ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಫೆ.14ರಂದು ಪಾಸ್‌ ಪೋರ್ಟ್ ಮೇಳ

|
Google Oneindia Kannada News

ಮಂಗಳೂರು, ಫೆ.4 : ಮಂಗಳೂರಿನಲ್ಲಿ ಫೆ.14ರಂದು ಪಾಸ್‌ಪೋರ್ಟ್ ಮೇಳ ಆಯೋಜಿಸಲಾಗಿದೆ. 4,700 ಜನರಿಗೆ ಅವಕಾಶವಿದ್ದು, ಫೆಬ್ರವರಿ 9ರ ಸಂಜೆ 4.30ರಿಂದ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಂಗಳೂರು, ಬೆಂಗಳೂರಿನ ಲಾಲ್‌ಬಾಗ್‌ ರಸ್ತೆ, ಸಾಯಿ ಅರ್ಕೆಡ್‌ ಹಾಗೂ ಹುಬ್ಬಳಿ ಸೇವಾ ಕೇಂದ್ರದಲ್ಲಿ ಫೆಬ್ರವರಿ 14ರಂದು ಪಾಸ್‌ಪೋರ್ಟ್ ಮೇಳ ನಡೆಯಲಿದೆ. ಫೆಬ್ರವರಿ 1 ರಂದು ನಡೆದ ಮೇಳದಲ್ಲಿ 4,700 ಅರ್ಜಿದಾರರಿಗೆ ಪೂರ್ವ ಪರವಾನಗಿ ಚೀಟಿ ವಿತರಣೆ ಮಾಡಲಾಗಿತ್ತು. ಈ ಪೈಕಿ 4,371 ಅರ್ಜಿದಾರರು ಮೇಳದಲ್ಲಿ ಭಾಗವಹಿಸಿದ್ದರು.[ಏನಿದು ಇ ಪಾಸ್ ಪೋರ್ಟ್? ಏನು ಪ್ರಯೋಜನ?]

passport

ಪಾಸ್‌ಪೋರ್ಟ್‌ ಅರ್ಜಿಗಳ ತ್ವರಿತ ವಿಲೇವಾರಿಗಾಗಿ ಪ್ರಾದೇಶಿಕ ಸೇವಾಕೇಂದ್ರವು ಫೆ.14ರಂದು ಪುನಃ ಮೇಳವನ್ನು ಆಯೋಜನೆ ಮಾಡಿದೆ. ನಾಲ್ಕು ಸೇವಾ ಕೇಂದ್ರಗಳಲ್ಲಿ ಪಾಸ್‌ಪೋರ್ಟ್‌ ಮೇಳ ನಡೆಯಲಿದ್ದು, 4,700 ಅಪಾಯಿಂಟ್‌ಮೆಂಟ್‌ಗಳಿಗೆ ಅವಕಾಶ ನೀಡಲಾಗಿದೆ. [ಪಾಸ್ ಪೋರ್ಟ್ ಪಡೆಯಲು ಆಧಾರ್ ಕಡ್ಡಾಯ?]

ಮೇಳದಲ್ಲಿ ಪಾಲ್ಗೊಳ್ಳಬಯಸುವವರು ಫೆ.9ರ ಸಂಜೆ 4.30ರಿಂದ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ www.passportindia.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

English summary
A Passport Mela is being organized in the Mangaluru city on February 14. This Mela is being held as per the specific instructions conveyed by the regional transport office at Bengaluru. Registration process will begin on February 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X