ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿಶಿಲದ ದೇವರ ಮೀನುಗಳ ರಕ್ಷಣೆಗೆ ತಲೆನೋವು ತಂದ ನೀರು ನಾಯಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 29: ಶಿಶಿಲದ ಪ್ರಖ್ಯಾತ ಶಿಶಿಲೇಶ್ವರ ದೇವಸ್ಥಾನದ ಕಪಿಲಾ ನದಿಯಲ್ಲಿನ ಮೀನುಗಳಿಗೆ ನೀರು ನಾಯಿಗಳ ಕಾಟ ಎದುರಾಗಿದೆ. ಪರಿಣಾಮ ದೇವರ ಮೀನುಗಳ ರಕ್ಷಣೆ ದೇವಾಲಯದ ಆಡಳಿತ ಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ.

ಕಳೆದೆರಡು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ವಿವಿಧೆಡೆಗಳಲ್ಲಿ ನೀರುನಾಯಿಗಳ ಹಾವಳಿ‌ ಆರಂಭವಾಗಿದೆ. ಈ ನೀರುನಾಯಿಗಳಿಗೆ ಮೀನು, ಕಪ್ಪೆ ಮುಂತಾದ ಜಲಚರಗಳೇ ಆಹಾರ. ಈ ನೀರುನಾಯಿಗಳು ನದಿ, ನೀರಿನ ತಾಣ, ಬಂಡೆಗಳ ಪೊಟರೆಗಳಲ್ಲಿ ಹೆಚ್ಚಾಗಿ ಕಾಣ ಸಿಗುತ್ತವೆ.

ಶಿಶಿಲದ ಲಕ್ಷಾಂತರ ಮೀನುಗಳ ಮಾರಣಹೋಮಕ್ಕೆ ಇಂದಿಗೆ 25 ವರ್ಷಗಳುಶಿಶಿಲದ ಲಕ್ಷಾಂತರ ಮೀನುಗಳ ಮಾರಣಹೋಮಕ್ಕೆ ಇಂದಿಗೆ 25 ವರ್ಷಗಳು

ಶಿಶಿಲೇಶ್ವರ ದೇವಸ್ಥಾನದ ಕಪಿಲಾ ನದಿಯಲ್ಲಿ ಯಥೇಚ್ಛವಾಗಿ ಬೃಹತ್ ಗಾತ್ರದ ಮೀನುಗಳು ಕಂಡು ಬರುತ್ತವೆ. ಇವುಗಳು ದೇವರ ಮೀನುಗಳೆಂದೇ ಪ್ರಖ್ಯಾತವಾಗಿದೆ. ಆದ್ದರಿಂದ ಇಲ್ಲಿ ಸುಲಭವಾಗಿ ಮೀನುಗಳು ನೀರುನಾಯಿಗಳಿಗೆ ಲಭ್ಯವಾಗುತ್ತಿದ್ದು, ತಮ್ಮ ಹಸಿವು ನೀಗಿಸಲು ದೇವರ ಮೀನುಗಳನ್ನು ತಿನ್ನಲಾರಂಭಿಸಿವೆ.

ಹಿಜಾಬ್‌ಗೆ ಪರೋಕ್ಷವಾಗಿ ಬೆಂಬಲ: ಉಪನ್ಯಾಸಕರನ್ನು ತರಾಟೆಗೆ ತೆಗೆದುಕೊಂಡ ಶಾಸಕಹಿಜಾಬ್‌ಗೆ ಪರೋಕ್ಷವಾಗಿ ಬೆಂಬಲ: ಉಪನ್ಯಾಸಕರನ್ನು ತರಾಟೆಗೆ ತೆಗೆದುಕೊಂಡ ಶಾಸಕ

