ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಜನತೆಯ ಮನಸೆಳೆದ ಗಾಳಿಪಟ ಉತ್ಸವ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ,18: ಪಣಂಬೂರು ಕಡಲ ಕಿನಾರೆಯ ಬಾನಂಗಳದಲ್ಲಿ ಎಲ್ಲಿ ನೋಡಿದರಲ್ಲಿ 'ಚೆಲುವಿನ ಚಿತ್ತಾರ'. ಎಲ್ಲಿ ನೋಡಿದರಲ್ಲಿ ಬಣ್ಣಬಣ್ಣದ ಗಾಳಿಪಟಗಳು. ವಿಭಿನ್ನ ಪರಿಕಲ್ಪನೆಯಲ್ಲಿ ಮೂಡಿಬಂದ ಪಟಗಳು ಬಾನಂಗಳದಲ್ಲಿ ಹಾರುತ್ತಿರುವುದನ್ನು ನೋಡಿ ಪ್ರೇಕ್ಷಕರು ಸಂಭ್ರಮಿಸಿದರು.

ಟೀಂ ಮಂಗಳೂರು ಶನಿವಾರ ಸಂಜೆ ಪಣಂಬೂರು ಕಡಲ ಕಿನಾರೆಯಲ್ಲಿ ಆಯೋಜಿಸಿದ್ದ ಗಾಳಿಪಟ ಉತ್ಸವದಲ್ಲಿ ಕಂಡು ಬಂದ ದೃಶ್ಯವಿದು. ಈ ದೃಶ್ಯ ವೈಭವ ನೋಡಲು ಚಿಣ್ಣರಿಂದ ಹಿಡಿದು ಹಿರಿಯರ ತನಕ ಜನಸ್ತೋಮವೇ ಕಡಲ ಕಿನಾರೆಯಲ್ಲಿ ಸೇರಿತ್ತು. ಪಡುವಿನಂಚಿನಲ್ಲಿ ಸೂರ್ಯ ಮುಳುಗುತ್ತಿದ್ದಂತೆಯೇ ಇತ್ತ ಎಬಿಸಿಡಿ ಸಂಸ್ಥೆಯಿಂದ ನಡೆದ 'ಸಾಂಸ್ಕೃತಿಕ ವೈಭವ' ಗಾಳಿಪಟ ಉತ್ಸವಕ್ಕೆ ಮೆರುಗು ನೀಡಿತು.

ಉತ್ಸವದಲ್ಲಿ ಭಾರತೀಯ ಸಾಂಸ್ಕೃತಿಕ ಪ್ರತೀಕಗಳ ಬೃಹತ್ ಗಾಳಿಪಟಗಳ ಜತೆಗೆ ವಿದೇಶದ ಹಲವಾರು ತಾಂತ್ರಿಕ ಪ್ರಕಾರಗಳ ಮತ್ತು ವಾಯು ತುಂಬಿ ಹಾರಲಿರುವ ಎರೋಫೋಯ್ಗ್ ಗಾಳಿಪಟಗಳು ಬಾನಿಗೇರಿ ಮನರಂಜಿಸಿತು. ಜತೆಗೆ ತುಳುನಾಡಿನ ನೇತ್ರಾವತಿ ನದಿಯ ಸಂರಕ್ಷಣೆಗಾಗಿ 'ನೇತ್ರಾವತಿ ಉಳಿಸಿ' ಎಂಬ ಪರಿಸರ ಜಾಗೃತಿಯ ಸಂದೇಶವುಳ್ಳ ಗಾಳಿಪಟವೂ ಹಾರಾಡಿತು.

ಮಂಗಳೂರು ಪ್ರವಾಸಿ ತಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಗಾಳಿಪಟ ಉತ್ಸವ ಮಂಗಳೂರಿಗೆ ಹೊಸ ರಂಗು ತಂದಿದೆ ಎಂದು ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಹೇಳಿದರು. ಬನ್ನಿ ಗಾಳಿಪಟ ಉತ್ಸವದಲ್ಲಿ ಒಂದು ಸುತ್ತು ಹಾಕೋಣ, ಜನರ ಸಂಭ್ರಮದಲ್ಲಿ ನಾವು ಪಾಲ್ಗೊಳ್ಳೋಣ.[ಮಂಡ್ಯದಲ್ಲಿ ಬಾಯಿ ಚಪ್ಪರಿಸೋ ತಿನಿಸುಗಳು...]

ಟೀಂ ಮಂಗಳೂರು ಎಷ್ಟು ವರ್ಷದಿಂದ ಗಾಳಿಪಟ ಉತ್ಸವ ಆಯೋಜಿಸುತ್ತಿದೆ?

ಟೀಂ ಮಂಗಳೂರು ಎಷ್ಟು ವರ್ಷದಿಂದ ಗಾಳಿಪಟ ಉತ್ಸವ ಆಯೋಜಿಸುತ್ತಿದೆ?

