• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಗಣಿಯಿಂದ ಗೋಡೆ ಪೈಂಟ್ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ ಇರ್ದೆಯ ಡಾ. ಶಶಿಶೇಖರ್ ಭಟ್

|

ಮಂಗಳೂರು, ಫೆಬ್ರವರಿ 04: "ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವ ಮಾತು ಜನಜನಿತ. ಈ ಎರಡೂ ಕಾರ್ಯಗಳಲ್ಲಿ ಮುಂದಾಗುವ ಸಮಸ್ಯೆಗಳು, ಸಂಕಷ್ಟಗಳು ಎದುರಿಸಿದವನಿಗೇ ಗೊತ್ತು. ಕನಸಿನ ಮನೆ ಕಟ್ಟುವುದೆಂದರೆ ಸುಲಭದ ಮಾತಲ್ಲ.

ಹಲವಾರು ಕನಸು, ಆಸೆ, ಆಕಾಂಕ್ಷೆಗಳನ್ನಿಟ್ಟುಕೊಂಡು ಕಟ್ಟಿದ ಮನೆಯನ್ನು ಎಷ್ಟು ಸಾಧ್ಯವೋ, ಅಷ್ಟು ಸುಂದರವಾಗಿ ಮಾಡಲು ಪ್ರಯತ್ನಿಸದೇ ಇರುವವರು ಬಹಳ ವಿರಳ. ಅದೆಲ್ಲಾ ಒಂದು ಕಡೆಯಾದರೆ ಮನೆಯು ಅತ್ಯಂತ ಆಕರ್ಷಕವಾಗಿ ಕಾಣಲು ಟ್ರೆಂಡಿ ಕಲರ್ ಗಳನ್ನು ಬಳಸೋದು ಇಂದಿನ ಫ್ಯಾಷನ್ .

ಹೌದು, ಸಾಮಾನ್ಯವಾಗಿ ಮನೆಯ ಗೋಡೆ ಪೈಂಟ್ ಮಾಡಲು ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಪ್ರಕಾರದ ರಾಸಾಯನಿಕ ಮಿಶ್ರಿತ, ಸಿಂಥೆಟಿಕ್ ಪೈಂಟ್ ಗಳನ್ನು ಬಳಸಲಾಗುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ವ್ಯಕ್ತಿಯೊಬ್ಬರು ಈ ರಾಸಾಯನಿಕ ಪೈಂಟ್ ಗಳನ್ನು ಬಳಸದೆ ದೇಸಿ ಹಸುಗಳ ಸಗಣಿಯಲ್ಲೇ ಪೈಂಟ್ ತಯಾರಿಸಿ ಮನೆಯ ಗೋಡೆಗಳನ್ನು ಸಿಂಗರಿಸಿದ್ದಾರೆ.

ತನ್ನ ಮನೆಯನ್ನು ಸುಂದರವಾಗಿಡಲು ಜನ ಸಾಕಷ್ಟು ಕಸರತ್ತುಗಳನ್ನು ಮಾಡುತ್ತಾರೆ. ಕೋಟ್ಯಾಂತರ ರೂಪಾಯಿ ವ್ಯಯಿಸಿ ತನ್ನ ಮನೆಯನ್ನು ಇತರರಿಗಿಂತ ಭಿನ್ನವಾಗಿಡಲೂ ಪ್ರಯತ್ನಿಸುತ್ತಾರೆ. ಮನೆ ಅತ್ಯಂತ ಆಕರ್ಷಕವಾಗಿ ಕಾಣಲು ಅದಕ್ಕೆ ಬಳಿದಿರುವ ಬಣ್ಣಗಳೂ ಕಾರಣವಾಗುತ್ತದೆ.

