ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಮೋದಿಗೆ ಮಂಗಳೂರಿನ ಪಬ್ಬಾಸ್‌ನಿಂದ ಐಸ್ ಕ್ರೀಂ ಆಫರ್!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 03: 'ಮಂಗಳೂರಿಗೆ ಬಂದಾಗ ಪಬ್ಬಾಸ್ ಐಸ್ ಕ್ರೀಂ ತಿನ್ನದೇ ಹಾಗೆಯೇ ಹೋದ್ರೆ ಮಂಗಳೂರಿಗೆ ಬಂದು ವೇಸ್ಟ್' ಅನ್ನುವ ಮಾತಿದೆ. ಅಷ್ಟರ ಮಟ್ಟಿಗೆ ಪಬ್ಬಾಸ್ ಐಸ್ ಕ್ರೀಂ ಫೇಮಸ್ ಆಗಿದೆ.
ಶುಚಿ ಹಾಗೂ ರುಚಿಯಾದ ವಿಭಿನ್ನ ಫ್ಲೇವರ್‌ಗಳಿಂದಲೇ ಜಗತ್ ವಿಖ್ಯಾತಿ ಗಳಿಸಿರುವುದು ಮಂಗಳೂರಿನ ಪಬ್ಬಾಸ್ ಐಸ್ ಕ್ರೀಂ. ಪ್ರತಿನಿತ್ಯ ಸಾವಿರಾರು ಗ್ರಾಹಕರಿಗೆ ಐಸ್ ಕ್ರೀಂ ಸ್ವಾದಿಷ್ಟ ಅನುಭವ ನೀಡುವ ಪಬ್ಬಾಸ್ ಈಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಆಫರ್ ನೀಡಿದೆ.

ಟೋಕಿಯೋ ಒಲಿಂಪಿಕ್ಸ್ 2020ರ ಕಂಚಿನ ಪದಕ ವಿಜೇತೆ, ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಜೊತೆ ಐಸ್ ಕ್ರೀಂ ತಿನ್ನಲು ದಿ ಬೆಸ್ಟ್ ಐಸ್ ಕ್ರೀಂ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಬ್ಬಾಸ್ ಟ್ವೀಟ್ ಮಾಡಿದೆ.

ಯಾವ ಸೀಸನ್ ನಲ್ಲೂ ಮಂಗಳೂರಿನ ಐಡಿಯಲ್ ಐಸ್ ಕ್ರೀಂ ಅಂದರೆ... ಆಹಾ! ಯಾವ ಸೀಸನ್ ನಲ್ಲೂ ಮಂಗಳೂರಿನ ಐಡಿಯಲ್ ಐಸ್ ಕ್ರೀಂ ಅಂದರೆ... ಆಹಾ!

 ಪಬ್ಬಾಸ್ ಐಡಿಯಲ್ ಐಸ್ ಕ್ರೀಂ ಕೆಫೆ

ಪಬ್ಬಾಸ್ ಐಡಿಯಲ್ ಐಸ್ ಕ್ರೀಂ ಕೆಫೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮಾಡಿರುವ ಪಬ್ಬಾಸ್ ಐಡಿಯಲ್ ಐಸ್ ಕ್ರೀಂ ಕೆಫೆ, "ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಜೊತೆ ತಿನ್ನಲು ವೋಕಲ್ ಫಾರ್ ಲೋಕಲ್ ಮತ್ತು ಆತ್ಮ ನಿರ್ಭರ ಭಾರತ್ ಅಡಿಯಲ್ಲಿ ದಿ ಬೆಸ್ಟ್ ಐಸ್ ಕ್ರೀಂ ನೀಡುವುದಾಗಿ,'' ಪಬ್ಬಾಸ್ ಟ್ವೀಟ್‌ನಲ್ಲಿ ಹೇಳಿಕೊಂಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳ ಜೊತೆ ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದರು. ಪಿ.ವಿ. ಸಿಂಧು ಸೇರಿದಂತೆ ಹಲವು ಕ್ರೀಡಾಪಟುಗಳು ಮತ್ತು ಅವರ ಕುಟುಂಬಿಕರ ಜೊತೆ ಪ್ರಧಾನಿ ನರೇಂದ್ರ ಮೋದಿ ಕುಶಲೋಪರಿ ವಿಚಾರಿಸಿದ್ದರು.

