ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪದ್ಮಶ್ರೀ ಪುರಸ್ಕೃತ ಚಮೂ ಕೃಷ್ಣಶಾಸ್ತ್ರಿ ವ್ಯಕ್ತಿಚಿತ್ರ

ಮಂಗಳೂರು ಮೂಲದ ಚಮೂ ಕೃಷ್ಣಶಾಸ್ತ್ರಿ ಅವರಿಗೆ ಈ ಸಾಲಿನ "ಪದ್ಮಶ್ರೀ" ಲಭಿಸಿದೆ. ಸಂಸ್ಕೃತಕ್ಕೆ ಕ್ಷೇತ್ರಕ್ಕೆ ನೀಡಿದ ಅಪಾರ ಸೇವೆಗಾಗಿ ಅವರಿಗೆ ಈ ಪ್ರಶಸ್ತಿಯು ಕೊಡಮಾಡಿದೆ.

By Mahesh
|
Google Oneindia Kannada News

ಮಂಗಳೂರು, ಜನವರಿ 26: ಕೇಂದ್ರ ಸರಕಾರವು ನೀಡುವ 2017ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಮೂಲದ ಚಮೂ ಕೃಷ್ಣಶಾಸ್ತ್ರಿಅವರಿಗೆ ಈ ಸಾಲಿನ "ಪದ್ಮಶ್ರೀ" ಲಭಿಸಿದೆ.

ಸಂಸ್ಕೃತಕ್ಕೆ ಕ್ಷೇತ್ರಕ್ಕೆ ನೀಡಿದ ಅಪಾರ ಸೇವೆಗಾಗಿ ಅವರಿಗೆ ಈ ಪ್ರಶಸ್ತಿಯು ಕೊಡಮಾಡಿದೆ. ಸಂಸ್ಕೃತ ಜಗತ್ತಿನ ಅನೇಕ ಗಣ್ಯರು ಚಮೂ ಕೃಷ್ಣಶಾಸ್ತ್ರಿಅವರಿಗೆ ಅವರಿಗೆ ಈ ಪ್ರಶಸ್ತಿ ಲಭಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

1956ರ ಜನವರಿ 23ರಂದು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದಲ್ಲಿ ಜನಿಸಿದ ಚ ಮೂ ಕೃಷ್ಣಶಾಸ್ತ್ರಿಯವರು ಸದ್ಯ ದೆಹಲಿ ನಿವಾಸಿಯಾಗಿದ್ದಾರೆ. ಸಂಸ್ಕೃತ, ಕನ್ನಡ, ಹಿಂದಿ, ಇಂಗ್ಲಿಶ್‌, ತುಳು ಮತ್ತು ತೆಲುಗು ಮುಂತಾದ ಹಲವು ಭಾಷೆಗಳನ್ನು ಬಲ್ಲ ಶ್ರೀಯತರು ಇತ್ತೀಚಿನವರೆಗೂ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಹಿರಿಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು.

ಸಂಸ್ಕೃತವನ್ನು ಮಾತನಾಡುವ ಭಾಷೆಯಾಗಿ ಉತ್ತೇಜಿಸುವುದಕ್ಕೆಂದು ಮೂರು ದಶಕಗಳ ಹಿಂದೆ ಅವರು ಮತ್ತು ಅವರ ಮಿತ್ರರು ಸೇರಿ ಸಂಸ್ಕೃತ ಭಾರತಿ' ಸಂಘಟನೆಯನ್ನು ಆರಂಭಿಸಿದರು. ಈಗ ಸಂಸ್ಕೃತ ಭಾರತಿಯು ಭಾರತದ ಮೂಲೆ ಮೂಲೆಗಳಲ್ಲಿ ಹರಡಿದೆ; ಅಮೆರಿಕಾ, ಕೆನಡಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಪಶ್ಚಿಮ ಏಶ್ಯಾ ದೇಶಗಳಲ್ಲಿ ಈ ಸಂಘಟನೆಯು ಪ್ರಬಲ ಅಸ್ತಿತ್ವವನ್ನು ಹೊಂದಿದೆ.

Padma Shri Awardee Chamu Krishna Shastry Profile

ಚ ಮು ಕೃಷ್ಣಶಾಸ್ತ್ರಿಯವರ ಪ್ರಯತ್ನಗಳಿಂದ 10 ದಿನಗಳಲ್ಲಿ ಸಂಸ್ಕೃತವನ್ನು ಸಂಭಾಷಣಾ ಭಾಷೆಯಾಗಿ ಕಲಿಸುವ ಶಿಬಿರಗಳು ರೂಪುಗೊಂಡವು. ಈ ಶಿಬಿರಗಳಿಂದ ಈವರೆಗೆ 90 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಭಾಷಣಾ ಸಂಸ್ಕೃತವನ್ನು ಕಲಿಸಲಾಗಿದೆ.

ಅವರ ಪ್ರಯತ್ನಗಳಿಂದ ಹಲವು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಂಸ್ಕೃತಕ್ಕಾಗಿ ಸಂವಹನಾ ಶಿಕ್ಷಣ ವಿಧಾನಗಳನ್ನು ರೂಪಿಸಲಾಗಿದೆ. ಸಂಸ್ಕೃತ ಮನೆಗಳು', ಸಂಸ್ಕೃತ ಮಾತೃಭಾಷಾ ಮಕ್ಕಳು' - ಈ ಪ್ರಯೋಗಗಳೂ ಅಪಾರ ಯಶಸ್ಸನ್ನು ಕಂಡಿವೆ.

