ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಒಲಿಂಪಿಕ್ಸ್ ಮಾದರಿಯ ಈಜುಕೊಳ ಲೋಕಾರ್ಪಣೆ

|
Google Oneindia Kannada News

ಮಂಗಳೂರು, ಡಿಸೆಂಬರ್. 20 : ಒಲಿಂಪಿಕ್ಸ್ ಮಾದರಿಯಲ್ಲಿ ಸುಮಾರು 8 ಕೋಟಿ ರೂ ವೆಚ್ಚದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಿರ್ಮಾಣವಾಗಿರುವ ನೂತನ ಈಜುಕೊಳ ಸೋಮವಾರ ಲೋಕಾರ್ಪಣೆಗೊಂಡಿದೆ.

ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟಕ್ಕನುಗುಣವಾಗಿ 25 ಮೀ. ಅಗಲ, 50 ಮೀ ಉದ್ದ ವಿಸ್ತೀರ್ಣದಲ್ಲಿ ಈಜುಕೊಳ ನಿರ್ಮಿಸಲಾಗಿದೆ. 8 ಲೇನ್ ಗಳನ್ನು ಹೊಂದಿರುವ ಈಜುಕೊಳದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಗಳನ್ನು ಕೈಗೊಳ್ಳಬಹುದಾಗಿದೆ.[ಮಂಗಳೂರು ಮುಸ್ಲಿಂ ಮಹಿಳಾ ಸಮಾವೇಶದಲ್ಲಿ ಮೋದಿ ವಿರುದ್ಧ ಆಕ್ರೋಶ]

ಓಝೋನ್ ಶುದ್ಧೀಕರಣ ವ್ಯವಸ್ಥೆ, ಗ್ಯಾಲರಿ, ವಿಶ್ರಾಂತಿ ಕೊಠಡಿ ಹಾಗೂ ವಾಹನ ನಿಲುಗಡೆ ಪ್ರದೇಶಗಳನ್ನು ಹೊಂದಿದೆ. ಪಕ್ಕದಲ್ಲೇ ಮಕ್ಕಳ ಈಜುಕೊಳ ಸಹಿತ ಪರಿಪೂರ್ಣವಾಗಿ ಮೂಲ ಸೌಕರ್ಯಗಳನ್ನು ಅಳವಡಿಸಲಾಗಿದೆ.

ಈಜುಕೊಳದಲ್ಲಿ ಮುಂಜಾನೆ 6 ರಿಂದ ರಾತ್ರಿ 8 ರವರೆಗೆ ಅವಕಾಶ ನೀಡಲಿದ್ದು, ಮಧ್ಯಾಹ್ನ 1 ರಿಂದ 3ರವರೆಗೆ ವಿರಾಮದ ಅವಧಿ ಕಲ್ಪಿಸಿದೆ. ಮಕ್ಕಳ ಸುರಕ್ಷೆಗಾಗಿ ಪೂರ್ಣಕಾಲಿಕ ಲೈಫ್ ಗಾರ್ಡ್‌ಗಳನ್ನು ನೇಮಿಸಿಕೊಳ್ಳಲಾಗಿದೆ.

ಯಾವ ಅಹಿತಕರ ಘಟನೆಯೂ ನಡೆಯದಂತೆ ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಪ್ರವೇಶ ಶುಲ್ಕ ಇನ್ನಷ್ಟೇ ನಿಗದಿಪಡಿಸಬೇಕಿದೆ. ಮಕ್ಕಳ ಈಜುಕೊಳ ಸಹಿತ ಒಟ್ಟು ವೆಚ್ಚ 8.25 ಕೋಟಿ ರೂ.ವೆಚ್ಚ ತಗುಲಿದೆ.

ವೆಚ್ಚ

ವೆಚ್ಚ

ನಾವು ಆರಂಭದಲ್ಲಿ ಅಂದಾಜು 4.5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಿದ್ದೆವು. ಆದರೆ, ಇದೀಗ ಸುಮಾರು 7 ರಿಂದ 8 ಕೋಟಿ ರೂ. ವರೆಗೆ ವೆಚ್ಚವಾಗಿದೆ ಎಂದು ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಿಚರ್ಡ್ ಗೋನ್ಸಾಲ್ವೆಸ್ ತಿಳಿಸಿದರು

20 ಲಕ್ಷ ಲೀಟರ್ ನೀರಿನ ಸಾಮರ್ಥ್ಯ

20 ಲಕ್ಷ ಲೀಟರ್ ನೀರಿನ ಸಾಮರ್ಥ್ಯ

ಈಜುಕೊಳವನ್ನು ವ್ಯಾಕ್ಯೂಮ್ ಮೂಲಕ ಸ್ವಚ್ಛಗೊಳಿಸುವ ಮತ್ತು ನೀರನ್ನು ಓಝೋನ್' ಘಟಕದಲ್ಲಿ ಸಂಸ್ಕರಿಸುವ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. 20 ಲಕ್ಷ ಲೀಟರ್ ನೀರಿನ ಅಗತ್ಯವಿರುವ ಈ ಘಟಕದಲ್ಲಿ ಪ್ರತೀ ಬಾರಿ ಸಂಸ್ಕರಣೆ ವೇಳೆ 25 ಸಾವಿರ ಲೀಟರ್ ನೀರು ಪೋಲಾಗುತ್ತದೆ.

ನೀರು ಉಳಿತಾಯಕ್ಕೆ ತಾಂತ್ರಿಕ ಅಳವಡಿಕೆ

ನೀರು ಉಳಿತಾಯಕ್ಕೆ ತಾಂತ್ರಿಕ ಅಳವಡಿಕೆ

ಇಲ್ಲಿ ನೀರಿನ ಉಳಿತಾಯವಾಗುವಂತೆ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲಾಗಿದೆ. ಆದರೆ, ಪಾಲಿಕೆಯ ಈಜುಕೊಳದಲ್ಲಿ ಪೂರ್ಣ ನೀರು ಚರಂಡಿ ಪಾಲಾಗುತ್ತಿದೆ ಎಂದು ಪ್ರಾಂಶುಪಾಲ ರೆ.ಫಾ. ಸ್ವೀಬರ್ಟ್ ಡಿ ಸಿಲ್ವಾ ತಿಳಿಸಿದ್ದಾರೆ.

ಹಲವು ಗಣ್ಯರು ಭಾಗಿ

ಹಲವು ಗಣ್ಯರು ಭಾಗಿ

ಉದ್ಘಾಟನಾ ಸಮಾರಂಭದಲ್ಲಿ ಸಚಿವ ಯು.ಟಿ.ಖಾದರ್, ಮಾಜಿ ಸಚಿವ ಅಭಯಚಂದ್ರ ಜೈನ್, ಶಾಸಕರಾದ ಕ್ಯಾ. ಗಣೇಶ್ ಕಾರ್ಣಿಕ್, ಜೆ.ಆರ್. ಲೋಬೊ, ಬಿಷಪ್ ಡಾ. ಹೆನ್ರಿ ಡಿ.ಸೋಜ, ಕಾರ್ಯಕ್ರಮ ಸಂಚಾಲಕ ಎನ್.ಜಿ.ಮೋಹನ್ ಮೊದಲಾದವರಿದ್ದರು

English summary
The much-awaited Olympic-standard swimming pool complex of St Aloysius College Institutions was inaugurated at the College campus here on Monday December 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X