ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ಲಕ್ಷ ಗೆಲ್ಲುವ ಆಫರ್ ಸೋತ ಜ್ಯೋತಿಷಿಗಳು!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂ1: ಮಳಲಿ ಮಸೀದಿಯಲ್ಲಿ ನಡೆದ ತಾಂಬೂಲ ಪ್ರಶ್ನೆಯ ಬಳಿಕ ಮಂಗಳೂರಿನ ಪ್ರಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಜ್ಯೋತಿಷಿಗಳಿಗೆ ವಿಶಿಷ್ಟ ರೀತಿಯಲ್ಲಿ ಸವಾಲೆಸಿದಿದ್ದರು. ಆದರೆ ಈ ಸವಾಲನ್ನು ಸ್ವೀಕರಿಸಿರುವ ನಾಲ್ವರು ನಿಖರವಾದ ಉತ್ತರ ಹೇಳಲು ಸಫಲರಾಗದೇ ಸೋತಿದ್ದಾರೆ.

ಮೇ 26ರಂದು ಬೆಳಗ್ಗೆ 11.33ಕ್ಕೆ ಏಳು ಲಕೋಟೆಗಳಲ್ಲಿ ವಿವಿಧ ದೇಶಗಳ ಕರೆನ್ಸಿ, ಕಾಗದಗಳು, ಬರವಣಿಗೆ ಬರೆದಿಟ್ಟ ಪೇಪರ್ ಅನ್ನು ಸೀಲ್ ಮಾಡಿ ಇಟ್ಟಿದ್ದರು. ಈ ಸವಾಲನ್ನು ಸ್ವೀಕರಿಸುವವರು ಏಳು ಲಕೋಟೆಗಳಲ್ಲಿ ಆರು ಕವರ್ ಗಳನ್ನು ಆಯ್ಕೆ ಮಾಡಿ ಅದರಲ್ಲಿ ಐದಕ್ಕೆ ನಿಖರವಾದ ಉತ್ತರ ಹೇಳಿದರೆ ಅವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು. ಸರಿ ಉತ್ತರವನ್ನು ತಮ್ಮ ವಾಟ್ಸಪ್‌ ನಂಬರ್ ಹಾಗೂ ಇಮೇಲ್ ಕಳುಹಿಸಬಹುದು ಎಂದಿದ್ದರು.

ಹೊಸ ಹೊಸ ಆಯಾಮ ಹುಟ್ಟುಹಾಕಿದ ತಾಂಬೂಲ ಪ್ರಶ್ನೆ

ಹೊಸ ಹೊಸ ಆಯಾಮ ಹುಟ್ಟುಹಾಕಿದ ತಾಂಬೂಲ ಪ್ರಶ್ನೆ

ಮಳಲಿಯಲ್ಲಿನ ಮಂದಿರ, ಮಸೀದಿ ವಿವಾದದ ತಾಂಬೂಲ ಪ್ರಶ್ನೆಯು ಹೊಸ ಹೊಸ ಆಯಾಮವನ್ನು ಹುಟ್ಟುಹಾಕುತ್ತಿದೆ. ಇದೀಗ ಮಂಗಳೂರಿನ ಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ತಾಂಬೂಲ ಪ್ರಶ್ನೆಯ ಹಿನ್ನೆಲೆಯಲ್ಲಿ ಜೋತಿಷ್ಯಕ್ಕೆ ಸವಾಲೆಸೆದಿದ್ದರು. ಶುಕ್ರವಾರ ಬೆಳಗ್ಗೆ 11.33 ಗಂಟೆಗೆ ಏಳು ಲಕೋಟೆಗಳನ್ನು ಸೀಲ್ ಮಾಡಿ ಇಟ್ಟಿದ್ದರು. ಅದರಲ್ಲಿ ಕರೆನ್ಸಿ, ಕಾಗದಗಳನ್ನು ಇಟ್ಟಿದ್ದಾರೆ. ಸವಾಲು‌ ಸ್ವೀಕರಿಸುವವರು ಏಳು ಲಕೋಟೆಗಳಲ್ಲಿ ಆರು ಕವರ್ ಗಳನ್ನು ಆಯ್ಕೆ ಮಾಡಿ ಅದರಲ್ಲಿ ಐದಕ್ಕೆ ನಿಖರವಾದ ಉತ್ತರ ಹೇಳಿದ 50 ಮಂದಿಗೆ ತಲಾ ಒಂದು ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು.