ಗಾಳಿಪಟ ಹಾರಿಸುವುದರಲ್ಲಿ ವಿಶ್ವಖ್ಯಾತಿ ಪಡೆದ ಟೀಂ ಮಂಗಳೂರು ಕಳೆದ ಹದಿನೇಳು ವರ್ಷಗಳಿಂದ ವೈಶಿಷ್ಟ್ಯಪೂರ್ಣ ಗಾಳಿಪಟಗಳನ್ನು ಬಾನಂಗಳದಲ್ಲಿ ಹಾರಿಸುವ ಮೂಲಕ ಜನಮನ್ನಣೆ ಗಳಿಸಿತ್ತು.

ಈ ಬಾರಿಯ ವಿಶೇಷ ಏನು?

ಈ ಬಾರಿಯ ವಿಶೇಷ ಏನು?

'ಟೀಮ್ ಮಂಗಳೂರು' ಹವ್ಯಾಸಿ ಗಾಳಿಪಟ ತಂಡದ ಸಹಕಾರದೊಂದಿಗೆ ರೋಟರಿ ಕ್ಲಬ್ ಈ ಉತ್ಸವ ಆಯೋಜಿಸಿದ್ದು, ರಾತ್ರಿ ಬೆಳಕಿನ ವರ್ಣ ಲೇಪದೊಂದಿಗೆ ವಿಶೇಷವಾಗಿರುವ ನೈಟ್ ಕೈಟ್ ಫ್ಲೈಯಿಂಗ್ ಕೂಡಾ ಈ ಬಾರಿಯ ವಿಶೇಷ.

ಗಾಳಿಪಟ ಉತ್ಸವದ ಧ್ಯೇಯ ಏನಾಗಿತ್ತು?

ಗಾಳಿಪಟ ಉತ್ಸವದ ಧ್ಯೇಯ ಏನಾಗಿತ್ತು?

'ಸಮಾನತೆ ಮತ್ತು ಏಕತೆ' ಎಂಬ ದೃಷ್ಟಿಕೋನದಿಂದ ಒಂದೇ ಆಕಾಶ, ಒಂದೇ ನೆಲ, ಒಂದೇ ಕುಟುಂಬ' ಎಂಬ ಧ್ಯೇಯ ಘೋಷಣೆಯೊಂದಿಗೆ ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆದಿದೆ. ಜಾತಿ, ಧರ್ಮ, ಮತ, ಪಂಥ ಎಂಬ ಯಾವ ವಿಂಗಡನೆಯೂ ಇಲ್ಲದೆ ಸರ್ವರೂ ಸಂತಸ ಪಡುವಲ್ಲಿ ಸಮಾನ ಅರ್ಹರು ಎಂಬುದು ಈ ಉತ್ಸವದ ಮೂಲ ಉದ್ದೇಶವಾಗಿತ್ತು.

ಗಾಳಿಪಟ ಉತ್ಸವದಲ್ಲಿ ಯಾವ ಯಾವ ಮುಖವಾಡಗಳಿದ್ದವು?

ಗಾಳಿಪಟ ಉತ್ಸವದಲ್ಲಿ ಯಾವ ಯಾವ ಮುಖವಾಡಗಳಿದ್ದವು?

ಈ ಬಾರಿಯೂ ಕಥಕ್ ಯಕ್ಷಗಾನ ರೂಪಕ ವಿಭೀಷಣ'ನ ಮುಖವಾಡದ ಗಾಳಿಪಟ ನೆರದವರ ಪ್ರಶಂಸೆಗೆ ಪಾತ್ರವಾಯಿತು. ಇದರ ಜೊತೆಗೆ ಮೀನು, ಬೆಕ್ಕು, ಗೊಂಬೆಗಳ ಮುಖಗಳು ಗಾಳಿಪಟವಾಗಿದ್ದವು. ಜತೆಗೆ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಹಾಗೂ ಪತ್ನಿ ಬ್ಲಾಸಂ ಶ್ರೀದೇವಿಯ ಮುಖವರ್ಣದ ಗಾಳಿಪಟವನ್ನು ಹಾರಿಸಿದರು.

ಎಷ್ಟು ರಾಷ್ಟ್ರಗಳ ಗಾಳಿಪಟ ತಂಡಗಳು ಭಾಗವಹಿಸಿದ್ದವು?

ಎಷ್ಟು ರಾಷ್ಟ್ರಗಳ ಗಾಳಿಪಟ ತಂಡಗಳು ಭಾಗವಹಿಸಿದ್ದವು?

ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಆಸ್ಟ್ರೇಲಿಯಾ, ಟರ್ಕಿ, ನೆದರ್ ಲ್ಯಾಂಡ್, ಕಾಂಬೋಡಿಯಾ, ಉಕ್ರೇನ್, ಕುವೈಟ್, ಥಾಯ್ಲೆಂಡ್, ನೈಜೀರಿಯಾ, ಇಟಲಿ, ಭಾರತ ಸೇರಿದಂತೆ 14 ರಾಷ್ಟ್ರಗಳ ಗಾಳಿಪಟ ತಂಡಗಳು ಉತ್ಸವದಲ್ಲಿ ಭಾಗವಹಿಸಿದವು.

English summary
Panambur Beach Kite Utsav in Mangaluru. Above 14 nations participated in this Utsav. Team Mangaluru organiize in rhis Utsav from 16th Saturday to Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X