ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಿಂದ ಅಬುಧಾಬಿ, ಮಸ್ಕತ್‌ಗೆ ನೇರ ವಿಮಾನ

|
Google Oneindia Kannada News

ಮಂಗಳೂರು, ಜ.19 : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿ ಮತ್ತು ಮಸ್ಕತ್‌ಗೆ ನೇರ ವಿಮಾನಯಾನವನ್ನು ಏರ್ ಇಂಡಿಯಾ ಆರಂಭಿಸಲಿದೆ. ಪ್ರಸ್ತುತ ಈ ಮಾರ್ಗದಲ್ಲಿ ವಾರದಲ್ಲಿ ನಾಲ್ಕು ವಿಮಾನಗಳು ಹಾರಾಟ ನಡೆಸುತ್ತಿವೆ.

ಏರ್‌ ಇಂಡಿಯಾ ಸಂಸ್ಥೆಯು ಮಾರ್ಚ್ ತಿಂಗಳಿನಲ್ಲಿ ಮಂಗಳೂರಿನಿಂದ ಅಬುಧಾಬಿ ಮತ್ತು ಮಸ್ಕತ್‌ಗೆ ನೇರ ವಿಮಾನಯಾನವನ್ನು ಆರಂಭಿಸಲಿದೆ. ನೇರ ವಿಮಾನಯಾನ ಸಂಚಾರದಿಂದಾಗಿ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ.[ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೊಂದು ಕಿರೀಟ]

Mangaluru

ಪ್ರಸ್ತುತ ಮಂಗಳೂರಿನಿಂದ ವಾರದಲ್ಲಿ ನಾಲ್ಕು ವಿಮಾನಗಳು ಮಧ್ಯದಲ್ಲಿ ಒಂದು ನಿಲುಗಡೆಯೊಂದಿಗೆ ಅಬುಧಾಬಿ ಮತ್ತು ಮಸ್ಕತ್‌ಗೆ ಹಾರಾಟ ನಡೆಸುತ್ತಿವೆ. ಮಾರ್ಚ್‌ನಿಂದ ನೇರ ವಿಮಾನಯಾನವನ್ನು ಆರಂಭಿಸುವುದಾಗಿ ಏರ್ ಇಂಡಿಯಾ ಹೇಳಿದೆ. [ಮಂಗಳೂರು : ವಿಮಾನ ನಿಲ್ದಾಣಕ್ಕೆ ಎರಡು ಏರೋ ಬ್ರಿಡ್ಜ್]

ಪ್ರಸ್ತುತ ಅಬುಧಾಬಿ ಮತ್ತು ಮಸ್ಕತ್‌ಗಳಿಂದ ಮಂಗಳೂರಿಗೆ ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ವಿಮಾನ ಸಂಚರಿಸುತ್ತಿದೆ. ಅಬುಧಾಬಿಯಿಂದ ಸ್ಥಳೀಯ ಕಾಲಮಾನ ಮುಂಜಾನೆ 2.20ಕ್ಕೆ ಹೊರಡುವ ವಿಮಾನ ಬೆಳಗ್ಗೆ 7.30ಕ್ಕೆ ಮಂಗಳೂರು ತಲುಪುತ್ತಿದೆ. ಮಂಗಳೂರಿನಿಂದ ರಾತ್ರಿ 11ಕ್ಕೆ ಹೊರಡುವ ವಿಮಾನ ಅಬುಧಾಬಿಗೆ ಸ್ಥಳೀಯ ಕಾಲಮಾನ 1.05ಕ್ಕೆ ತಲುಪಲಿದೆ.

ಹಾಗೆಯೇ ಮಸ್ಕತ್‌ನಿಂದ ಸ್ಥಳೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಹೊರಡುವ ವಿಮಾನ ಮಂಗಳೂರಿಗೆ ರಾತ್ರಿ 8.10ಕ್ಕೆ ತಲಪುತ್ತದೆ. ಮಂಗಳೂರಿನಿಂದ ಬೆಳಗ್ಗೆ 10.05ಕ್ಕೆ ಹೊರಡುವ ವಿಮಾನ ಸ್ಥಳೀಯ ಕಾಲಮಾನ 2.40ಕ್ಕೆ ಮಸ್ಕತ್‌ಗೆ ತಲುಪುತ್ತದೆ.

English summary
Happy news for Mangalureans. Air India Express announced non-stop flights from Mangaluru to Abu Dhabi and Muscat form March 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X