ಈ ಹಿಂದೆಯೇ ನರೇಂದ್ರ ನಾಯಕ್ ಹೇಳಿರುವಂತೆ ಬುಧವಾರ ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರ ಸಮ್ಮುಖದಲ್ಲಿ ಕವರ್ ಅನ್ನು ತೆರೆದಿದ್ದಾರೆ. ಇದರಲ್ಲಿ ಮೊದಲನೆಯದ್ದು ಖಾಲಿ ಕವರ್, 2ನೆಯ ಕವರ್ ನಲ್ಲಿ ಪೇಪರ್ ನೊಳಗಿಟ್ಟ ಒಂದು ಡಾಲರ್, 3ನೆಯ ಕವರ್ 10 ದಿರಮ್, 4ನೆಯ ಕವರ್ ನಲ್ಲಿ ನೇಪಾಳದ 20 ರೂ., 5ನೆಯ ಕವರ್ ನಲ್ಲಿ ಸಿಂಗಾಪುರದ 10 ಡಾಲರ್ ದ ಬಿಲ್, 6ನೇಯದ್ದರಲ್ಲಿ Astrology Flopped miserably Once ಎಂದು ಬರೆಯಲಾಗಿತ್ತು. 7ನೇಯರದ್ದರಲ್ಲಿ 10 ರೂ. ನ ಇಂಡಿಯಾದ ಕರೆನ್ಸಿ ಇಡಲಾಗಿತ್ತು.

ಆರು ಖಾಲಿ ಲಕೋಟೆಗಳು ಎಂದು ಉತ್ತರ ನೀಡಿದ ಓರ್ವರು

ಆರು ಖಾಲಿ ಲಕೋಟೆಗಳು ಎಂದು ಉತ್ತರ ನೀಡಿದ ಓರ್ವರು

"ಈ ಸವಾಲನ್ನು ಸ್ವೀಕರಿಸಿರುವ ನಾಲ್ವರು ಉತ್ತರ ನೀಡಲು ಯತ್ನಿಸಿದ್ದಾರೆ. ಆದರೆ ನಾಲ್ವರು ನಿಖರವಾದ ಉತ್ತರ ನೀಡಲು ಸಫಲರಾಗಿಲ್ಲ. ಈ ನಾಲ್ಕು ಉತ್ತರದಲ್ಲಿ ಒಂದು ಕೇಳಿರುವ ಪ್ರಶ್ನೆಗೆ ಹೊರತಾಗಿರುವುದರಿಂದ ಮೂರನ್ನು ಮಾತ್ರ ಪರಿಗಣಿಸಲಾಗಿದೆ. ಇದರಲ್ಲಿ ಓರ್ವರು ಆರು ಖಾಲಿ ಲಕೋಟೆಗಳು ಎಂದು ಉತ್ತರಿಸಿದ್ದಾರೆ. ಮತ್ತೋರ್ವರು ಎಲ್ಲವೂ ಖಾಲಿ ಲಕೋಟೆಗಳು ಎಂದಿದ್ದಾರೆ. ಮತ್ತೊಬ್ಬರು ವಿವಿಧ ಲಕೋಟೆಗಳಲ್ಲಿ 500 ರೂ. ನೋಟು, ವೀಳ್ಯ, ಹೂ, ಕುಂಕುಮ- ಭಸ್ಮ, ಗಾಂಧಿ ಫೋಟೊ, ದೈವದ ಪೈಯಿಂಟಿಂಗ್ ಫೋಟೋ ಎಂದು ಉತ್ತರಿಸಿದ್ದಾರೆ. ಈ ಮೂಲಕ ಎಲ್ಲಾ ಉತ್ತರಗಳು ತಪ್ಪಾಗಿದೆ. ಈ ಮೂಲಕ ಜೋತಿಷ್ಯ ಸುಳ್ಳು ಎಂಬ ತಮ್ಮ ವಾದವೇ ಗೆದ್ದಿದೆ" ಎಂದು ನರೇಂದ್ರ ನಾಯಕ್ ಹೇಳಿದ್ದಾರೆ.

ಜ್ಯೋತಿಷ್ಯಕ್ಕೆ ಸವಾಲೊಡ್ಡಿದ್ದ ಫ್ರೊ.ನರೇಂದ್ರ ನಾಯಕ್

ಜ್ಯೋತಿಷ್ಯಕ್ಕೆ ಸವಾಲೊಡ್ಡಿದ್ದ ಫ್ರೊ.ನರೇಂದ್ರ ನಾಯಕ್

ಈ ಮೂಲಕ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಜ್ಯೋತಿಷ್ಯಕ್ಕೆ ಸವಾಲೊಡ್ಡಿದ್ದಾರೆ. ತಾವು ಸೀಲ್ ಮಾಡಿರುವ ಕವರ್‌ನಲ್ಲಿ ಏನಿದೆ ಎಂದು ಹೇಳಿದ 50 ಮಂದಿಗೆ ತಲಾ 1ಲಕ್ಷ ರೂ. ಬಹುಮಾನ ಘೋಷಿಸಿದ್ದರು. ತಾಂಬೂಲ ಪ್ರಶ್ನೆಯ ಹಿನ್ನೆಲೆಯಲ್ಲಿ ಜೋತಿಷ್ಯಕ್ಕೆ ಸವಾಲೆಸೆದಿದ್ದರು. ಅವರು ಮೇ 26ರಂದು ಬೆಳಗ್ಗೆ 11.33 ಗಂಟೆಗೆ ಏಳು ಲಕೋಟೆಗಳನ್ನು ಸೀಲ್ ಮಾಡಿ ಇಟ್ಟಿದ್ದರು.