ಶಿಶಿಲದಲ್ಲಿ ಮೀನು ಹಿಡಿಯುವುದು ನಿಷಿದ್ಧ. ಅಲ್ಲದೆ ನೀರುನಾಯಿಗಳು ಅಳಿವಿನಂಚಿನಲ್ಲಿರುವ ಪ್ರಾಣಿಗಳು‌. ಅವುಗಳನ್ನು ಹಿಡಿಯುವಂತೆಯೂ ಇಲ್ಲ. ಬೇರೆಡೆಗೆ ಬಿಡುವಂತೆಯೂ ಇಲ್ಲ. ಆದ್ದರಿಂದ ಅರಣ್ಯ ಇಲಾಖೆಗೂ ಸಹ ದೇವರ ಮೀನಿನ ರಕ್ಷಣೆ ಹಾಗೂ ಇವುಗಳನ್ನು ಭಕ್ಷಣೆ ಮಾಡುವ ನೀರುನಾಯಿಗಳನ್ನು ಉಳಿಸುವ ಅನಿವಾರ್ಯತೆ ಇದೆ. ಶಿಶಿಲ ದೇಗುಲದ ಸುತ್ತ ಮುತ್ತಾ ಮೀನುಗಳ ಬೇಟೆ ನಿರ್ಬಂಧಿಸಲಾಗಿದೆ.

ದೇವರ ಮೀನುಗಳ ಮೇಲೆ ನೀರುನಾಯಿ ಹಾವಳಿ

ದೇವರ ಮೀನುಗಳ ಮೇಲೆ ನೀರುನಾಯಿ ಹಾವಳಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾಮಾಜಿಕ ಕಾರ್ಯಕರ್ತ ಜಯರಾಮ ನೆಲ್ಲಿತ್ತಾಯ, "ಶಿಶಿಲದ ಕಪಿಲಾ ನದಿಯಲ್ಲಿ 26 ವರ್ಷಗಳ ಹಿಂದೆ ದುಷ್ಕರ್ಮಿಗಳು ಕಪಿಲೆಗೆ ವಿಷಬಉಣಿಸಿ ಸಹಸ್ರ ಸಹಸ್ರ ಸಂಖ್ಯೆಯ ದೇವರಮೀನುಗಳ ಸಾವಿಗೆ ಕಾರಣರಾಗಿದ್ದರು. ಅಂದಿನಿಂದ ಮತ್ಸ್ಯ ಹಿತರಕ್ಷಣಾ ವೇದಿಕೆಯು ಮೀನುಗಳ ಸಂರಕ್ಷಣೆಗೆ ಪಣತೊಟ್ಟಿದೆ. ಇದೀಗ ನೀರುನಾಯಿ ಹಾವಳಿ ಎದುರಾಗಿದ್ದು ಏನು ಮಾಡುವುದೆಂದೇ ತೋಚದಾಗಿದೆ. ಅರಣ್ಯ ಇಲಾಖೆ ಅವುಗಳನ್ನು ಹಿಡಿದು ಸ್ಥಳಾಂತರಿಸುವುದೊಂದೇ ಪರಿಹಾರ" ಎನ್ನುವುದು ಅವರ ಅಭಿಪ್ರಾಯವಾಗಿದೆ.

ನೀರುನಾಯಿಗಳನ್ನು ಸ್ಥಳಾಂತರಿಸಾಗದು

ನೀರುನಾಯಿಗಳನ್ನು ಸ್ಥಳಾಂತರಿಸಾಗದು

"ನೀರುನಾಯಿಗಳ ಆವಾಸಸ್ಥಾನವೇ ನದಿಗಳಲ್ಲಿನ ಪೊಟರೆ/ ಪೊದೆಗಳು. ಅವುಗಳಿಗೆ ಜಲಚರಗಳೇ ಆಹಾರ. ಹಾಗಿರುವಾಗ ಅವುಗಳ ಆಹಾರ ಪದ್ಧತಿಯನ್ನಾಗಲೀ ಆವಾಸ ಸ್ಥಾನವನ್ನಾಗಲೀ ಬದಲಾಯಿಸಲು ಸಾಧ್ಯವಿಲ್ಲ. ಹಾಗೇನಾದರೂ ಮಾಡಿದರೆ ಅವು ಸಾವನ್ನಪ್ಪುವ ಸಾಧ್ಯತೆ ಇದೆ. ದೇವರ ಮೀನುಗಳ ರಕ್ಷಣೆ, ನೀರುನಾಯಿಗಳ ಉಳಿವು ಎರಡೂ ಅನಿವಾರ್ಯವಾಗಿರುವುದರಿಂದ ಯಾವ ಕ್ರಮ ಏನು ಕೈಗೊಳ್ಳಬಹುದೆಂದು ಪರಿಶೀಲಿಸಲಾಗುವುದು" ಎಂದು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್ ಹೇಳಿದ್ದಾರೆ.

