ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧರ್ಮಸ್ಥಳದಲ್ಲಿ ಅಯೋಧ್ಯೆಯ ಗತ ವೈಭವ ಕಂಡು ಪ್ರೇಕ್ಷಕರು ಖುಷ್

|
Google Oneindia Kannada News

ಮಂಗಳೂರು, ಫೆಬ್ರವರಿ 12:ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ಅತ್ಯಂತ ಸಂಭ್ರಮದಿಂದ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಒಂದೆಡೆ ಪ್ರತಿ ದಿನ ಬಾಹುಬಲಿಗೆ ವಿಶೇಷ ಪೂಜೆ ಸಲ್ಲುತ್ತಿದ್ದರೆ, ಮತ್ತೊಂದೆಡೆ ಭರತ- ಬಾಹುಬಲಿಯ ಜೀವನಾಧಾರಿತ ರೂಪಕ ಪ್ರದರ್ಶನಗೊಳ್ಳುತ್ತಿದೆ.

ನೂರಾರು ಕಲಾವಿದರನ್ನು ಬಳಸಿಕೊಂಡು ಬಾಹುಬಲಿಯ ಶೌರ್ಯ, ತ್ಯಾಗವನ್ನು ಕಣ್ಣಿಗೆ‌ ಕಟ್ಟುವ ರೀತಿಯಲ್ಲಿ ಎಳೆಎಳೆಯಾಗಿ ಬಿಚ್ಚಿಡುವ ರೂಪಕ ಕಂಡು ಪ್ರೇಕ್ಷಕರು ಖುಷ್ ಆಗಿದ್ದಾರೆ.

ಲೇಸರ್ ಬೆಳಕಲ್ಲಿ ಮೂಡಿದ ಬಾಹುಬಲಿ ಜೀವನ ಚರಿತ್ರೆಗೆ ನಟ ರಮೇಶ್ ಪ್ರಶಂಸೆಲೇಸರ್ ಬೆಳಕಲ್ಲಿ ಮೂಡಿದ ಬಾಹುಬಲಿ ಜೀವನ ಚರಿತ್ರೆಗೆ ನಟ ರಮೇಶ್ ಪ್ರಶಂಸೆ

ಧರ್ಮಸ್ಥಳ ಅಯೋಧ್ಯೆಯಾಗಿ ಬದಲಾಗಿದ್ದು , ವೃಷಭನಾಥನ ಆಡಳಿತ ಧರ್ಮಸ್ಥಳದಲ್ಲಿತ್ತು. ಅಲ್ಲಲ್ಲಿ ನೃತ್ಯ ಕಾರ್ಯಕ್ರಮಗಳು, ಸಂಗೀತ ಕಾರ್ಯಕ್ರಮಗಳು, ಪ್ರಜೆಗಳ ಸಂತೋಷ ರಾಜ ವೈಭೋಗ ಅನಾವರಣಗೊಂಡಿತ್ತು.

ಧರ್ಮಸ್ಥಳದಲ್ಲಿ ಆಯೋಜಿಸಲಾಗಿದ್ದ ಪಂಚ ಮಹಾವೈಭವ ಅಯೋಧ್ಯೆಯ ಗತ ವೈಭವ ಸಾರಿತು. ಧರ್ಮಸ್ಥಳದ ಅಯೋಧ್ಯೆಯಲ್ಲಿ ನವಯುಗ ಆರಂಭವಾಗಿತ್ತು.ರಾಜ ವೃಷಭನಾಥ ಪ್ರಜೆಗಳಿಗೆ ನೆಮ್ಮದಿಯ ಜೀವನವನ್ನೂ ಕಲ್ಪಿಸಿದ್ದ. ಅದೇ ವೇಳೆ ಭರತ ಬಾಹುಬಲಿಯರೆಂಬ ಅನರ್ಘ್ಯ ರತ್ನಗಳ ಜನನವಾಗಿತ್ತು. ಇಂತಹ ಅದ್ಭುತ ದೃಶ್ಯ ಕಾವ್ಯ ಧರ್ಮದ ನೆಲೆವೀಡು ಧರ್ಮಸ್ಥಳದಲ್ಲಿ ಕಂಡು ಬಂದಿತ್ತು.

 ಧರ್ಮಸ್ಥಳದಲ್ಲಿ ಮೇಳೈಸಿದ ಬಾಹುಬಲಿಯ ಮಹಾಮಸ್ತಕಾಭಿಷೇಕದ ಸಂಭ್ರಮ ಧರ್ಮಸ್ಥಳದಲ್ಲಿ ಮೇಳೈಸಿದ ಬಾಹುಬಲಿಯ ಮಹಾಮಸ್ತಕಾಭಿಷೇಕದ ಸಂಭ್ರಮ

ಧರ್ಮಸ್ಧಳದ ಭಗವಾನ್ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಬಾಹುಬಲಿಯ ಜೀವನವನ್ನು ಸಾರುವ ಪಂಚಮಹಾವೈಭವ ಆರಂಭವಾಗಿದೆ. ಐದು ದಿನಗಳ ಕಾಲ ನಡೆಯುವ ಈ ಪಂಚ ಮಹೋತ್ಸವದಲ್ಲಿ ಇಂದು ನವಯುಗದ ಆರಂಭದ ಬಗ್ಗೆ ದೃಶ್ಯ ರೂಪಕ ಪ್ರದರ್ಶನ ಮಾಡಲಾಯಿತು. ಮುಂದೆ ಓದಿ...

