ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಯಾವ ತಪ್ಪು ಮಾಡಿಲ್ಲ: ಜಿ.ಪರಮೇಶ್ವರ

|
Google Oneindia Kannada News

ಮಂಗಳೂರು , ಫೆ. 11: ಅರ್ಕಾವತಿ ಡಿನೋಟಿಫೈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಯಾವುದೇ ಅಕ್ರಮ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಸಕ್ತ ಸರ್ಕಾರ ಕಾನೂನಿಗೆ ವಿರುದ್ಧವಾದ ಯಾವುದೇ ತೀರ್ಮಾನಗಳನ್ನು ಮಾಡಿಲ್ಲ. ಈ ಬಗ್ಗೆ ದಿನಾ ಮಾಧ್ಯಮಗಳಿಗೆ ದೂರು ನೀಡುತ್ತಿರುವ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಸಂವಿಧಾನ ಬದ್ಧವಾಗಿ ಮಾತನಾಡುವುದನ್ನು ಕಲಿತುಕೊಳ್ಳಲಿ ಎಂದು ತಿರುಗೇಟು ನೀಡಿದರು.[ಅರ್ಕಾವತಿ ಫೈಟ್ : ಸರ್ಕಾರದಿಂದ 1 ಲಕ್ಷ ಪುಟಗಳ ದಾಖಲೆ ಸಲ್ಲಿಕೆ]

congress

ಕುಮಾರಸ್ವಾಮಿ ಪುಸ್ತಕದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಆರ್ ಟಿಐನಲ್ಲಿ ಪಡೆದ ಸರ್ಕಾರಿ ಆದೇಶಗಳನ್ನು ಪುಸ್ತಕ ಮಾಡಿ ಪ್ರಕಟಿಸಿದ್ದು ದೊಡ್ಡ ಸಾಧನೆಯಲ್ಲ ಎಂದು ಲೇವಡಿ ಮಾಡಿದರು.[ಅರ್ಕಾವತಿ ಕರ್ಮಕಾಂಡ : ಕುಮಾರಸ್ವಾಮಿ ಪುಸ್ತಕದಲ್ಲೇನಿದೆ?]

ಉಪಮುಖ್ಯಮಂತ್ರಿ ಸ್ಥಾನದ ಬಗೆಗಿನ ತೀರ್ಮಾನವನ್ನು ಹೈ ಕಮಾಂಡ್ ತೆಗೆದುಕೊಳ್ಳುತ್ತದೆ. ಕೆಪಿಸಿಸಿ ಅಧ್ಯಕ್ಷನಾಗಿ ಸುದೀರ್ಘ ಅವಧಿಗೆ ಹುದ್ದೆ ನಿಭಾಯಿಸಿದ ತೃಪ್ತಿಯಿದೆ ಎಂದು ಹೇಳಿದರು. ಹಿಂದು ಸಮಾಜೋತ್ಸವದಲ್ಲಿ ಪಕ್ಷದ ನಾಯಕರೊಬ್ಬರು ಭಾಗಿಯಾಗಿರುವ ಬಗ್ಗೆ ಮಾಹಿತಿಯಿದ್ದು ಆ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

English summary
Mangaluru: No relation between Chief Minister Siddaramaiah and Arkavathi Layout. To creating Deputy CM post is not a important aspect, said by KPCC President Dr. G.Parameshwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X