ಅದರಲ್ಲಿ ಕರೆನ್ಸಿ, ಕಾಗದಗಳನ್ನು ಇಟ್ಟಿದ್ದರು. ಸವಾಲು‌ ಸ್ವೀಕರಿಸುವವರು ಏಳು ಲಕೋಟೆಗಳಲ್ಲಿ ಆರು ಕವರ್ ಗಳನ್ನು ಆಯ್ಕೆ ಮಾಡಿ ಅದರಲ್ಲಿ ಐದಕ್ಕೆ ನಿಖರವಾದ ಉತ್ತರ ಹೇಳಿದ 50 ಮಂದಿಗೆ ತಲಾ ಒಂದು ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು. ಆ ಕವರ್ ನೊಳಗಡೆ ಕರೆನ್ಸಿ ಇದೆಯೆಂದಾದರೆ ಅದು ಯಾವ ದೇಶದ್ದು, ಸೀರಿಯಲ್ ನಂಬರ್, ಎಷ್ಟು ರೂ. ನೋಟು ಹೀಗೆ ಖಚಿತವಾಗಿ ಹೇಳಬೇಕು. ಅದೇ ರೀತಿ ಕಾಗದವಾದಲ್ಲಿ ಅದು ಖಾಲಿ ಕಾಗದವೇ ಅಥವಾ ಏನು ಬರೆದಿದೆ ಎಂದು ಹೇಳಬೇಕು ಎಂದು ಸವಾಲು ಹಾಕಿದ್ದರು.

ಎಲ್ಲರ ಸಮ್ಮುಖದಲ್ಲಿ ತೆರೆದ ಏಳು ಲಕೋಟೆಗಳು

ಎಲ್ಲರ ಸಮ್ಮುಖದಲ್ಲಿ ತೆರೆದ ಏಳು ಲಕೋಟೆಗಳು

ಮಳಲಿಯಲ್ಲಿನ ಮಂದಿರ - ಮಸೀದಿ ವಿವಾದದ ತಾಂಬೂಲ ಪ್ರಶ್ನೆಯು ಹೊಸ ಹೊಸ ಆಯಾಮವನ್ನು ಹುಟ್ಟುಹಾಕುತ್ತಿದೆ. ಇದೀಗ ಮಂಗಳೂರಿನ ಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಅವರು ತಾಂಬೂಲ ಪ್ರಶ್ನೆಯ ಹಿನ್ನೆಲೆಯಲ್ಲಿ ಜೋತಿಷ್ಯಕ್ಕೆ ಸವಾಲೆಸೆದಿದ್ದಾರೆ. ಅವರು ಶುಕ್ರವಾರ ಬೆಳಗ್ಗೆ 11.33 ಗಂಟೆಗೆ ಏಳು ಲಕೋಟೆಗಳನ್ನು ಸೀಲ್ ಮಾಡಿ ಇಟ್ಟಿದ್ದಾರೆ. ಅದರಲ್ಲಿ ಕರೆನ್ಸಿ, ಕಾಗದಗಳನ್ನು ಇಟ್ಟಿದ್ದಾರೆ. ಸವಾಲು‌ ಸ್ವೀಕರಿಸುವವರು ಏಳು ಲಕೋಟೆಗಳಲ್ಲಿ ಆರು ಕವರ್ ಗಳನ್ನು ಆಯ್ಕೆ ಮಾಡಿ ಅದರಲ್ಲಿ ಐದಕ್ಕೆ ನಿಖರವಾದ ಉತ್ತರ ಹೇಳಿದ 50 ಮಂದಿಗೆ ತಲಾ ಒಂದು ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ.

ಈ ಸವಾಲಿಗೆ ಉತ್ತರ ನೀಡಲು ಮೇ 30ರ ಮಧ್ಯರಾತ್ರಿಯವರೆಗೆ ಅವಕಾಶವಿತ್ತು. ಆ ಬಳಿಕ ಬರುವ ಉತ್ತರ ಮಾನ್ಯತೆ ಆಗೋದಿಲ್ಲ. ಸವಾಲೆಸೆದ ಲಕೋಟೆಯನ್ನು ಜೂನ್ ಒಂದರಂದು ಬೆಳಗ್ಗೆ 10.30ಕ್ಕೆ ಲೇಡಿಹಿಲ್ ನಲ್ಲಿರುವ ಪ್ರೆಸ್ ಕ್ಲಬ್ ನಲ್ಲಿ ಎಲ್ಲರ ಸಮ್ಮುಖದಲ್ಲಿ ತೆರೆಯಲಾಗುತ್ತದೆ ಎಂದು ಹೇಳಿದ್ದರು.

English summary
The Federation of Indian Rationalists (FIRA) president professor Narendra Nayak said no one has won the open challenge. FIRA had challenged astrologers to predict what was placed in sealed envelopes in the issue of Malali masjid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X