• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗ್ಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬಳಿ 5 ಗುಂಡುಗಳು ಪತ್ತೆ

|

ಮಂಗಳೂರು, ಜೂನ್ 07 : ಮಂಗಳೂರು ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳಸುತ್ತಿದ್ದ ವ್ಯಕ್ತಿಯೋರ್ವನ ಬಳಿ 5 ಸಜೀವ ಗುಂಡುಗಳು ಪತ್ತೆಯಾಗಿವೆ.

ಮಂಗಳೂರಿನ ಮೊಹಮ್ಮದ್ ಶಫೀಕ್ ಎನ್ನುವಾತ ಮಂಗಳವಾರ ಬೆಳಗ್ಗೆ ಜೆಟ್ ಏರ್‌ ವೇಸ್ ನಲ್ಲಿ ಮಂಗಳೂರಿನಿಂದ ದೆಹಲಿಗೆ ಪ್ರಯಾಣಿಸಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಸಂದರ್ಭದಲ್ಲಿ ಸಿಬ್ಬಂದಿಗಳು ಆತನನ್ನು ತಪಾಸಣೆಗೊಳಪಡಿಸಿದರು. ಈ ವೇಳೆ ಬ್ಯಾಗ್‌ ನಲ್ಲಿದ್ದ 0.22 ಎಂ.ಎಂ. ಗಾತ್ರದ 5 ಸಜೀವ ಗುಂಡು ಪತ್ತೆಯಾಗಿವೆ.

ಇನ್ನು ಈ ಬಗ್ಗೆ ಆತನಲ್ಲಿ ಪರವಾನಿಗೆ ಹಾಗೂ ದಾಖಲೆ ಪತ್ರಗಳ ಕುರಿತು ವಿಚಾರಿಸಿ ಆರೋಪಿಯನ್ನು ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ವಿಮಾನ ನಿಲ್ದಾಣದ ಸಿಬ್ಬಂದಿಗಳು ತಿಳಿಸಿದ್ದಾರೆ.

ತನ್ನ ತಂದೆ ತನ್ನ ಹೆಸರಿನಲ್ಲಿ ಗನ್ ಹೊಂದಿದ್ದಾರೆ. ಮತ್ತು 2016ರಲ್ಲಿ ಗೋವಾದಲ್ಲಿ ನವೀಕರಣಕ್ಕಾಗಿ ಪರವಾನಗಿ ನೀಡಲಾಗಿದೆ ಎಂದು ಶಾಫೀಕ್ ಬಜ್ಪೆ ಪೊಲೀಸರಿಗೆ ವಿವರಿಸಿದ್ದಾನೆ.

ಶಫೀಕ್ ನ ತಂದೆ ಪಿಸ್ತೂಲ್ ಮತ್ತು ಗುಂಡುಗಳನ್ನು ಸಾಗಿಸಲು ಪರವಾನಗಿ ಹೊಂದಿದ್ದಾರೆ. ಆದರೆ. ತಂದೆಯ ಲಗೇಜನ್ನು ಶಫೀಕ್ ಹೊಂದಿದ್ದರಿಂದ ಪ್ರಾಥಮಿಕ ತನಿಖೆಗಾಗಿ ಎಫ್ಐಆರ್ ದಾಖಲಿಸಲಾಗಿದೆ.

ತನಿಖೆ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಬಾಜ್ಪೆ ಪೊಲೀಸ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The personnel manning the international airport here handed over a person to Bajpe police station after finding that he was in possession of five live bullets. He had come to the airport to travel to New Delhi.The identity of the arrested passenger has been given as Muhammed Shafeeq.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more