ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ಕಡಲ ಕಸಕ್ಕೆ ಕಲೆಯ ರೂಪ ನೀಡಿದ ಮೇಘನಾ

|
Google Oneindia Kannada News

ಮಂಗಳೂರು, ಮೇ 28: ಕಡಲ ಕಿನಾರೆ ಹಾಗೂ ಅಕ್ಕಪಕ್ಕದಲ್ಲಿ ಎಸೆದ ಬಾಟಲ್, ಪ್ಲಾಸ್ಟಿಕ್‌ ಚೀಲಗಳನ್ನು ಮೇಘನಾ ಮೊದಲು ಸಂಗ್ರಹಿಸಿದ್ದಾರೆ.

ಬಳಿಕ ಮಂಗಳೂರಿನಲ್ಲಿ 5 ದಿನಗಳ ಕಲಾ ಶಿಬಿರ ಆಯೋಜಿಸಿ, ಈ ಕಸಗಳಿಗೆ ಕಲೆಯ ರೂಪ ನೀಡಿದ್ದಾರೆ. ಬಾಟಲ್ ಹಾಗೂ ಇತರ ಘನ ತ್ಯಾಜ್ಯಗಳಿಗೆ ಕಲಾಕೃತಿಯ ರೂಪ ನೀಡಿದ್ದಾರೆ. ಕಲಾ ಶಿಬಿರದ ಜತೆಗೆ ಪ್ರದರ್ಶನ ಕೂಡ ಆಯೋಜಿಸಲಾಗಿದ್ದು, ಎಸೆದ ಬಾಟಲ್‌ಗಳ ಮೂಲಕವೇ 200 ಕ್ಕೂ ಅಧಿಕ ಕಲಾಕೃತಿ ರೂಪಿಸಲಾಗಿದೆ. ಇವೆಲ್ಲವನ್ನೂ ಪ್ರದರ್ಶಿಸಲಾಗುತ್ತಿದೆ.

Not throw glass pieces by the beach side as it can hurt anyone says Meghana
ಈ ಜಾಗೃತಿ ಕುರಿತು ಮಾತನಾಡಿರುವ ಮೇಘನಾ, 'ಕಸವನ್ನು ಕಂಡಕಂಡಲ್ಲಿ ಎಸೆಯುವ ಅಭ್ಯಾಸ ಸಾಕಷ್ಟು ಜನರಿಗಿದೆ. ವಿಶೇಷವಾಗಿ ಬೀಚ್‌ನಲ್ಲಿ ಪ್ಲಾಸ್ಟಿಕ್‌ ಬಾಟಲ್, ಗಾಜಿನ ಚೂರು ಅಥವಾ ಬಾಟಲ್ ಎಸೆಯುವ ಅಭ್ಯಾಸ ಸಾಕಷ್ಟು ಜನರಿಗಿದೆ.

ಅದರ ಬದಲಾಗಿ ಮನೆಗೆ ತೆಗೆದುಕೊಂಡು ಹೋಗಿ ಅಲಂಕಾರಿಕವಾಗಿ ಮರು ಜೀವ ನೀಡಬಹುದು. ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಈ ಶಿಬಿರದ ಉದ್ದೇಶ. ಗಾಜುಗಳನ್ನು ಅಲ್ಲಿ ಎಸೆಯುವುದರಿಂದ ಪ್ರವಾಸಿಗರು ಹಾಗೂ ಸಮುದ್ರ ಜೀವಿಗಳಿಗೆ ಸಮಸ್ಯೆ ಆಗುತ್ತದೆ. ಪ್ಲಾಸ್ಟಿಕ್‌ ಕೂಡ ಪರಿಸಕ್ಕೆ ಅಪಾಯಕಾರಿ' ಎಂದು ತಿಳಿಸಿದ್ದಾರೆ

English summary
Megha Mendon, an artist and an architecture student, collects discarded bottles from river banks, beaches, streets and turns them into piece of art.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X