ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಳುವನ್ನು ರಾಜ್ಯಭಾಷೆಯಾಗಿ ಘೋಷಿಸುವಂತೆ ಟ್ವಿಟರ್ ಅಭಿಯಾನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 13; ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಿ, ರಾಜ್ಯ ಭಾಷೆ ಎಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಕರಾವಳಿ ಜನರು ಟ್ವಿಟ್ಟರ್ ಅಭಿಯಾನ ಆರಂಭಿಸಿದ್ದಾರೆ‌‌‌.

ಕಾಸರಗೋಡುವಿನ ಕೆಲವು ಭಾಗಗಳು ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜನರು ತುಳು ಭಾಷೆ ಮಾತನಾಡುತ್ತಿದ್ದು, ಈ ಭಾಷೆಗೆ 2500 ವರ್ಷಗಳ ಹಿಂದಿನ ಇತಿಹಾಸವಿದೆ. ಪ್ರಾಚೀನ ಸಂಸ್ಕೃತಿ ಈ ಭಾಷೆಗಿದೆ.

ತುಳು ರಾಜ್ಯ ಭಾಷೆಯಾಗಲು ಪರಿಶೀಲಿಸಿ ಕ್ರಮ : ಸಿಎಂ ಯಡಿಯೂರಪ್ಪ ತುಳು ರಾಜ್ಯ ಭಾಷೆಯಾಗಲು ಪರಿಶೀಲಿಸಿ ಕ್ರಮ : ಸಿಎಂ ಯಡಿಯೂರಪ್ಪ

ತುಳು ಭಾಷೆಯನ್ನು ಕರ್ನಾಟಕ ಮತ್ತು ಕೇರಳ ಸರ್ಕಾರ ಅಧಿಕೃತ ವಾಗಿ ರಾಜ್ಯ ಭಾಷೆಯನ್ನಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಲಾಗಿದೆ. ಕರಾವಳಿಯ ವಿವಿಧ ಸಂಘಟನೆಗಳ ಜೊತೆಗೂಡಿ ಟ್ವಿಟ್ಟರ್ ಅಭಿಯಾನ ನಡೆಯುತ್ತಿದೆ.

ತುಳುವೆರೆಗು ಎಡ್ಡೆ ಸುದ್ದಿ, ಪದ ತುಳು ಆಂಡ್ರಾಯ್ಡ್ App ತೂಲೆ ತುಳುವೆರೆಗು ಎಡ್ಡೆ ಸುದ್ದಿ, ಪದ ತುಳು ಆಂಡ್ರಾಯ್ಡ್ App ತೂಲೆ

Tulu

ಭಾನುವಾರ ಬೆಳಗ್ಗೆ 6 ಗಂಟೆಯಿಂದ ಆರಂಭವಾಗಿ ರಾತ್ರಿ 12 ಗಂಟೆಯವರೆಗೆ ಟ್ವಿಟ್ಟರ್ ಅಭಿಯಾನ ನಡೆಯುತ್ತಿದೆ. #TuluofficialinKA_KL ಎಂಬ ಹ್ಯಾಷ್‌ಟ್ಯಾಗ್ ಮೂಲಕ ಅಭಿಯಾನವನ್ನು ನಡೆಸಲಾಗುತ್ತಿದೆ. ಹಲವಾರು ಜನರು ಟ್ವೀಟ್ ಮಾಡುತ್ತಿದ್ದಾರೆ.

ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಲು ಇದು ಸಕಾಲ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಲು ಇದು ಸಕಾಲ

ರಾಜ್ಯ ಭಾಷೆಗೆ ಬೇಕಾದ ಎಲ್ಲಾ ಅರ್ಹತೆಗಳು ತುಳು ಭಾಷೆಗಿದೆ. ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಭಾಷೆ ಕೂಡಾ ಒಂದಾಗಿದೆ. ಪ್ರಾಚೀನ ಭಾಷೆ ಅಂತಾ ಪುರಾವೆಗೆ ಹಿಂದಿನ ಕವಿ-ಪುಂಗವರು ಬರೆದಿರುವ ಇತಿಹಾಸ, ಕವನ, ಶಾಸನಗಳ ಅಧಿಕೃತ ಹಿನ್ನಲೆಯಿದೆ.

ತುಳು ಭಾಷೆಗೆ ತನ್ನದೇ ಆದ ಸಂಸ್ಕೃತಿ ಇದೆ. ತುಳು ಭಾಷೆಗೆ ಅದರದ್ದೇ ಆದ ಕ್ಯಾಲೆಂಡರ್ ಕೂಡಾ ಇದೆ. ತುಳು ಭಾಷೆಗೆ ಲಿಪಿ ಇದೆ. ಹೀಗಾಗಿ ತುಳು ಭಾಷೆಯನ್ನು ಅಧಿಕೃತವಾಗಿ ರಾಜ್ಯ ಭಾಷೆ ಅಂತಾ ಘೋಷಿಸಬೇಕೆಂದು ನೂರಾರು ಟ್ವೀಟ್‌ಗಳ ಮೂಲಕ ಒತ್ತಾಯಿಸಲಾಗಿದೆ.

ಈ ಹಿಂದೆಯೂ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಒತ್ತಾಯ ಮಾಡಲಾಗಿತ್ತು‌‌. ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದ ಸಂಧರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಸ್ವತಃ ಪ್ರಧಾನಿಯವರ ಬಳಿಯೇ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಮನವಿ ಮಾಡಿದ್ದರು.

ಆನಂತರ ಮುಖ್ಯಮಂತ್ರಿ ಆದಿಯಾಗಿ ಎಲ್ಲರಿಗೂ ಮನವಿ ಮಾಡಲಾಗಿತ್ತು. ಕಾನೂನು ತೊಡಕುಗಳನ್ನು ನಿವಾರಿಸಿ ಈ ಬಗ್ಗೆ ಪ್ರಯತ್ನ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಇದುವರೆಗೂ ಬೇಡಿಕೆ ಈಡೇರಿಲ್ಲ, ಇದೀಗ ಟ್ವಿಟ್ಟರ್ ಅಭಿಯಾನ ಮೂಲಕ ಮತ್ತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ.

English summary
Twitter campaign by Tuluvas on June 13 demand the government official language status for Tulu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X