ರಾತ್ರಿ ಸಮಯ ಕಾವಲು

ರಾತ್ರಿ ಸಮಯ ಕಾವಲು

ನದಿಯ ದಡಲ್ಲಿನ ಪೊದೆಗಳಲ್ಲಿ ನೀರು ನಾಯಿ ವಾಸಿಸುವುದರಿಂದ ಅವುಗಳನ್ನು ಸ್ಥಳಾಂತರಿಸುವ ಬದಲಿಗೆ ನದಿ ಸ್ಥಳದಲ್ಲಿನ ಕಸಕಡ್ಡಿ, ಪದೆಗಳನ್ನು ತೆರವು ಮಾಡಬಹುದು. ನೀರು ಹೆಚ್ಚಾದರೆ ಅವು ತಾವಾಗಿಯೇ ಸ್ಥಳಾಂತರಗೊಳ್ಳುತ್ತವೆ. ಉಳಿದಂತೆ ಕ್ಷೇತ್ರದ ಪ್ರಮುಖರ ಬೇಡಿಕೆಯಂತೆ ರಾತ್ರಿ ವೇಳೆ ಕಾವಲು ಕಾಯಲು ನಿರ್ಧರಿಸಲಾಗಿದೆ. ಈ ವೇಳೆ ನೀರು ನಾಯಿ ಕಂಡು ಬಂದರೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ ಎಂದು ಮಧುಸೂದನ್ ತಿಳಿಸಿದ್ದಾರೆ.

ದೇವಸ್ಥಾನದ ಪಕ್ಕದಲ್ಲೇ ದೇವರ ಮೀನುಗಳು

ದೇವಸ್ಥಾನದ ಪಕ್ಕದಲ್ಲೇ ದೇವರ ಮೀನುಗಳು

ಕುದುರೆಮುಖ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿರುವ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನದ ಪ್ರಮುಖ ಆಕರ್ಷಣೆ ದೇವರ ಮೀನುಗಳು. ಕಪಿಲಾ ನದಿ ದಂಡೆಯಲ್ಲಿರುವ ಶಿಶಿಲ ದೇವಸ್ಥಾನದ ಪಕ್ಕದಲ್ಲೇ ಇರುವ ದೇವರ ಮೀನುಗಳು ಅಂತಾ ಪೊರುವಾಲು ಎಂಬು ಜಾತಿಯ ಮೀನುಗಳನ್ನು ಜನ ಆರಾಧಿಸುತ್ತಿದ್ದಾರೆ. ಜನ ಇಂದಿಗೂ ಪ್ರೀತಿಯಿಂದ ಆ ಮೀನುಗಳಿಗೆ ಮಂಡಕ್ಕಿ ಹಾಕಿ ಮಿನುಗಳು ಆಹಾರ ತಿನ್ನುವ ಅಂದ ನೋಡುತ್ತಾರೆ. ಲಕ್ಷಾಂತರ ಮೀನುಗಳು ಒಂದೆಡೆ ಸೇರಿದಾಗ ಉಂಟಾಗುವ ಕಂಪನ ಭಕ್ತರ ಮನಸ್ಸನ್ನು ಮುದಗೊಳಿಸುತ್ತದೆ.

English summary
Shishileshwara temple officials in trouble in the issue of protect temple fish from sea dogs. Temple fish in danger due to sea dog attack at Dakshina Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X