ಪಂಚಗವ್ಯ - ರೈತರಿಗೆ ವರದಾನ

ಇದೇ ಕಾರಣಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಪ್ರಕಾರದ ಕೆಮಿಕಲ್ ಹಾಗೂ ಸಿಂಥೆಟಿಕ್ ಪೈಂಟ್ ಗಳನ್ನು ಗೋಡೆಗಳಿಗೆ ಬಳಸಿಕೊಳ್ಳುತ್ತಾರೆ. ಆದರೆ ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಕುಟುಂಬವೊಂದು ಸ್ವದೇಶಿ ಗೋವಿನ ಸೆಗಣಿಯನ್ನೇ ಪೈಂಟ್ ಆಗಿ ಬಳಸಿದೆ. ಮುಂದೆ ಓದಿ...

ಹೊಸ ಪ್ರಯೋಗ ಮಾಡಿದ ಡಾ. ಶಶಿಶೇಖರ್ ಭಟ್

ಹೊಸ ಪ್ರಯೋಗ ಮಾಡಿದ ಡಾ. ಶಶಿಶೇಖರ್ ಭಟ್

ಸಗಣಿಗೆ ಕೆಲವು ‍ಔಷಧೀಯ ಗಿಡಮೂಲಿಕೆಗಳನ್ನು ಬಳಸಿ ಸಿಂಥೆಟಿಕ್ ಪೈಂಟ್ ನಂತೆ ಗೋಡೆಗೆ ಅಂಟಿಕೊಳ್ಳುವಂತೆ ತಯಾರಿಸಿ ಮನೆಯ ಎಲ್ಲಾ ಕೋಣೆಗಳಿಗೂ ಬಳಿಯಲಾಗಿದೆ. ಇರ್ದೆಯ ಆಯುರ್ವೇದ ವೈದ್ಯರಾದ ಡಾ. ಶಶಿಶೇಖರ್ ಭಟ್ ಸೆಗಣಿಯನ್ನು ಬಳಸಿ ಈ ರೀತಿಯ ಹೊಸ ಪ್ರಯೋಗವನ್ನು ಮಾಡಿದ್ದು, ಸೆಗಣಿಯ ಈ ಪೈಂಟನ್ನು ವಿವಿಧ ಬಣ್ಣದಲ್ಲೂ ಸಿದ್ಧಪಡಿಸುವ ಯೋಜನೆಯನ್ನೂ ಇರಿಸಿಕೊಂಡಿದ್ದಾರೆ.

ಅಪನಗದೀಕರಣದಿಂದ ಕಡಿಮೆ ದರದಲ್ಲಿ ಮನೆಗಳು ದೊರೆಯುತ್ತಿವೆ: ಮೋದಿ

ಸಗಣಿಯ ರೋಗ ನಿರೋಧಕ ಶಕ್ತಿ ಪರಿಣಾಮ ಬೀರಲಿ

ಸಗಣಿಯ ರೋಗ ನಿರೋಧಕ ಶಕ್ತಿ ಪರಿಣಾಮ ಬೀರಲಿ

ಅನಾದಿ ಕಾಲದಿಂದಲೂ ಸಗಣಿಯನ್ನು ಅತ್ಯಂತ ಪವಿತ್ರ ಹಾಗೂ ರೋಗ ನಿರೋಧಕ ಶಕ್ತಿಯುಳ್ಳ ವಸ್ತುವನ್ನಾಗಿ ಬಳಸಿಕೊಳ್ಳಲಾಗುತ್ತಿದ್ದು, ಹಿಂದಿನ ಕಾಲದಲ್ಲೂ ಸಗಣಿಯನ್ನು ಗೋಡೆಗಳಿಗೆ ಹಾಗೂ ನೆಲಕ್ಕೆ ಬಳಿಯುವಂತಹ ವ್ಯವಸ್ಥೆಗಳಿತ್ತು. ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ ಇದು ನೇಪತ್ಯಕ್ಕೆ ಸರಿದ ಪರಿಣಾಮ ರಾಸಾಯನಿಕ ಮಿಶ್ರಿತ ಪೈಂಟ್ ಗಳನ್ನು ಬಳಸಲು ಆರಂಭವಾಗಿದೆ. ಅಂದಹಾಗೆ ಮನೆ ಮಂದಿಯ ಆರೋಗ್ಯದ ಮೇಲೆ ಸಗಣಿಯ ರೋಗ ನಿರೋಧಕ ಶಕ್ತಿ ಪರಿಣಾಮ ಬೀರಲಿ ಎನ್ನುವುದು ಡಾ.ಶಶಿಶೇಖರ್ ಭಟ್ ಅವರ ಉದ್ದೇಶವಾಗಿದೆ.

