish Shetty Come Up With New Yakshagana Mela

ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಸಂಜೆ 6 ರಿಂದ 11ರ ತನಕ ಕಾಲಮಿತಿಯಲ್ಲಿ ಪೌರಾಣಿಕ ಪ್ರಸಂಗಗಳ ಯಕ್ಷಗಾನ ಪ್ರದರ್ಶನ ನಡೆಸಿಕೊಡಲಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಕಾಸರಗೋಡಿನಲ್ಲಿ ಈ ವರ್ಷದ ಪ್ರದರ್ಶನಗಳು ನಡೆಯಲಿವೆ.

 ತಣ್ಣಗಾಗದ ಕಟೀಲು ಮೇಳದ ಯಕ್ಷಗಾನ ವಿವಾದ; ಆಣೆ ಪ್ರಮಾಣದತ್ತ ಎರಡು ಬಣ ತಣ್ಣಗಾಗದ ಕಟೀಲು ಮೇಳದ ಯಕ್ಷಗಾನ ವಿವಾದ; ಆಣೆ ಪ್ರಮಾಣದತ್ತ ಎರಡು ಬಣ

ಇತರ ಮೇಳಕ್ಕೂ ಹೋಗಬಹುದು; ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರು ಮೇಳಕ್ಕೆ ತೊಂದರೆ ಆಗದಂತೆ ಇತರ ಮೇಳದಲ್ಲಿಯೂ ಪಾಲ್ಗೊಳ್ಳಬಹುದು.

ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಇತರ ಮೇಳದಿಂದಲೂ ಅತಿಥಿಯಾಗಿ ಆಹ್ವಾನ ಬಂದಿದೆ. ಆದ್ದರಿಂದ, ಈ ಮೇಳಕ್ಕೆ ಧಕ್ಕೆ ಆಗದ ರೀತಿಯಲ್ಲಿ ಇತರ ಮೇಳದಲ್ಲಿಯೂ ಪಾಲ್ಗೊಳ್ಳಲಿದ್ದಾರೆ. ಈ ನಿಯಮ ಇತರ ಕಲಾವಿದರಿಗೂ ಅನ್ವಯವಾಗಲಿದೆ.

2019ರಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಾಸ್ಥಾನದ ತಿರುಗಾಟದ ಸಂದರ್ಭದಲ್ಲಿ ರಂಗಸ್ಥಳದಲ್ಲಿಯೇ ಮೇಳದ ಯಜಮಾನರು ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರನ್ನು ಅವಮಾನ ಮಾಡಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸುದ್ದಿಯಾಗಿತ್ತು.

ಈ ಘಟನೆ ಬಳಿಕ ಮಾತನಾಡಿದ್ದ ಪಟ್ಲ ಸತೀಶ್ ಶೆಟ್ಟಿ ಅವರು, "ಕಟೀಲು ಮೇಳದಲ್ಲಿದ್ದು ಮುಂದೆಯೂ ದೇವರ ಸೇವೆ ಮಾಡುತ್ತೇನೆ. ಉಳಿದಂತೆ ಮುಂದಿನ ದಿನಗಳಲ್ಲಿ ನನ್ನ ತೀರ್ಮಾನವನ್ನು ಪ್ರಕಟಿಸುತ್ತೇನೆ" ಎಂದು ಹೇಳಿದ್ದರು.

English summary
Popular yakshagana bhagavatha Patla Sathish Shetty come up with new yakshagana mela. Pavange mela will start show from November 27, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X