 ಒಟ್ಟಿಗೆ ಐಸ್ ಕ್ರೀಂ ತಿನ್ನೋಣ ಎಂದ ಪ್ರಧಾನಿ

ಒಟ್ಟಿಗೆ ಐಸ್ ಕ್ರೀಂ ತಿನ್ನೋಣ ಎಂದ ಪ್ರಧಾನಿ

ಅದೇ ರೀತಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಕುಟುಂಬಸ್ಥರ ಜೊತೆ ಮಾತನಾಡುವ ವೇಳೆ, ಪಿ.ವಿ. ಸಿಂಧುಗೆ ಪ್ರಧಾನಿ ಮೋದಿ ಸಿಂಧು ಡಯೆಟಿಂಗ್ ಬಗ್ಗೆ ವಿಚಾರಿಸಿದ್ದರು. ಈ ವೇಳೆ ತಮಗೇನು ಇಷ್ಟ ಅಂತಾ ಪ್ರಧಾನಿ ಸಿಂಧು ಬಳಿ ಕೇಳಿದಾಗ ಸಿಂಧು ಐಸ್ ಕ್ರೀಂ ಇಷ್ಟ, ಆದರೆ ಈಗ ಡಯೆಟ್‌ನಲ್ಲಿ ಇರುವುದರಿಂದ ಐಸ್ ಕ್ರೀಂ ತಿನ್ನುತ್ತಿಲ್ಲ ಅಂತಾ ಹೇಳಿದ್ದರು. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಒಲಿಂಪಿಕ್ಸ್‌ನಿಂದ ಮರಳಿ ಬಂದಾಗ ಒಟ್ಟಿಗೆ ಐಸ್ ಕ್ರೀಂ ತಿನ್ನೋಣ ಎಂದು ಪಿ.ವಿ. ಸಿಂಧುಗೆ ಹೇಳಿದ್ದರು.

 ಐಸ್ ಕ್ರೀಂ ನೀಡಲು ಪಬ್ಬಾಸ್ ಮುಂದೆ ಬಂದಿದೆ

ಐಸ್ ಕ್ರೀಂ ನೀಡಲು ಪಬ್ಬಾಸ್ ಮುಂದೆ ಬಂದಿದೆ

ಜಪಾನ್‌ನ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ. ಸಿಂಧು ಸದ್ಯದಲ್ಲಿಯೇ ಭಾರತಕ್ಕೆ ಆಗಮಿಸಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದಂತೆ ಐಸ್ ಕ್ರೀಂ ಪಾರ್ಟಿಯೂ ನಡೆಯಲಿದೆ. ಈ ವೇಳೆ ಸ್ವಾದಿಷ್ಟಭರಿತ ಐಸ್ ಕ್ರೀಂ ನೀಡಲು ಮಂಗಳೂರಿನ ಪಬ್ಬಾಸ್ ಮುಂದೆ ಬಂದಿದ್ದು, ಆ ದಿನಕ್ಕಾಗಿ ಕಾಯುತ್ತಿರುವುದಾಗಿ ಪಬ್ಬಾಸ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದೆ.

ಪಬ್ಬಾಸ್ ಐಸ್ ಕ್ರೀಂ ಕೆಫೆ ಮಂಗಳೂರು ಲಾಲ್‌ಬಾಗ್ ಪ್ರದೇಶದಲ್ಲಿದ್ದು, ಐಸ್ ಕ್ರೀಂ ಪ್ರಿಯರ ನೆಚ್ಚಿನ ಕೆಫೆಯಾಗಿದೆ. ಮಂಗಳೂರಿಗೆ ಬಂದ ಪ್ರವಾಸಿಗರೆಲ್ಲರೂ ಪಬ್ಬಾಸ್ ಕೆಫೆಗೆ ಬಂದು ಐಸ್ ಕ್ರೀಂ ಸವಿದು ಹೋಗುವುದು ರೂಢಿಯಾಗಿದೆ.
 ಕಂಚು ಗೆದ್ದ ಪಿ.ವಿ. ಸಿಂಧು

ಕಂಚು ಗೆದ್ದ ಪಿ.ವಿ. ಸಿಂಧು

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಭಾರತಕ್ಕೆ ಎರಡನೇ ಪದಕ ಗೆದ್ದು ಕೊಟ್ಟಿದ್ದಾರೆ. ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಭಾನುವಾರ (ಆಗಸ್ಟ್ 1) ನಡೆದ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಎದುರಾಳಿ ಚೀನಾ ದೇಶದ ಆಟಗಾರ್ತಿ ಹಿ ಬಿಂಗ್ ಜಿಯಾವೋ ವಿರುದ್ಧ ಭಾರತದ ಪಿ.ವಿ. ಸಿಂಧು 21-13, 21-15ರ ಅಂತರದಿಂದ ಗೆಲುವು ತನ್ನದಾಗಿಸಿಕೊಂಡರು. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಪಿ.ವಿ.ಸಿಂಧು ಸತತ ಎರಡು ಬಾರಿ ಪದಕ ಗೆದ್ದ ದಾಖಲೆ ನಿರ್ಮಿಸಿದರು.ಮೊದಲ ಸೆಟ್‌ನಲ್ಲಿ ಭಾರತೀಯ ನಾರಿ ಪಿ.ವಿ. ಸಿಂಧು ಸುಲಭವಾಗಿ ಜಯ ಸಾಧಿಸಿದಳು. ನಂತರ ದ್ವಿತೀಯ ಸೆಟ್‌ನಲ್ಲಿ ಚೀನಾದ ಹಿ ಬಿಂಗ್ ಜಿಯಾವೋ ಕೊಂಚ ಪೈಪೋಟಿ ನೀಡಿದರೂ, ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಪಾರುಪತ್ಯ ಸಾಧಿಸಿ, ಕಂಚಿನ ಪದಕ ತನ್ನದಾಗಿಸಿಕೊಂಡರು.

English summary
Mangaluru's Pabbas Ice cream in a tweet offered best ice cream to PM Narendra Modi to have with Indian badminton player PV Sindhu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X