ಧರ್ಮಸ್ಥಳದಲ್ಲಿ ಪ್ರದರ್ಶನಗೊಂಡ ಸುಂದರವಾದ ಮಾದರಿ ಮನೆ

ಇಂಥ ಪೈಂಟ್ ಗಳು ಹೆಚ್ಚು ಮಾರುಕಟ್ಟೆಗೆ ಬರಲಿ

ಇಂಥ ಪೈಂಟ್ ಗಳು ಹೆಚ್ಚು ಮಾರುಕಟ್ಟೆಗೆ ಬರಲಿ

ರಾಸಾಯನಿಕ ಮಿಶ್ರಿತ ಸಿಂಥೆಟಿಕ್ ಪೈಂಟ್ ಗಳಂತೆಯೇ ಸಗಣಿಯ ಪೈಂಟ್ ಅನ್ನು ಬಳಸಬಹುದಾಗಿದೆ. ಸಾಮಾನ್ಯವಾಗಿ ಎಲ್ಲಾ ಪೈಂಟ್ ಗಳನ್ನು ಗೋಡೆಗೆ ಎರಡು ಬಾರಿ ಬಳಿಯುವಂತೆ ಸಗಣಿಯ ಪೈಂಟನ್ನೂ ಎರಡು ಬಾರಿ ಬಳಿಯಬೇಕಾಗುತ್ತದೆ. ಅಲ್ಲದೇ, ಈ ಪೈಂಟ್ ವಾಟರ್ ಫ್ರೂಪ್ ಕೂಡ ಆಗಿದೆ. ರಾಸಾಯನಿಕ ಪೈಂಟ್ ಗಳನ್ನು ಬಳಿಯುವಾಗ ಇರುವ ಕಣ್ಣುರಿತ, ತುರಿಕೆಯ ಲಕ್ಷಣಗಳು ಸೆಗಣಿಯಿಂದ ತಯಾರಿಸಿದ ಪೈಂಟ್ ನಲ್ಲಿ ಇಲ್ಲದ ಕಾರಣ ಪೈಂಟರ್ ಗಳೂ ಇಂಥ ಪೈಂಟ್ ಗಳು ಹೆಚ್ಚೆಚ್ಚು ಮಾರುಕಟ್ಟೆಗೆ ಬರಬೇಕು ಎನ್ನುವ ಇಚ್ಛೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಮಾರುಕಟ್ಟೆಗೆ ಪ್ರವೇಶಿಸುವ ದಿನಗಳು ಹತ್ತಿರವಾಗಲಿದೆ

ಮಾರುಕಟ್ಟೆಗೆ ಪ್ರವೇಶಿಸುವ ದಿನಗಳು ಹತ್ತಿರವಾಗಲಿದೆ

ಕೇವಲ ಸ್ವದೇಶಿ ತಳಿಯ ಗೋವಿನ ಸಗಣಿಯಿಂದ ಮಾತ್ರವೇ ಈ ಸೆಗಣಿ ಪೈಂಟ್ ತಯಾರಿಸಲು ಸಾಧ್ಯ. ಸಗಣಿಯನ್ನು ಕೇವಲ ಗೋಬರ್ ಗ್ಯಾಸ್ ಹಾಗೂ ಗೊಬ್ಬರಕ್ಕೆ ಬಳಸುತ್ತಿದ್ದ ಕಾಲ ಇನ್ನು ದೂರವಾಗಲಿದ್ದು, ಸಗಣಿಯ ಪೈಂಟ್ ಮಾರುಕಟ್ಟೆಗೆ ಪ್ರವೇಶಿಸುವ ದಿನಗಳು ಹತ್ತಿರವಾಗಲಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A doctor from puttur painted his house with paint made with cow dung. Here's a detailed article about this.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more