ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ನೆರವಿನಿಂದ ಒಲಿಂಪಿಕ್ ಮಾದರಿಯ ಈಜುಕೊಳವನ್ನು ಈ ಕಾಲೇಜಿನಲ್ಲಿ ನಿರ್ಮಿತವಾಗಿದೆ. ಈ ಈಜುಕೊಳ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳಗಳ ಮಾದರಿಯಲ್ಲಿದೆ. ಇದೇ ಡಿ.19 ಈಜುಕೊಳ ಉದ್ಘಾಟನೆಯಾಗಲಿದೆ.

By ಐಸ್ಯಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಡಿಸೆಂಬರ್. 02 : ಪಠ್ಯದ ಜತೆಗೆ ಪಠ್ಯೇತ್ತರ ಚಟುವಟಿಕೆಯಲ್ಲಿ ಕರಾವಳಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಸಂತ ಅಲೋಶಿಯಸ್ ಕಾಲೇಜು ಮಹತ್ತರ ಕಾರ್ಯವೊಂದನ್ನು ಮಾಡಿದೆ.

ಈ ಸಂತ ಅಲೋಶಿಯಸ್ ಕಾಲೇಜು ಒಲಿಂಪಿಕ್ ಮಾದರಿಯಲ್ಲಿ ಈಜುಕೋಳ ನಿರ್ಮಿಸಿ ಎಲ್ಲರ ಗಮನ ಸೆಳೆದಿದೆ. ಕರಾವಳಿಯ ಪ್ರತಿಷ್ಟಿತ ಕಾಲೇಜುಗಳೊಂದರಲ್ಲಿ ಒಂದಾದ ಸಂತ ಅಲೋಶಿಯಸ್ ಕಾಲೇಜು ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣ ಮಾಡಿರುವುದು ನಿಜಕ್ಕೂ ಆಶ್ಚರ್ಯ ಮತ್ತು ಹೆಮ್ಮೆಯ ವಿಷಯ.

ಈಜುಕೊಳದ ಕಾಮಗಾರಿ ಈಗಾಗಲೇ ಮುಕ್ತಾಯವಾಗುವ ಹಂತದಲ್ಲಿದ್ದು. ಈ ಈಜುಕೊಳದ ನಿರ್ಮಾಣಕ್ಕಾಗಿ 136 ಹಳೇ ವಿದ್ಯಾರ್ಥಿ ಸಂಘಗಳಿಂದ ಧನಸಹಾಯ ಪಡೆಯಲಾಗಿದೆ. ನಿಜಕ್ಕೂ ಈ ಅಲೋಶಿಯಸ್ ಕಾಲೇಜಿನ ಸಾಧನೆ ಅಗಮ್ಯವಾಗಿದೆ.

ಅಲೋಶಿಯಸ್ ಕಾಲೇಜಿನಲ್ಲಿ ನಿರ್ಮಿಸಿಲಾದ ಅಂತಾರಾಷ್ಟ್ರೀಯ ಮಾನದಂಡಗಳನ್ನು ಈಡೇರಿಸಬಲ್ಲ ಈಜುಕೊಳ ಇದೇ ಡಿಸೆಂಬರ್ 19ರಂದು ಈ ಈಜು ಕೊಳ ಉದ್ಘಾಟನೆಗೊಳ್ಳಲಿದೆ.

ಮಂಗಳೂರು ನಗರದಲ್ಲಿ ಮೊತ್ತ ಮೊದಲ ಬಾರಿಗೆ ಒಲಿಂಪಿಕ್ ಮಟ್ಟಕ್ಕೆ ಸರಿ ಹೋಲುವಂತಹ ಈಜುಕೊಳದ ನಿರ್ಮಾಣ ಮಾಡಲಾಗಿದ್ದು. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರ ದಂಡೇ ಬರಲಿದೆ .

ಈ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಲುವ ಈಜುಕೊಳ ಎಂಟು ಪಥಗಳನ್ನು ಹೊಂದಿದೆ. 50ಮೀಟರ್ ಉದ್ದ ಮತ್ತು 25ಮೀಟರ್ ಅಗಲವಿದ್ದು. ತಜ್ಞರ ಪ್ರಕಾರ ಈಜು ಕೊಳದ ಅಗಲ 10 ಪಥಗಳಿಗೆ ಸಾಲುವಷ್ಟು ಇದೆ ಎಂದು ಅಂದಾಜಿಸಿದ್ದಾರೆ.

ಈ ಕುರಿತು ಒನ್ ಇಂಡಿಯಾ ಕನ್ನಡ ಜೊತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ಸಂತ ಅಲೋಶಿಯಸ್ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಿಚರ್ಡ್ ಗೋನ್ಸಾಲ್ವೆಸ್ ಅವರು, ಈಗಾಗಲೇ ಈಜುಕೊಳದ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಸಣ್ಣ ಪುಟ್ಟ ಕಾಮಗಾರಿ ಕೆಲಸಗಳು ಬಾಕಿ ಇದೆ.