 ಅದ್ಭುತಗಳಿಗೆ ಸಾಕ್ಷಿಯಾಗಿತ್ತು

ಅದ್ಭುತಗಳಿಗೆ ಸಾಕ್ಷಿಯಾಗಿತ್ತು

ಶ್ರೀ ಕ್ಷೇತ್ರ ಧರ್ಮಸ್ಥಳ ಸೋಮವಾರ (ಫೆ11) ಅದ್ಭುತಗಳಿಗೆ ಸಾಕ್ಷಿಯಾಗಿತ್ತು. ಭಗವಾನ್ ಬಾಹುಬಲಿ ಸ್ವಾಮಿಯ ಜೀವನ ಚರಿತ ಪಂಚ ಮಹಾವೈಭವ ಶ್ರೀ ಕ್ಷೇತ್ರದಲ್ಲಿ ಆರಂಭವಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ.ವೀರೇಂದ್ರ ಹೆಗ್ಗಡೆಯವರ ಪತ್ನಿ ಶ್ರೀ ಹೆಮಾವತಿ ಹೆಗ್ಗಡೆಯವರ ಪರಿಕಲ್ಪನೆ ,ರಂಗ ನಿರ್ದೇಶಕ ಜೀವನ್ ರಾಂ ಸುಳ್ಯರವರ ನಿರ್ದೇಶನದ ಪಂಚಮಹಾವೈಭವ ಜನರನ್ನು ಬೇರೇಯದೆ ಲೋಕಕ್ಕೆ ಕೊಂಡು ಹೋಗಿತ್ತು.

 ಅಯೋಧ್ಯೆಯ ವೈಭವ

ಅಯೋಧ್ಯೆಯ ವೈಭವ

ಅಮೃತವರ್ಷಿಣಿ ಸಭಾ ಭವನದ ಹಿಂಭಾಗದಲ್ಲಿ ನಿರ್ಮಿಸಲಾದ ಅತ್ಯಾಕರ್ಷಕ ಮಂಟಪದಲ್ಲಿ ನವವಯುಗದ ಆರಂಭದ ಬಗ್ಗೆ ದೃಶ್ಯ ರೂಪಕದಲ್ಲಿ ಅಂದಿನ ಅಯೋಧ್ಯೆಯ ವೈಭವೇ ಧರೆಗಿಳಿದು ಬಂದಿತ್ತು.

 ಧರ್ಮಸ್ಥಳದ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ ಆರಂಭ ಧರ್ಮಸ್ಥಳದ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ ಆರಂಭ

 ಮೆಚ್ಚುಗೆ ವ್ಯಕ್ತಪಡಿಸಿದ ವೀರೇಂದ್ರ ಹೆಗ್ಗಡೆ

ಮೆಚ್ಚುಗೆ ವ್ಯಕ್ತಪಡಿಸಿದ ವೀರೇಂದ್ರ ಹೆಗ್ಗಡೆ

ಪಂಚ ಮಹಾವೈಭವ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ, ನವ ಯುಗ ಆರಂಭದಲ್ಲಿ, ಜ್ಞಾನ ವೃದ್ಧಿ, ಜಗತ್ತಿನ ವೃದ್ಧಿಯನ್ನು ದೃಶ್ಯ ರೂಪಕದಲ್ಲಿ ತೋರಿಸಲಾಗಿದೆ. ಪಂಚಮಹಾ ಮಹೋತ್ಸವದ ಮೂಲಕ ಆಧಿನಾಥರ ಆಡಳಿತ, ಭರತ ಬಾಹುಬಲಿಯ ಶಿಕ್ಷಣ, ಭರತನ ದಿಗ್ವಿಜಯ ಯಾತ್ರೆ, ಧರ್ಮಯುಧ್ಧದ ಸನ್ನಿವೇಶ, ಬಾಹುಬಲಿಯ ತ್ಯಾಗ ತಪಸ್ಸನ್ನು ಹಂತ ಹಂತವಾಗಿ ತೋರಿಸಲಾಗುವುದು ಎಂದು ಹೇಳಿದರು.

 ಬಾಹುಬಲಿಯ ದಿಗ್ವಿಜಯ ಯಾತ್ರೆ

ಬಾಹುಬಲಿಯ ದಿಗ್ವಿಜಯ ಯಾತ್ರೆ

ಈ ದೃಶ್ಯ ರೂಪಕಕ್ಕಾಗಿ ಸುಮಾರು ಒಂದೂವರೆ ತಿಂಗಳಿನಿಂದ ಕಲಾವಿದರು ಶ್ರಮಪಟ್ಟಿದ್ದಾರೆ. 5 ದಿನಗಳ ದೃಶ್ಯರೂಪಕಕ್ಕೆ ಹೆಗ್ಗಡೆ ಕುಟುಂಬಿಕರು ಸೇರಿದಂತೆ 350ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದಾರೆ. ಫೆಬ್ರವರಿ 14 ರಂದು ಬಾಹುಬಲಿಯ ದಿಗ್ವಿಜಯ ಯಾತ್ರೆ ಸುಮಾರು 2 ಕೀಮೀ ವರೆಗೆ ನಡೆಯಲಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಲಕ್ಷಾಂತರ ಕೃಷಿಕರಿಗೆ ವರವಾಗಿದೆ: ಎಚ್ಡಿಕೆಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಲಕ್ಷಾಂತರ ಕೃಷಿಕರಿಗೆ ವರವಾಗಿದೆ: ಎಚ್ಡಿಕೆ

English summary
On the occasion of Dahrmasthala Bahubali Mahamasthakabhisheka Pancha Mahavaibhava performed in Sri Khetha Dharmasthala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X