ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳಮುಖಿಯರ ಪಾಲಿಗೆ 'ಪರಿವರ್ತನ' ಪರ್ವ ಆರಂಭ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 31: ಮಂಗಳಮುಖಿಯರನ್ನು ಒಗ್ಗೂಡಿಸಿ ಒಂದೇ ಸೂರಿನಡಿ ಅವರ ಸಮಸ್ಯೆಗಳಿಗೆ ಪರಿಹಾರ ಕಾಣುವ ಸಲುವಾಗಿ ಆರಂಭವಾದ ಪರಿವರ್ತನ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಿತು.

ಟ್ರಸ್ಟ್ ನ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಿದರು. ಆ ನಂತರ ಮಾತನಾಡಿ, ವೈಲೆಟ್ ಪಿರೇರಾ ಹಾಗೂ ನಂದಾ ಪಾಯಸ್ ಅವರ ವಿಶೇಷ ಮುತುವರ್ಜಿಯಿಂದ ಮಂಗಳಮುಖಿಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವುದರೊಂದಿಗೆ ತಮ್ಮ ಜೀವನದಲ್ಲಿ ಪರಿವರ್ತನೆ ಕಾಣಲು ಈ ಟ್ರಸ್ಟ್ ಸಹಕಾರಿಯಾಗಲಿದೆ ಎಂದು ಹೇಳಿದರು.[ಕಟೀಲು ದುರ್ಗಾಪರಮೇಶ್ವರಿ ದೇವಿ ಬಗ್ಗೆ ಅವಹೇಳನಕಾರಿ ಸಂದೇಶ]

'Parivarthana' charitable trust inaugurated in Mangaluru

ಈ ಟ್ರಸ್ಟಿನ ಮೂಲಕ ಮಂಗಳಮುಖಿಯರು ಮುಂದಿನ ದಿನಗಳಲ್ಲಿ ತಮ್ಮ ಹಕ್ಕಗಳಿಗಾಗಿ ದನಿಯೆತ್ತಲು ಅವಕಾಶ ಲಭಿಸಿದಂತಾಗಿದೆ. ಇಂತಹ ಟ್ರಸ್ಟಿನ ರಚನೆ ಆಲೋಚನೆ ನಿಜಕ್ಕೂ ಮಾದರಿ ಕಾರ್ಯ. ಎಲ್ಲ ಕಡೆಯೂ ಇಂತಹ ಟ್ರಸ್ಟ್ ಗಳ ರಚನೆಯಾಗಬೇಕು. ಕಾನೂನಿನ ವ್ಯಾಪ್ತಿಯಲ್ಲಿ ಮಂಗಳಮುಖಿಯರಿಗೆ ಅಧಿಕಾರಿಗಳು ರಕ್ಷಣೆ ನೀಡಬೇಕು. ಇಂತಹ ಟ್ರಸ್ಟ್ ಗಳಿಗೆ ಎಲ್ಲ ರೀತಿ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.[ಮೊಸರು ಕುಡಿಕೆ ಸ್ಪರ್ಧೆ ವೇಳೆ ಅವಘಡ, ಯುವಕ ಸಾವು]

'Parivarthana' charitable trust inaugurated in Mangaluru

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ ಮಾತನಾಡಿ, ಪರಿವರ್ತನ ಟ್ರಸ್ಟ್ ಮೂಲಕ ಮಂಗಳಮುಖಿಯರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವೇದಿಕೆ ರೂಪುಗೊಂಡಂತಾಗಿದೆ. ಸಮಾಜದ ಮುಖ್ಯವಾಹಿನಿ ಬರಲು ಸಹಕಾರಿಯಾಗುತ್ತದೆ. ವೀದೇಶಗಳಲ್ಲಿ ಮಂಗಳಮುಖಿಯರಿಗೆ ಈಗಾಗಲೇ ವಿವಿಧ ಹಕ್ಕುಗಳನ್ನು ನೀಡಲಾಗಿದ್ದು, ಇದನ್ನು ಭಾರತ ಕೂಡ ಪಾಲಿಸಿದರೆ ಉತ್ತಮ ಎಂದರು.

'Parivarthana' charitable trust inaugurated in Mangaluru

ಪರಿವರ್ತನ ಟ್ರಸ್ಟಿನ ಲೋಗೊ ಅನಾವರಣಗೊಳಿಸಿದ ನಗರ ಪೋಲಿಸ್ ಆಯುಕ್ತ ಚಂದ್ರಶೇಖರ್ ಮಾತನಾಡಿ, ಭಾರತೀಯದಲ್ಲಿ ಕಪ್ಪು ಬಣ್ಣದವರನ್ನು ಕೆಳ ಜಾತಿಯವರೆಂದು ನೋಡಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಯಾರನ್ನೂ ಜಾತಿ- ಬಣ್ಣದ ಆಧಾರದಲ್ಲಿ ಕೀಳಾಗಿ ಕಾಣಲು ಅವಕಾಶವಿಲ್ಲ. ಕೆಲವು ಮಂಗಳಮುಖಿಯರು ಮಾಡುವ ತಪ್ಪಿನಿಂದಾಗಿ ಎಲ್ಲರನ್ನೂ ದೂಷಿಸುವುದು ಸರಿಯಲ್ಲ ಎಂದು ಹೇಳಿದರು.[ಪುತ್ತೂರು ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ರೈತ ಬಜಾರ್ ಶುರು]

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪೂಂಜಾ, ಡಿಸಿಪಿಗಳಾದ ಸಂಜೀವ್ ಪಾಟೀಲ್, ಶಾಂತರಾಜು, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಟ್ರಸ್ಟಿನ ಟ್ರಸ್ಟಿ ವೈಲೆಟ್ ಪಿರೇರಾ, ನಂದಾ ಪಾಯಸ್ ಉಪಸ್ಥಿತರಿದ್ದರು. ಆಶಾ ನಾಯಕ್ ಅತಿಥಿಗಳನ್ನು ಸ್ವಾಗತ ಕೋರಿದರು, ವೈಲೆಟ್ ಪಿರೇರಾ ಟ್ರಿಸ್ಟಿನ ಚುಟುವಟಿಕೆ, ಕಾರ್ಯ ವಿವರದ ಮಾಹಿತಿ ನೀಡಿದರು.

English summary
'Parivarthana' a charitable trust started for betterment and solve the problems of transgenders. Inaugurated by MP Nalin kumar kateel in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X