ಅವರು ಸಂಸ್ಕೃತಪ್ರಚಾರಕ್ಕಾಗಿ ಒಂದು ದೊಡ್ಡ ಕಾರ್ಯಪಡೆಗೇ ಸ್ಫೂರ್ತಿಯಾಗಿದ್ದಾರೆ; ಈ ಕಾರ್ಯಕರ್ತರು ಈಗ ಹಲವು ರಾಜ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಸಂಸ್ಕೃತ ಭಾರತಿಯು ನೀಡುತ್ತಿರುವ ಹಲವು ಸಂಸ್ಕೃತ ಭಾಷಾ ಕಲಿಕೆ ಕೋರ್ಸುಗಳನ್ನು ಸಾವಿರಾರು ಜನರು ಕಲಿಯುತ್ತಿದ್ದಾರೆ. ಅಮೆರಿಕಾದಲ್ಲಿ ಎಸ್‌ಎಎಫ್ ಎಲ್‌ (SAFL ) ಎಂಬುದು ಅಲ್ಲಿನ ಭಾರತೀಯ ಮೂಲದ ಮಕ್ಕಳಲಿ ತುಂಬಾ ಜನಪ್ರಿಯವಾಗಿರುವ ಕೋರ್ಸ್ .

Padma Shri Awardee Chamu Krishna Shastry Profile

ಚ ಮೂ ಕೃಷ್ಣಶಾಸ್ತ್ರಿಯವರು ಸಂಸ್ಕೃತದಲ್ಲಿ 14 ಪುಸ್ತಕಗಳನ್ನು ಬರೆದಿದ್ದಾರೆ. ಸರಸ್ವತಿ ಸೇವಾ' ಎಂಬ ಯೋಜನೆಯ ಮೂಲಕ ನೂರಾರು ಭಾರತೀಯ ಮತ್ತು ವಿದೇಶಿ ಭಾಷೆಗಳ ಗ್ರಂಥಗಳನ್ನು ಸಂಸ್ಕೃತಕ್ಕೆ ಅನುವಾದಿಸಲಾಗುತ್ತಿದೆ. ಸಂಸ್ಕೃತದಲ್ಲಿ ಆಧುನಿಕ ವಿಷಯಗಳ ಪುಸ್ತಕಗಳನ್ನು ಬರೆಯಲು ಮತ್ತು ಯುವ ಲೇಖಕರನ್ನು ಪ್ರೋತ್ಸಾಹಿಸಲು ಅವರು ಸಂಸ್ಕೃತ ಪುಸ್ತಕ ಮೇಳ' ಮತ್ತು ಸಾಹಿತ್ಯೋತ್ಸವ'ಗಳನ್ನು ಸಂಘಟಿಸಿದ್ದಾರೆ.

ಶಿಕ್ಷಣ ಮತ್ತು ಕಲಿಕಾ ವಿಧಾನದಲ್ಲಿ ವ್ಯಾಪಕ ಅನುಭವವನ್ನು ಹೊಂದಿರುವ ಹಿನ್ನೆಲೆಯಲ್ಲಿ ಕೃಷ್ಣಶಾಸ್ತ್ರಿಯವರು ರಾಷ್ಟ್ರೀಯ ಸಂಸ್ಕೃತ ಪ್ರತಿಷ್ಠಾನ ಮತ್ತು ಹಲವು ವಿಶ್ವವಿದ್ಯಾಲಯಗಳ ಮಂಡಳಿಗಳಲ್ಲಿ ಸದಸ್ಯರಾಗಿದ್ದಾರೆ. ಸಂಸ್ಕೃತದ ಅಭಿವೃದ್ಧಿಗಾಗಿ ಒಂದು ಮಾರ್ಗಸೂಚಿ - ಹತ್ತು ವರ್ಷಗಳ ದೃಷ್ಟಿಕೋನ ಯೋಜನೆ' ವರದಿಯನ್ನು 2016ರಲ್ಲಿ ಸಲ್ಲಿಸಿದ ಕೇಂದ್ರ ಸರ್ಕಾರವು ರಚಿಸಿದ್ದ ಸಂಸ್ಕೃತ ಸಮಿತಿಯಲ್ಲಿ ಅವರೂ ಒಬ್ಬ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸಂಸ್ಕೃತದಲ್ಲಿ ಸಂಭಾಷಣಾ ಸಂದೇಶ' ಎಂಬ ಬಹುವರ್ಣದ ಮ್ಯಾಗಜಿನ್‌ನ್ನು ಆರಂಭಿಸಿದ್ದಾರೆ; ಚಂದಮಾಮ ಸಂಚಿಕೆಗಳ ಸಂಸ್ಕೃತ ಆವೃತ್ತಿ ಪ್ರಕಟಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

ಕೃಷ್ಣಶಾಸ್ತ್ರಿಯವರಿಗೆ ಕಾಶಿ ಪಂಡಿತ ಪರಿಷತ್‌ನಿಂದ ಸಾರಸ್ವತ ಸುಧಾಕರ,ರಾಷ್ಟ್ರೀಯ ಯುವ ಪುರಸ್ಕಾರ ಬಂದಿದೆ. ಆನಂತರ ಅವರು ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸಬಾರದು ಎಂಬ ನಿಲುವನ್ನು ತಾಳಿದ್ದು ಈವರೆಗೆ ಇನ್ನಾವುದೇ ಪ್ರಶಸ್ತಿಗಳನ್ನೂ ಸ್ವೀಕರಿಸಿರಲಿಲ್ಲ.

English summary
Government of India announced "Padma Shri" award for Chamu Krishna Shastry for his contribution towards Literature and education. Chamu Krishna Shastry is native Mangalorean now resident of New Delhi is an ardent educationist with a unique and path-breaking mission to practice and propagate Sanskrit as a language to restore India’s civilizational status in the comity of nations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X