ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಮರುಕಳಿಸಿದ ನೈತಿಕ ಪೊಲೀಸ್ ಗಿರಿ, ಓರ್ವ ಬಂಧನ

|
Google Oneindia Kannada News

Recommended Video

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ | Mangaluru Police witnessed Moral Policing | Oneindia Kannada

ಮಂಗಳೂರು, ಜನವರಿ 2: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ನಡೆದಿರುವುದು ವರದಿಯಾಗಿದೆ. ನಗರದ ಹೊರ ವಲಯದ ಮೂಡುಶೆಡ್ಡೆಯಲ್ಲಿರುವ ಪ್ರವಾಸಿ ತಾಣ ಪಿಲಿಕುಳ ನಿಸರ್ಗಧಾಮದ ವಾಟರ್ ಪಾರ್ಕಿನಲ್ಲಿ ಇಬ್ಬರು ವಿದ್ಯಾರ್ಥಿನಿಯರ ಜೊತೆ ಅನ್ಯಕೋಮಿನ ಯುವಕರಿಬ್ಬರು ಬಂದಿದ್ದು, ಹಿಂದು ಸಂಘಟನೆ ಕಾರ್ಯಕರ್ತರು ಅವರನ್ನು ಹಿಡಿದು ಥಳಿಸಿದ್ದಾರೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕ ಯುವತಿಯರನ್ನು ವಶಕ್ಕೆ ಪಡೆದರೂ ಕಾರ್ಯಕರ್ತರು ಪೊಲೀಸರ ಎದುರೇ ಹಲ್ಲೆ ನಡೆಸಿದ್ದಾರೆ. ಯುವಕ - ಯುವತಿಯರು ಒಂದೇ ಕಾಲೇಜಿನವರಾಗಿದ್ದು ಪಿಲಿಕುಳದ ಮಾನಸ ವಾಟರ್ ಪಾರ್ಕಿಗೆ ಬಂದಿದ್ದರು.

Once again Mangaluru witnesses moral policing, one arrested

ವಿದ್ಯಾರ್ಥಿಗಳು ಅನ್ಯಕೋಮಿನವರು ಎಂದು ನೋಡಿದ ಸ್ಥಳೀಯ ಯುವಕರು ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಸುದ್ದಿ ಮುಟ್ಟಿಸಿದ್ದರು. ಬಳಿಕ ಹಿಂದೂ ಸಂಘಟನೆಯ ಕಾರ್ಯಕರ್ತರು ಪಾರ್ಕ್ ಒಳನುಗ್ಗಿ ಹಲ್ಲೆ ನಡೆಸಿದ್ದಾರೆ. ಅನ್ಯಕೋಮಿನ ಯುವಕರು ಹಿಂದು ಯುವತಿಯರನ್ನು ಪ್ರೀತಿಯ ನೆಪದಲ್ಲಿ ಲವ್ ಜಿಹಾದ್ ಬಲೆಗೆ ಬೀಳಿಸುತ್ತಿದ್ದಾರೆ ಎಂಬ ಹುಯಿಲಿನ ಮಧ್ಯೆ ಜತೆಯಾಗಿ ಬಂದ ಅನ್ಯಕೋಮಿನ ಯುವಕರ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತರು ಮುಗಿಬಿದ್ದಿದ್ದಾರೆ.

Once again Mangaluru witnesses moral policing, one arrested

ಯುವತಿಗೆ ಪೊಲೀಸರ ಎದುರೇ ಹಲ್ಲೆ ನಡೆಸಿದ ಹಿಂದೂ ಸಂಘಟನೆಯ ಕಾರ್ಯಕರ್ತ ಸಂಪತ್ ಎಂಬಾತನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.

English summary
A moral policing incident was reported in Mangaluru. A group of two girls and boys of different community came to the water park at Pilikula, a tourist spot in Moodushedde, in the outskirts of the city, while the Hindu organization attacked them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X