ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟಿ ಅಮಾವಾಸ್ಯೆಗೆ ಪಾಲೆ ಮರದ ಕಷಾಯ ಕುಡಿದ್ರಾ?

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಆಷಾಢ ಮಾಸ ಕಳೆದಿದೆ, ತುಳುನಾಡಿನ ಜನರು ಆಟಿ ಅಮಾವಾಸ್ಯೆಯನ್ನು ವಿಶೇಷವಾಗಿ ಹಾಲೆ ಮರದ ಕಷಾಯ ಕುಡಿಯುವ ಮೂಲಕ ಆಚರಿಸಿದ್ದಾರೆ. ವೇದಮಾಯು ಆಯುರ್ವೇದಿಕ್ ಕ್ಲಿನಿಕ್ ವತಿಯಿಂದ ಮಂಗಳೂರಿನಲ್ಲಿ ಎರಡು ಕಡೆ ಉಚಿತವಾಗಿ ಜನರಿಗೆ ಕಷಾಯವನ್ನು ವಿತರಣೆ ಮಾಡಲಾಗಿದೆ. ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಸೇವೆಯನ್ನು ಮಾಡಲಾಗುತ್ತಿದೆ.

ಆಷಾಢ ಅಮಾವಾಸ್ಯೆಯ ದಿನವನ್ನು ಕರಾವಳಿ ಭಾಗದಲ್ಲಿ ಆಟಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಕರಾವಳಿ ಭಾಗದಲ್ಲಿ ಆಟಿ ಅಮಾವಾಸ್ಯೆಯೇ ಘಟ್ಟದ ಮೇಲಿನ ಪ್ರದೇಶದಲ್ಲಿ ಭೀಮನ ಅಮಾವಾಸ್ಯೆಯಾಗಿದೆ. ಕರಾವಳಿ ಭಾಗದ ಜನರು ಆಟಿ ಅಮಾವಾಸ್ಯೆಯಂದು, ಸೂರ್ಯೋದಯಕ್ಕೆ ಮೊದಲೇ ಪಾಲೆ ಮರ ಅಥವ ಹಾಲೆ ಮರದ ಕಷಾಯ ಕುಡಿಯುವುದು ಸಂಪ್ರದಾಯ. ಇದಕ್ಕೆ ಆತಿ ಕಷಾಯ ಎಂದು ಕರೆಯುತ್ತಾರೆ.

ಹಾಲೆ ಮರದ ತೊಗಟೆಯನ್ನು ತೆಗೆದು ಅದನ್ನು ಜಜ್ಜಿ ಕಷಾಯ ತಯಾರಿಸಲಾಗುತ್ತದೆ. ಕಹಿಯಾದ ಈ ಕಷಾಯ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬುದು ಜನರ ನಂಬಿಕೆ. ವೈದ್ಯರು ಸಹ ಇದನ್ನು ಒಪ್ಪುತ್ತಾರೆ. ಮಂಗಳೂರಿನ ವೇದಮಾಯು ಆಯುರ್ವೇದಿಕ್ ಕ್ಲಿನಿಕ್ ವತಿಯಿಂದ ಈ ಬಾರಿ ಎರಡು ಶಿಬಿರಗಳನ್ನು ನಡೆಸಿ ಹಾಲೆ ಮರದ ಕಷಾಯವನ್ನು ಜನರಿಗೆ ಉಚಿತವಾಗಿ ವಿತರಣೆ ಮಾಡಲಾಯಿತು.

ಆಟಿ ಅಮಾವಾಸ್ಯೆ ಆಚರಣೆ

ಆಟಿ ಅಮಾವಾಸ್ಯೆ ಆಚರಣೆ

ಕರಾವಳಿ ಭಾಗದಲ್ಲಿ ಆಟಿ ಅಮಾವಾಸ್ಯೆಯನ್ನು ಆಚರಣೆ ಮಾಡಲಾಗಿದೆ. ಕಹಿಯಾದ ಕಷಾಯ ಕುಡಿದು ಜನರು ತಮ್ಮ ಹಿಂದಿನ ಸಂಪ್ರದಾಯವನ್ನು ಇಂದಿಗೂ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಘಟ್ಟದ ಮೇಲಿನ ಪ್ರದೇಶದಲ್ಲಿ ಈ ಆಟಿ ಅಮಾವಾಸ್ಯೆ ಅಮಾವಾಸ್ಯೆ ಭೀಮನ ಅಮಾವಾಸ್ಯೆ ಎಂದು ಪ್ರಸಿದ್ಧವಾಗಿದೆ.

ಕರಾವಳಿಯ ಸಂಪ್ರದಾಯ

ಕರಾವಳಿಯ ಸಂಪ್ರದಾಯ

ಆಟಿ ಅಮಾವಾಸ್ಯೆಯಂದು ಆತಿ ಕಷಾಯ ಕುಡಿಯುವುದು ತುಳುನಾಡಿನ ಸಂಪ್ರದಾಯ. ಅಮಾವಾಸ್ಯೆಯ ದಿನವನ್ನು ಕಹಿಯಾದ ಕಷಾಯ ಕುಡಿದು ಆರಂಭಿಸಬೇಕು ಎಂಬುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ. ಇದನ್ನು ಕುಡಿದರೆ ರೋಗ ನಿರೋಧ ಶಕ್ತಿ ಹೆಚ್ಚುತ್ತದೆ ಎಂದು ಜನರು ನಂಬುತ್ತಾರೆ. ವೈದ್ಯರು ಇದನ್ನು ಒಪ್ಪಿದ್ದಾರೆ.