ನಾವು ಈ ಅಂತಾರಾಷ್ಟ್ರೀಯ ಮಟ್ಟಕ್ಕೆ ಸರಿದೂಗುವ ಇದಾಗಿದ್ದು. ಈ ಈಜುಕೊಳದ ಉದ್ಘಾಟನಾ ಕಾರ್ಯಕ್ರಮವನ್ನು ಇದೇ ಬರುವ ಡಿ. 19ರಂದು ಆಯೋಜಿಸಲಿದ್ದೇವೆ. ಈ ಉದ್ಘಾಟನಾ ಸಮಾರಂಭದಲ್ಲಿ ಯೋಜನಾ ಪ್ರತಿನಿಧಿಗಳು , ಕ್ರೀಡಾಪಟುಗಳು ಮತ್ತು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಬರೋಬ್ಬರಿ 8 ಕೋಟಿ ರೂ ವೆಚ್ಚ

ಬರೋಬ್ಬರಿ 8 ಕೋಟಿ ರೂ ವೆಚ್ಚ

ನಾವು ಆರಂಭದಲ್ಲಿ ಅಂದಾಜು 4.5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಿದ್ದೆವು. ಆದರೆ, ಇದೀಗ ಸುಮಾರು 7 ರಿಂದ 8 ಕೋಟಿ ರೂ. ವರೆಗೆ ವೆಚ್ಚವಾಗಿದೆ ಎಂದು ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಿಚರ್ಡ್ ಗೋನ್ಸಾಲ್ವೆಸ್ ತಿಳಿಸಿದರು.

ಈಜುಕೊಳದಲ್ಲಿ ಇನ್ನೇನಿದೆ ಸೌಕರ್ಯ

ಈಜುಕೊಳದಲ್ಲಿ ಇನ್ನೇನಿದೆ ಸೌಕರ್ಯ

ಈಜುಕೊಳವು ಗ್ಯಾಲರಿ, ಬದಲಾವಣೆ ಕೊಠಡಿ, ಪಾರ್ಕಿಂಗ್ ಪ್ರದೇಶ ಮಾತ್ರವಲ್ಲದೆ ಅಗತ್ಯವಿರುವ ಸಕಲ ಮೂಲಸೌಕರ್ಯಗಳನ್ನು ಹೊಂದಿದೆ. ಇದಲ್ಲದೆ ಮಕ್ಕಳಿಗಾಗಿಯೇ ವಿಶೇಷವಾಗಿ ಬೇಬೀ ಸ್ವಿಮ್ಮಿಂಗ್‌ ಪೂಲ್ ನ್ನು ನಿರ್ಮಿಸಲಾಗಿದೆ.

ಕ್ರೀಡಾಪಟುಗಳಿಗೆ ನೊಂದಣಿ

ಕ್ರೀಡಾಪಟುಗಳಿಗೆ ನೊಂದಣಿ

ಈಜುಕೊಳದ ಉದ್ಘಾಟನೆಯ ನಂತರ ಆದಷ್ಟು ಶೀಘ್ರದಲ್ಲಿ ಕ್ರೀಡಾಪಟುಗಳಿಗೆ ಸದಸ್ಯತ್ವದ ನೊಂದಣಿ ನೀಡಲು ನಿರ್ಧರಿಸಲಾಗಿದೆ.

ಎಮ್ಮೇಕೆರ ಈಜುಕೊಳ ನಿರ್ಮಾಣಕ್ಕೆ ಅನುಮತಿ ಬಂದಿಲ್ಲ

ಎಮ್ಮೇಕೆರ ಈಜುಕೊಳ ನಿರ್ಮಾಣಕ್ಕೆ ಅನುಮತಿ ಬಂದಿಲ್ಲ

ಪ್ರಸ್ತುತ ಎಲ್ಲ ಪ್ರಮುಖ ಈಜುಕೊಳದ ಕ್ರೀಡೆಗಳನ್ನು ಮಂಗಳೂರು ಸಿಟಿ ಕಾರ್ಪೊರೇಷನ್ ವಲಯದ ಈಜುಕೊಳದಲ್ಲಿ ಹಮ್ಮಿಕೊಳ್ಳಲಾಗುತ್ತಿತ್ತು. ಈಗಾಗಲೇ ಯುವಸಬಲೀಕರಣ ಇಲಾಖೆ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಎಮ್ಮೇಕೆರಯಲ್ಲಿ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಆದರೆ ಸರಕಾರದಿಂದ ಅನುಮತಿ ಮತ್ತು ಪರವಾನಗಿ ಇನ್ನೂ ಬಂದಿಲ್ಲ.

English summary
Mangaluru St Aloysius College will have an international standards Olympic-class swimming pool, which will be the first for any institution on the coast. Its inaugurate on December 19, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X