ವೇದಮಯ ಆಯುರ್ವೇದಿಕ್ ಕ್ಲಿನಿಕ್ ವತಿಯಿಂದ ಕಷಾಯ ವಿತರಣೆ

ವೇದಮಯ ಆಯುರ್ವೇದಿಕ್ ಕ್ಲಿನಿಕ್ ವತಿಯಿಂದ ಕಷಾಯ ವಿತರಣೆ

ಎರಡು ವರ್ಷಗಳಿಂದ ಮಂಗಳೂರಿನ ವೇದಮಾಯು ಆಯುರ್ವೇದಿಕ್ ಕ್ಲಿನಿಕ್ ವೈದ್ಯರಾದ ಡಾ.ಕೇಶವರಾಜ್ ಉಚಿತವಾಗಿ ಆತಿ ಕಷಾಯ ಹಂಚಿಕೆ ಮಾಡುತ್ತಾರೆ. ತುಳುನಾಡಿನ ಸಂಸ್ಕೃತಿ ಉಳಿಸುವ ಜೊತೆಗೆ ಜನರಿಗೆ ಸಹಾಯಕವಾಗಲಿ ಎಂದು ಈ ಕಾರ್ಯವನ್ನು ಅವರು ಮಾಡುತ್ತಿದ್ದಾರೆ.

ಒಂದೇ ರೀತಿಯ ಮರಗಳು

ಒಂದೇ ರೀತಿಯ ಮರಗಳು

ಹಾಲೆ ಮರದ ತೊಗಟೆಯಿಂದ ಆತಿ ಕಷಾಯ ತಯಾರಿಸುತ್ತಾರೆ. ಹಾಲು ಮರದ ರೀತಿ ಹಲವಾರು ಮರಗಳಿವೆ. ಅವುಗಳನ್ನು ಸರಿಯಾಗಿ ಗುರುತಿಸಿ ಕಷಾಯ ತಯಾರು ಮಾಡಬೇಕು ಇಲ್ಲದಿದ್ದರೆ, ಬೇರೆ ಮರದ ತೊಗಟೆ ಬಳಸಿ ಮಾಡಿದ ಕಷಾಯ ಕುಡಿದರೆ ಸಾವು ಸಂಭವಿಸುತ್ತದೆ ಎನ್ನುತ್ತಾರೆ ಡಾ.ಕೇಶವರಾಜ್.

ಕಷಾಯ ಹೇಗೆ ಮಾಡುತ್ತಾರೆ?

ಕಷಾಯ ಹೇಗೆ ಮಾಡುತ್ತಾರೆ?

ಹಾಲೆ ಮರದ ತೊಗಟೆಯನ್ನು ಜಜ್ಜಿ ಕಷಾಯ ತಯಾರಿಸಲಾಗುತ್ತದೆ. ಜೀರಿಗೆ, ಬೆಳ್ಳುಳ್ಳಿ ಮತ್ತು ಕಾಳುಮೆಣಸನ್ನು ಕಷಾಯಕ್ಕೆ ಸೇರಿಸಲಾಗುತ್ತದೆ.ಈ ಬಾರಿ ವೇದವಾಯು ಆಯುರ್ವೇದಿಕ್ ಕ್ಲಿನಿಕ್ ವೈದ್ಯರಾದ ಡಾ.ಕೇಶವರಾಜ್ ಅವರು ಸಾಹಿತ್ಯ ಕೇಂದ್ರದ ಬಳಿ ಮತ್ತು ಪಾಂಡೇಶ್ವರದಲ್ಲಿ ಉಚಿತವಾಗಿ ಕಷಾಯ ಹಂಚಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಸೇವೆಯನ್ನು ಅವರು ಮಾಡುತ್ತಿದ್ದು, ಮುಂದಿನ ವರ್ಷ ಸುಮಾರು 2 ಸಾವಿರ ಜನರಿಗೆ ಕಷಾಯ ಹಂಚಲು ನಿರ್ಧರಿಸಿದ್ದಾರೆ.

ಕಷಾಯದ ಉಪಯೋಗವೇನು?

ಕಷಾಯದ ಉಪಯೋಗವೇನು?

ಆತಿ ಕಷಾಯ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕಿಡ್ನಿ ಸರಿಯಾಗಿ ಕೆಲಸ ಮಾಡುತ್ತದೆ ಎಂದು ಜನರು ನಂಬಿದ್ದಾರೆ. ವೈದ್ಯರು ಸಹ ಇದನ್ನು ಒಪ್ಪುತ್ತಾರೆ.

English summary
Aati Amavasya a sacred day for Tuluvas. People of Karnataka coast drink ‘Paale kette Kashaya’ on this sacred day. This Kashaya is particularly consumed on Aati Amavasya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X